ಕಾಂಗ್ರೆಸ್ ಪಕ್ಷ ಸರ್ಕಸ್ ಕಂಪನಿ ಇದ್ದಂತೆ, ಜೋಕರಗಳೇ ಹೆಚ್ಚು: ಸಚಿವ ಶ್ರೀರಾಮುಲು
ಕಾಂಗ್ರೆಸ್ ಪಕ್ಷದಲ್ಲಿ ಜೋಕರ್‌ಗಳು ಹೆಚ್ಚಾಗಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ಕಸ್ ಕಂಪನಿ ಇದ್ದಂತೆ, ಇಲ್ಲಿ ಜೋಕರ್‌ಗಳು ಹೆಚ್ಚಾಗಿ ಕಾಣುತ್ತಾರೆ ಎಂದರು.
ಗಂಗಾವತಿ (ಏ.30): ಕಾಂಗ್ರೆಸ್ ಪಕ್ಷದಲ್ಲಿ ಜೋಕರ್‌ಗಳು ಹೆಚ್ಚಾಗಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ಕಸ್ ಕಂಪನಿ ಇದ್ದಂತೆ, ಇಲ್ಲಿ ಜೋಕರ್‌ಗಳು ಹೆಚ್ಚಾಗಿ ಕಾಣುತ್ತಾರೆ ಎಂದರು. ಕಾಂಗ್ರೆಸ್ಸಿನವರಿಗೆ ಸೋಲಿನ ಭೀತಿ ಉಂಟಾಗಿದ್ದು, ಈ ಕಾರಣಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಬ್ರೇಕ್ ಫೇಲಾಗಿದೆ, ಇದರಿಂದ ಮುಂದೆ ಓಡುತ್ತಿಲ್ಲ, ಅವರ ಎಂಜಿನ್ ಕೆಟ್ಟು ಗಾಲಿ ಸಹ ಪಂಕ್ಚರ್ ಆಗಿದೆ ಎಂದರು.
ಜನಾರ್ದನ ರೆಡ್ಡಿ ಅವರು ನನಗೆ ಬಹಳ ಆತ್ನೀಯರು ಆದರೆ ಬಿಜೆಪಿ ಸಿದ್ಧಾಂತಕ್ಕೆ ಅನುಗುಣವಾಗಿ ನಡೆಯುವೆ. ನಮ್ಮ ಅಭ್ಯರ್ಥಿಗಳ ಗೆಲವು ನಮ್ಮ ಗುರಿಯಾಗಿದೆ ಎಂದರು. ರಾಹುಲ್ ಗಾಂಧಿಗೆ ಬಿಜೆಪಿ ನಾಯಕರನ್ನು ಬೈಯ್ಯುವುದೇ ಕೆಲಸವಾಗಿದೆ. ಅವರು ಬೈದಷ್ಟುಬಿಜೆಪಿಗೆ ಶುಭವಾಗುತ್ತದೆ. ರಾಜ್ಯದಲ್ಲಿ 140 ಸ್ಥಾನ ಬಿಜೆಪಿಗೆ ಬರುತ್ತವೆ. ಇದರಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರಿಗೆ ಬಿಜೆಪಿ ದೊಡ್ಢ ಹುದ್ದೆ ನೀಡಿತ್ತು ಆದರೆ ಪಕ್ಷ ತ್ಯಜಿಸಿರುವದು ಸರಿಯಲ್ಲ ಎಂದು ಹೇಳಿದರು.
ಮಸಾಲಾ ಜಯರಾಂ ಸಚಿವರಾಗುವುದು ನಿಶ್ಚಿತ: ರಾಜ್ಯಸಭಾ ಸದಸ್ಯ ಜಗ್ಗೇಶ್
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ದೆಹಲಿ ಶಾಸಕ ಅಜಯ್ ಮಹಾವರ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಪ್ರಭಾರಿಗಳಾದ ಪ್ರಭು ಕಪಗಲ್, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ, ಸಂತೋಷ ಕೆಲೋಜಿ, ನೆಕ್ಕಂಟಿ ಸೂರಿಬಾಬು, ನಗರ ಮಂಡಲ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಗ್ರಾಮೀಣ ಮಂಡಲ ಅಧ್ಯಕ್ಷ ಚೆನ್ನಪ್ಪ ಮಳಗಿ, ಮಾಧ್ಯಮ ವಕ್ತಾರ, ವೀರಭದ್ರಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕಾಂಗ್ರೆಸ್ ನೀಡಿದ್ದ ಅನುದಾನ ಇಳಿಸಿದ್ದು ಎಚ್‌ಡಿಕೆ: ಜಮೀರ್ ಅಹಮದ್ ಖಾನ್
ಶ್ರೀರಾಮುಲು ರೋಡ್ ಶೋ: ಪಟ್ಟಣದಲ್ಲಿ ಸಚಿವ ಬಿ.ಶ್ರೀರಾಮುಲು ರೋಡ್ ಶೋ ನಡೆಸಿ, ಶಾಸಕ ಬಸವರಾಜ ದಡೇಸೂಗುರು ಪರ ಮತಯಾಚಿಸಿದರು. ಮೆಲುಗಡೆ ಅಗಸಿಯಿಂದ ಆರಂಭವಾದ ರೋಡ್ ಶೋ ರಾಜಬೀದಿ ಮುಖಾಂತರ ಕನಕಾಚಲಪತಿ ದೇವಸ್ಥಾನ ಮುಂಭಾಗದಿಂದ ವಾಲ್ಮೀಕಿ ವೃತ್ತದವರೆಗೆ ನಡೆಯಿತು.ರೋಡ್ ಶೋನಲ್ಲಿ ಭಾಗವಹಿಸಿದ್ದ ಸಾವಿರಾರು ಕಾರ್ಯಕರ್ತರು ಮೋದಿ, ಶಾ,ನಡ್ಡಾ, ಬಿಎಸ್‌ವೈ, ಬೊಮ್ಮಾಯಿ ಹಾಗೂ ಶ್ರೀರಾಮುಲು ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಮುಲು ಅಭಿಮಾನಿಗಳತ್ತ ಕೈಬೀಸಿ ಬಿಜೆಪಿ ಮತ ಚಲಾಯಿಸಿ ಮತ್ತೊಮ್ಮೆ ದಡೇಸೂಗುರು ಗೆಲ್ಲಿಸುವಂತೆ ಕೋರಿದರು. ಅಭಿಮಾನಿಗಳು, ಪಕ್ಷ ಕಾರ್ಯಕರ್ತರು ಶ್ರೀರಾಮುಲುಗೆ ಹೂಮಾಲೆ ಹಾಕಿ ಸಂತಸಪಟ್ಟರು.