ಕನ​ಕ​ಪುರ ಕ್ಷೇತ್ರ​ದಲ್ಲಿ ನಾನು ಸ್ಪರ್ಧೆ ಮಾಡಿ​ರು​ವುದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿವ​ಕು​ಮಾರ್‌ ಕುಟುಂಬ​ದ​ವ​ರಲ್ಲಿ ಭಯ ತರಿ​ಸಿದೆ ಎಂದು ಬಿಜೆಪಿ ಅಭ್ಯ​ರ್ಥಿ ಆರ್‌.ಅ​ಶೋಕ್‌ ಪ್ರತಿ​ಕ್ರಿ​ಯಿ​ಸಿ​ದ​ರು. 

ಕನಕಪುರ (ಏ.27): ಕನ​ಕ​ಪುರ ಕ್ಷೇತ್ರ​ದಲ್ಲಿ ನಾನು ಸ್ಪರ್ಧೆ ಮಾಡಿ​ರು​ವುದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವಕು​ಮಾರ್‌ ಕುಟುಂಬ​ದ​ವ​ರಲ್ಲಿ ಭಯ ತರಿ​ಸಿದೆ ಎಂದು ಬಿಜೆಪಿ ಅಭ್ಯ​ರ್ಥಿ ಆರ್‌.ಅ​ಶೋಕ್‌ ಪ್ರತಿ​ಕ್ರಿ​ಯಿ​ಸಿ​ದ​ರು. ತಾಲೂ​ಕಿನ ಶ್ರೀ ಕ್ಷೇತ್ರ ಮರ​ಳೇ​ಗವಿ ಮಠದಲ್ಲಿ ಹಿರಿಯ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದು ಶ್ರೀ ಮುಮ್ಮಡಿ ಶಿವರುದ್ರ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದ ಅಭ್ಯರ್ಥಿಯಾದ ನಂತರ ಡಿ.ಕೆ ಶಿವಕುಮಾರ್‌ ಶ್ರೀಮತಿಯವರು ಕೂಡ ಚುನಾವಣಾ ಪ್ರಚಾರ ನಡೆಸುವಂತಾ​ಗಿದೆ. 

ನಾನು ಎಲ್ಲೆಲ್ಲಿ ಹೋಗಿ ಚುನಾ​ವಣಾ ಪ್ರಚಾರ ಮುಗಿಸಿ ಬರುತ್ತಿ​ದ್ದೆನೊ ಅಲ್ಲಿಗೆ ಸಂಸದ ಡಿ.ಕೆ.ಸುರೇಶ್‌ ಕೂಡ ಹೋಗಿ ಬರುತ್ತಿದ್ದಾರೆ. ಇದನ್ನು ನೋಡಿದರೆ ಅವರಿಗೆ ಎಷ್ಟುಭಯ ಕಾಡುತ್ತಿದೆ ಎಂಬುದು ತಿಳಿಯುತ್ತಿದೆ ಎಂದು ಹೇಳಿ​ದ​ರು. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಾತವರಣ ನಿರ್ಮಾಣವಾಗಿದೆ. ಶಿವ​ಕು​ಮಾರ್‌ ಹಾಗೂ ಕುಮಾರಸ್ವಾಮಿ ಜೋಡೆತ್ತಿನ ಪರಿಸ್ಥಿತಿ ಹಾಗೂ ನಡವಳಿಕೆಯನ್ನು ನೀವು ನೋಡಿದ್ದೀರಿ. ಕ್ಷೇತ್ರದಲ್ಲಿ ದಿನ ನಿತ್ಯ ಗಲಾಟೆಗಳು ನಡೆ​ಯು​ತ್ತಿವೆ. ಅವ​ರಿ​ಬ್ಬರು ಮತ್ತೆ ಜೋಡೆತ್ತಾದರೆ ನಿಮ್ಮ​ಗಳ ಪರಿ​ಸ್ಥಿತಿ ಏನಾ​ಗು​ತ್ತದೆ ಎಂಬು​ದನ್ನು ಆಲೋ​ಚನೆ ಮಾಡಿ ಎಂದು ಜೆಡಿ​ಎಸ್‌ ಕಾರ್ಯ​ಕ​ರ್ತರಿಗೆ ಸಲಹೆ ನೀಡಿ​ದ​ರು. 

