ಬಿಜೆಪಿ ಗೆಲುವು ಕೊಳ್ಳೇಗಾಲದಿಂದಲೇ ಆಗಲಿ: ಬಿ.ವೈ.ವಿಜಯೇಂದ್ರ

ಶಾಸಕ ಮಹೇಶ್‌ ದಲಿತರ ಧ್ವನಿ, ಅವರು ಈ ಬಾರಿ ಗೆದ್ದೆ ಗೆಲ್ಲುತ್ತಾರೆ. ಗೆದ್ದು ಮಂತ್ರಿಯಾಗುತ್ತಾರೆ. ಅವರ ಗೆಲುವು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಅವರ ಗೆಲುವು ಮಾತ್ರವಲ್ಲ ನನಗೂ ಅಭೂತಪೂರ್ವ ಬೆಂಬಲ ನೀಡಿದಂತಾಗುತ್ತದೆ. 

Karnataka Election 2023 Let BJPs victory be by Kollegala Says BY Vijayendra gvd

ಕೊಳ್ಳೇಗಾಲ (ಏ.22): ಶಾಸಕ ಮಹೇಶ್‌ ದಲಿತರ ಧ್ವನಿ, ಅವರು ಈ ಬಾರಿ ಗೆದ್ದೆ ಗೆಲ್ಲುತ್ತಾರೆ. ಗೆದ್ದು ಮಂತ್ರಿಯಾಗುತ್ತಾರೆ. ಅವರ ಗೆಲುವು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಅವರ ಗೆಲುವು ಮಾತ್ರವಲ್ಲ ನನಗೂ ಅಭೂತಪೂರ್ವ ಬೆಂಬಲ ನೀಡಿದಂತಾಗುತ್ತದೆ. ಹಾಗಾಗಿ, ಮತದಾರರು ಈ ಬಾರಿ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಸಿದ್ದಯ್ಯನಪುರದಿಂದ ಬೊಮೇಶ್ವರ ದೇವಾಲಯಕ್ಕೆ ತೆರೆದ ವಾಹನದ ಮೂಲಕ ರೋಡ್‌ ಶೋ ನಡೆಸಿ, ಕೊಳ್ಳೇಗಾಲದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ದೇವಲ ಮಹರ್ಷಿ ವೃತ್ತದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶಾಸಕ ಮಹೇಶ್‌ ಅವರನ್ನು ಗೆಲ್ಲಿಸಿ ಎಂದು ಕೇಳಲು ಕ್ಷೇತ್ರದ ಜನರ ಬಳಿ ಪ್ರಾರ್ಥಿಸಲು ಬಂದಿದ್ದೇನೆ. ಅವರು ಖಂಡಿತ ನೂರಕ್ಕೆ ನೂರರಷ್ಟುಗೆದ್ದೆ ಗೆಲ್ತಾರೆ , ಹೆಚ್ಚು ಮತಗಳಿಂದ ಗೆಲುವು ಕಾಣಲಿದ್ದಾರೆ ಎಂಬ ವಿಶ್ವಾಸವಿದೆ. ಮೇ 13ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಕ್ಷೇತ್ರಗಳ ಪೈಕಿ ಕೊಳ್ಳೇಗಾಲದ ಫಲಿತಾಂಶದಲ್ಲಿ ಮಹೇಶ್‌ ಹೆಚ್ಚುಮತಗಳಿಂದ ಗೆಲ್ಲುವಂತಹ ಸುದ್ದಿ ಕೇಳಬೇಕು. ಮತದಾರರು ಅವರನ್ನು ಬೆಂಬಲಿಸಿ ಅವರನ್ನು ಬೆಂಬಲಿಸಿ ಆಶೀರ್ವದಿಸಿದರೆ ನನಗೂ ಅತೀವ ಬೆಂಬಲ. ಪ್ರೀತಿ ವಿಶ್ವಾಸ ತೋರಿಸಿದಂತೆಯೇ ಸರಿ ಎಂದು ಮನವಿ ಮಾಡಿದರು.

ಡಿಕೆ ಸಹೋ​ದ​ರ​ರಿಗೆ ಅಭ​ದ್ರತೆ ಕಾಡು​ತ್ತಿದೆ: ಸಚಿವ ಅ​ಶೋಕ್‌

ಕೊಳ್ಳೇಗಾಲಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. 2ವರ್ಷಗಳ ಕಾಲ ಲಯನ್ಸ್‌ ಶಾಲೆಯಲ್ಲಿ ಓದಿದ್ದೇನೆ. ಇಲ್ಲಿಗೆ ಬರಲೂ ನನಗೆ ಹೆಮ್ಮೆ ಮತ್ತು ಬಹಳ ಸಂತೋಷ ಎನಿಸುತ್ತದೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದ ಸಂಧರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ತಂತ್ರಗಾರಿಕೆ ವೇಳೆ ಅಂತಹ ಸಂದಿಗ್ಧತೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು. ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯ ಮಂತ್ರಿಗಳಾಬೇಕೆಂದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ 15 ಶಾಸಕರು ಹೊರ ಬಂದರು.

