Asianet Suvarna News Asianet Suvarna News

ವರುಣಾದಲ್ಲಿ ಸಿದ್ದರಾಮಯ್ಯ ಸೋಲು ಖಚಿತ: ಸಚಿವ ಅಶ್ವತ್ಥನಾರಾಯಣ ಭವಿಷ್ಯ

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಖಚಿತ. ಅವರು ಒಂದು ಲಕ್ಷ ಮತಗಳ ಅಂತರದಿಂದ ಸೋಲಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಭವಿಷ್ಯ ನುಡಿದರು. 

Karnataka Election 2023 Minister Dr Cn Ashwath Narayan Slams On Siddaramaiah gvd
Author
First Published Apr 21, 2023, 11:49 AM IST

ಮಂಡ್ಯ (ಏ.21): ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಖಚಿತ. ಅವರು ಒಂದು ಲಕ್ಷ ಮತಗಳ ಅಂತರದಿಂದ ಸೋಲಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಭವಿಷ್ಯ ನುಡಿದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್‌ ಜಯರಾಂ ಉಮೇದುವಾರಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕನಕಪುರ ಮತ್ತು ವರುಣಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಕನಕಪುರದ ಜೆಡಿಎಸ್‌ ಮತಗಳು ಸಂಪೂರ್ಣವಾಗಿ ಬಿಜೆಪಿಗೆ ಕಡೆಗೆ ಮುಖ ಮಾಡಲಿವೆ ಎಂದು ವಿಶ್ವಾಸದಿಂದ ಹೇಳಿದರು.

ಈ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಗೆ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೆರಡೂ ನಮಗೆ ವಿರೋಧ. ಗೆಲ್ಲುವುದೊಂದೇ ನಮ್ಮ ಗುರಿ. ಈ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ರಾಜ್ಯ ಮತ್ತಷ್ಟುಅಭಿವೃದ್ದಿ ಕಾಣಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ವರುಣಾ ಹಾಗೂ ಕನಕಪುರ ಕಾಂಗ್ರೆಸ್‌ ಕಟ್ಟಿಹಾಕಲು ಬಿಜೆಪಿ ರಣತಂತ್ರ ರೂಪಿಸಿರುವ ಬಗ್ಗೆ ಕೇಳಿದಾಗ, ನಾವು ಯಾರನ್ನೂ ಕಟ್ಟಿ ಹಾಕೋಕೆ ಹೋಗಿಲ್ಲ. ಗೆಲ್ಲುವುದಕ್ಕೆ ಹೋಗಿರೋದು. ಬಿಜೆಪಿ ಪಕ್ಷ ಜನರ ಪರವಾಗಿರುವ ಪಕ್ಷ . ನಮ್ಮ ಪ್ರತಿ ಪಕ್ಷಗಳೆರಡೂ ಕುಟುಂಬ ಪಕ್ಷಗಳು. ಕೆಲವೇ ಜನಕ್ಕೆ ಮಾತ್ರ ಸೀಮಿತವಾಗಿರುವ ಪಕ್ಷ. 

ಆಶೀರ್ವಾದ ಮಾಡಲು ಪ್ರಧಾನಿ ಮೋದಿ ದೇವರಲ್ಲ: ಸಿದ್ದರಾಮಯ್ಯ

ಈ ಪಕ್ಷ ಗಳು ಪ್ರಸ್ತುತವಾಗಿಲ್ಲ. ಅಪ್ರಸುತವಾಗಿವೆ ಎಂದು ವ್ಯಂಗ್ಯವಾಡಿದರು. ಪಕ್ಷ ಬಿಟ್ಟು ಹೋದ ಶಾಸಕರು ಬಿಜೆಪಿಯನ್ನು ಟಾರ್ಗೆಟ್‌ ಮಾಡಿರುವ ಬಗ್ಗೆ ಕೇಳಿದಾಗ, ಬಿಜೆಪಿ ಪಕ್ಷ ಗಟ್ಟಿಪಕ್ಷ. ಶಕ್ತಿ ಇರೋದಿಕ್ಕೆ ಟಿಕೆಟ್‌ ಕೊಟ್ಟಿಲ್ಲ. ಯಾರಿಗೆ ಟಿಕೆಟ್‌ ಕೊಡಬೇಕು? ಯಾರಿಗೆ ಬಿಡಬೇಕು ಎಂಬ ಸ್ಪಷ್ಟನಿಲುವನ್ನು ನಮ್ಮ ಪಕ್ಷ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್‌ ಪಕ್ಷದಂತೆ ನಮ್ಮದು ಅಸಹಾಯಕ ಪಕ್ಷವಲ್ಲ. ತುಂಬಾ ಜನಕ್ಕೆ ಇವತ್ತು ಟಿಕೆಟ್‌ ಕೊಟ್ಟಿಲ್ಲ ಸದೃಢ ಪಕ್ಷವನ್ನು ಜನರು ಬಯಸುತ್ತಿದ್ದಾರೆ. ಲೀಡರ್‌ಗೆ ಮಣೆ ಹಾಕದೆ ಸಾಮಾನ್ಯ ಕಾರ್ಯಕರ್ತರಿಗೆ ಮಣೆ ಹಾಕುವ ಪಕ್ಷ ಬಿಜೆಪಿ ಪಕ್ಷ. ಬಿಜೆಪಿಗೆ ಈಗ ಮತ್ತಷ್ಟು ಶಕ್ತಿ ಬಂದಿದೆ. ರಾಜ್ಯದಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ರಾಜ್ಯದಲ್ಲಿ ಬಿಜೆಪಿ ಸಾಕಷ್ಟು ಅಭಿವೃದ್ಧಿ ಮಾಡಿದೆ. ಮೀಸಲಾತಿ ನೀತಿಯನ್ನು ಬಿಜೆಪಿ ಕೊಟ್ಟಿದೆ. ಎಲ್ಲರೂ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ. ಮಂಡ್ಯದಲ್ಲಿ ನಮಗೆ ಎದುರಾಳಿ ಜೆಡಿಎಸ್‌. ಜೆಡಿಎಸ್‌ ಪಕ್ಷ ಮಂಡ್ಯ ಜಿಲ್ಲೆಯಲ್ಲಿ ಪ್ರಬಲವಾಗಿದೆ. ಮಂಡ್ಯ ಜಿಲ್ಲೆ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಮತ ಕೊಡಿ ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕಾಂಗ್ರೆಸ್‌ ಸ್ಟಾರ್‌ ಪಟ್ಟಿಯಲ್ಲಿ ದೇಶದ್ರೋಹಿಗಳು: ಅರುಣ್‌ ಸಿಂಗ್‌ ಟೀಕೆ

ನೋಡುತ್ತಿರಿ, ವರುಣಾದಲ್ಲಿ ಸಿದ್ಧರಾಮಯ್ಯನವರು ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಸೋಲಲಿದ್ದಾರೆ. ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಬಿಜೆಪಿ ಪಕ್ಷಕ್ಕೆ ಮಾತ್ರ ಇರುವುದು. ಕನಕಪುರದ ಜೆಡಿಎಸ್‌ ಮತಗಳೂ ಬಿಜೆಪಿ ತೆಕ್ಕೆಗೆ ಬೀಳುವುದು ಕೂಡ ಖಂಡಿತ
-ಡಾ.ಸಿ.ಎನ್.ಅಶ್ವತ್ಥನಾರಾಯಣ ಸಚಿವ

Latest Videos
Follow Us:
Download App:
  • android
  • ios