ಡಿಕೆಶಿಗೆ ಠಕ್ಕರ್‌ ಕೊಡಬಲ್ಲ ವ್ಯಕ್ತಿ ನಾನೇ ಆಗಿದ್ದು, ಕನಕಪುರ ಪಾರು ಮಾಡುವೆ: ಸಚಿವ ಅಶೋಕ್‌

ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಡಿ.ಕೆ.ಶಿವಕುಮಾರ್‌ ವಿರೋಧಿಗಳು ಒಟ್ಟಾಗಿ ಚುನಾವಣೆ ಮಾಡಿದರೆ ಅವ​ರನ್ನು ಮಣಿಸಬಹುದು. ನಾವು ಸುಲ​ಭ​ವಾಗಿ ಗೆಲ್ಲು​ತ್ತೇವೆ ಎನ್ನುವ ಅವರ ಭ್ರಮೆಗೆ ತಕ್ಕ ಉತ್ತರ ನೀಡಬಹುದು. ಡಿ.ಕೆ.​ಶಿವಕುಮಾರ್‌ ನಡೆಗೆ ಅವರ ಪಕ್ಷದವರೇ ಬೇಸತ್ತು ಹೋಗಿದ್ದಾರೆ. ನನಗೆ ಅವರ ಎಷ್ಟೋ ಕಾರ್ಯಕರ್ತರು ಫೋನ್‌ ಮಾಡಿ ಬೆಂಬಲ ಕೊಡುತ್ತಿ​ದ್ದಾರೆ ಎಂದ​ರು. ಕನಕಪುರದಲ್ಲಿ ಗೆದ್ದರೆ ವರಿಷ್ಠರು ಮುಖ್ಯಮಂತ್ರಿ ಮಾಡುತ್ತಾ​ರೆಯೇ ಎಂಬ ಪ್ರಶ್ನೆಗೆ ಅ​ಶೋಕ್‌ ಮುಂದೆ ಏನು ಬೇಕಾದರೂ ಆಗಬಹುದು. ಆ ಬಗ್ಗೆಯೂ ವರಿಷ್ಠರು ನಿರ್ಧಾರ ಮಾಡಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು.

ನಿರ್ಭೀ​ತಿಯಿಂದ ಚುನಾ​ವಣೆ ಎದುರಿಸಿ: ಕಳೆದ ಇಪ್ಪತೈದು ವರ್ಷಗಳ ನಂತರ ಕ್ಷೇತ್ರದ ಮತದಾರರು ನಿರ್ಭಿತಿಯ ಚುನಾವಣೆ ನೋಡುವಂತಾಗಿದೆ ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿ​ದ​ರು. ಕ್ಷೇತ್ರದ ಗಡಿಭಾಗವಾದ ಹುಣಸನಹಳ್ಳಿಯ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಬೃಹತ್‌ ಮೆರವಣಿಗೆ ಮೂಲಕ ಬಸ್‌ ನಿಲ್ದಾಣದವರೆಗೆ ಸಾಗಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಲವಂತದ, ಭಯದ ವಾತಾವರಣದಲ್ಲಿ ಮತದಾನ ಮಾಡುವ ಕಾಲ ಈಗಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಮತದಾನ ಮಾಡುವ ಕಾಲ ಈಗ ಬಂದಿದೆ. 

ಮಾಜಿ ಸಿಎಂ ಸಿದ್ದರಾಮಯ್ಯರವರು ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರೆಂದು ತೆಗಳಿದ್ದಾರೆ. ಜಾತಿ, ಸಮುದಾಯವನ್ನು ತೇಜೋವಧೆ ಮಾಡಿದ್ದರೆ ಇಂತಹ ಗುರುತರ ಆರೋಪ ಮಾಡಬೇಕಾದರೆ ದಾಖಲೆ ಸಮೇತ ಹೇಳಬೇಕು. ಇವರ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅವಮಾನಿಸಿ ಅವರಿಂದ ರಾಜೀನಾಮೆ ಪಡೆದಿದ್ದು ಜನ ಮರೆತಿಲ್ಲ. ಸಿದ್ದರಾಮಯ್ಯರ ಮೇಲೆ ಎಸಿಬಿ, ಲೋಕಾಯುಕ್ತ ಹಾಗೂ ಕೋರ್ಟುಗಳಲ್ಲಿ 65 ಕೇಸ್‌ಗಳು ದಾಖಲಾಗಿವೆ. ಅದರೆ ಬಸವರಾಜ ಬೊಮ್ಮಾಯಿ ಮೇಲೆ ಒಂದೇ ಒಂದು ಪ್ರಕ​ರ​ಣ​ವಿ​ಲ್ಲದೆ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿರುವುದನ್ನು ಮರೆಯಬಾರದು ಎಂದು ಹೇಳಿ​ದ​ರು.

ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ‌: ಸಚಿವ ಅಶೋಕ್

ಈ ಕ್ಷೇತ್ರದಲ್ಲಿ ಹಿಂದೆ ನಡೆಯುತ್ತಿದ್ದ ಚುನಾವಣೆಯೇ ಬೇರೆ, ಈಗ ನಡೆಯುತ್ತಿರುವ ಚುನಾವಣೆ ವ್ಯವಸ್ಥೆಯೇ ಬೇರೆಯಾಗಿದೆ. ಮೋಸ, ವಂಚನೆ ನಡೆಸಲು ಸಾಧ್ಯವಿಲ್ಲ. ಕ್ಷೇತ್ರವನ್ನು ಅತಿಸೂಕ್ಷ್ಮ ಕ್ಷೇತ್ರವಾಗಿ ಪರಿಗಣಿಸಿ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡುವುದರ ಜೊತೆಗೆ ಪ್ರತಿ ಮತಗಟ್ಟೆಯಲ್ಲೂ ಸಿಸಿ ಕ್ಯಾಮರಾ ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾ​ಗಿದೆ. ಈ ಬಾರಿ ಚುನಾವಣೆ ಅತ್ಯಂತ ಶಿಸ್ತುಬದ್ಧವಾಗಿ ನಡೆಯಲಿದ್ದು ಜನರು ಯಾರಿಗೂ ಹೆದರದೆ ಬಂದು ಮತದಾನ ಮಾಡಿ ಮೋದೀಜಿ ಅವ​ರನ್ನು ಬೆಂಬ​ಲಿ​ಸುವ ಮೂಲಕ ಡಬಲ್‌ ಎಂಜಿನ್‌ ಸರ್ಕಾರ ಮತ್ತೂಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಅಶೋಕ್‌ ತಿಳಿ​ಸಿ​ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.