ಅಂತೆಯೇ, ಅಂದು ಶಾಸಕ ಮಹೇಶ್‌ ಅವರು ನಾನು ಬಿಎಸ್ಪಿಯಿಂದ ಹೊರ ಬಂದರೂ ಪರವಾಗಿಲ್ಲ. ಬಿಎಸ್‌ವೈ ಮುಖ್ಯ ಮಂತ್ರಿಯಾಗಬೇಕೆಂಬ ಬಿಜೆಪಿಗೆ ಷರತ್ತು ರಹಿತ ಬೆಂಬಲ ನೀಡಿದ್ದಾರೆ. ಇಂದು ಬಿಜೆಪಿ ಆಡಳಿತ ನಡೆಸುತ್ತಿರುವುದು. ಬಿ.ಎಸ್‌. ಯಡಿಯೂರಪ್ಪ 2 ವರ್ಷಕಾಲ ಮತ್ತೆ ಸಿಎಂ ಆಗಲೂ ಮಹೇಶ ಅವರ ಸಹಕಾರ. ಹಾಗಾಗಿ, ಮತದಬಾಂಧವರು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು. ರಾಜ್ಯದಲ್ಲಿ ಮೇ10 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮಹೇಶ ಅವರು ರಾಜ್ಯದ ದಲಿತರ, ಧಮನಿತರ ಧ್ವನಿಯಾಗಿ ಹೊರಹೊಮ್ಮಿದ್ದಾರೆ. 

ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕಿದೆ. 2014ರಲ್ಲಿ ಮೋದಿ ಅವರು ಪ್ರಧಾನಿಯಾಗಿದ್ದ ವೇಳೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದರು. ಕೇಂದ್ರದಿಂದ ಅನೇಕ ಜನಪರ ಯೋಜನೆ ಬಂದರು ರಾಜ್ಯದಲ್ಲಿದ್ದ ಕಾಂಗ್ರೆಸ್‌ ಅನುಷ್ಠಾನಗೊಳಿಸಲಿಲ್ಲ. ಹಾಗಾಗಿ, ಬಿಜೆಪಿ ಕಾರ್ಯಕರ್ತರೆಲ್ಲರೂ ಶಪಥ ಮಾಡಬೇಕಿದೆ. ಮತ್ತೆ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ ತರಬೇಕು. 224 ಕ್ಷೇತ್ರಗಳ ಮೊದಲ ಗೆಲುವು ಕೊಳ್ಳೇಗಾಲದಿಂದಲೆ ಆರಂಭವಾಗಲಿ ಎಂದು ಕೈ ಮುಗಿದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಎಸ್‌. ಮಹೇಂದರ್‌, ಬಿಜೆಪಿ ಅಭ್ಯರ್ಥಿ ಎನ್‌. ಮಹೇಶ್‌, ಸೋಮಣ್ಣ ಉಪ್ಪಾರ್‌, ರಾಜೇಶ್‌, ಜಿಲ್ಲಾ ಬಿಜೆಪಿ ವಕ್ತಾರ ಬಸವರಾಜಪ್ಪ, ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಮಾಜಿ ನಿರ್ದೇಶಕಿ ಜ್ಯೋತಿ ರೇಚಣ್ಣ, ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷ ಜಕ್ಕಾವುಲ್ಲಾ, ನಗರಸಭೆ ಸದಸ್ಯ ಚಿಂತು ಪರಮೇಶ್‌, ಓಬಿಬಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ, ಇನ್ನಿತರರು ಇದ್ದರು.

ದೇವರು ಮೆಚ್ಚುವ ಹಾಗೆ ಸೋಮಣ್ಣ ಗೆಲುವಿಗೆ ಶ್ರಮಿಸುವೆ: ಬಿ.ವೈ.ವಿಜಯೇಂದ್ರ

ಗೆದ್ದ ಮೇಲೆ ಬಿಎಸ್‌ವೈ ನಿವಾಸಕ್ಕೆ ಬರಲಿಲ್ಲ: ಈ ಹಿಂದೆ ಕೊಳ್ಳೇಗಾಲ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ನಿಂತು ಗೆದ್ದ ಬಿಜೆಪಿ ಅಭ್ಯರ್ಥಿ ಗೆದ್ದು 24 ತಾಸು ಸಹ ಆಗಿರಲಿಲ್ಲ. ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರ ಮನೆಗೆ ಬಾರದೆ, ಬೇರೆ ಕಡೆ ತೆರಳಿ ಅವರ ಬುದ್ಧಿ ತೋರಿಸಿದ್ದರು. ಅಂತಹ ವ್ಯಕ್ತಿಯನ್ನು ಈ ಕ್ಷೇತ್ರದಲ್ಲಿ ನಾವು ನೋಡಿದ್ದೇವೆ ಎಂದು ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ ಹೆಸರೇಳದೆ ಕುಟುಕಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios