ಡಿಕೆ ಸಹೋ​ದ​ರ​ರಿಗೆ ಅಭ​ದ್ರತೆ ಕಾಡು​ತ್ತಿದೆ: ಸಚಿವ ಅ​ಶೋಕ್‌

ವರಿಷ್ಠರ ಸೂಚನೆಯಂತೆ ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರ ಮಾರ್ಗದರ್ಶನದಂತೆ ಪ್ರಚಾರ ಕಾರ್ಯ ಆರಂಭಿಸಿರುವುದಾಗಿ ಬಿ​ಜೆಪಿ ಅಭ್ಯ​ರ್ಥಿಯಾದ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

Karnataka Election 2023 DK Brothers are Insecure Says Minster R Ashok gvd

ಕನಕಪುರ (ಏ.22): ವರಿಷ್ಠರ ಸೂಚನೆಯಂತೆ ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರ ಮಾರ್ಗದರ್ಶನದಂತೆ ಪ್ರಚಾರ ಕಾರ್ಯ ಆರಂಭಿಸಿರುವುದಾಗಿ ಬಿ​ಜೆಪಿ ಅಭ್ಯ​ರ್ಥಿಯಾದ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು. ನಗರದ ದೇಗುಲಮಠ, ಕಬ್ಬಾಳಮ್ಮ ದೇವಸ್ಥಾನ, ಮರಳೇಗವಿ ಮಠಗಳಿಗೆ ಭೇಟಿ ನೀಡಿದ ತರು​ವಾಯ ಸಾತನೂರು, ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮತ ಪ್ರಚಾರದ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವರು, ತಾಲೂಕಿನಲ್ಲಿ ಪಕ್ಷದ ಪ್ರಚಾರಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿರುವುದು ಅದರಲ್ಲೂ ಹೆಚ್ಚಾಗಿ ಯುವಕರು ಬೆಂಬಲ ನೀಡುತ್ತಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಾಂತಾಗಿದೆ. 

ಈ ಬಾರಿ ಕ್ಷೇತ್ರದ ಜನ ಬದಲಾವಣೆ ಬಯಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸತತವಾಗಿ ಏಳು ಬಾರಿ ಶಾಸಕರಾಗಿರುವ ಶಿವಕುಮಾರ್‌ ಹಾಗೂ ಮೂರು ಬಾರಿ ಸಂಸದರಾದ ಡಿ.ಕೆ.ಸುರೇಶ್‌ ಅವರಿಗೆ ತಾವು ಸಲ್ಲಿಸಿರುವ ನಾಮಪತ್ರದ ಬಗ್ಗೆ ಅವರಿಗೇ ಅನುಮಾನವಿದೆ. ಅದನ್ನು ಮರೆಮಾಚಲು ಬಿಜೆಪಿ ಪಕ್ಷದ ವಿರುದ್ಧ ತಿರುಗಿಸಿ ಜನರ ಅನುಕಂಪ ಗಿಟ್ಟಿಸಿ ಕೊಳ್ಳಲು ಪ್ರಯತ್ನ ನಡೆಸಿರಬಹುದು. ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್‌ ಅವರಿಗೆ ಯಾವ ರೀತಿ ಭಯವಿದೆ ಎಂದರೆ ಕಾಂಗ್ರೆಸ್‌ ಪಕ್ಷ ಘೋಷಣೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ್ದು ನೋಡಿದರೆ ಅವರಿಗೆ ಅಭದ್ರತೆಯ ಆತಂಕ ಕಾಡುತ್ತಿರುವುದು ಸ್ಪಷ್ಟವಾಗಿದೆ ಎಂದರು.

ರಾಜಕೀಯ ಕೃಷಿಗೆ ಕಾಲಿಟ್ಟ ಕೃಷಿ ವಿಜ್ಞಾನಿ ವಿಶುಕುಮಾರ: ಹಲವು ಡಿಗ್ರಿಗಳ ಸರದಾರ ಪುತ್ತೂರು ಆಪ್ ಅಭ್ಯರ್ಥಿ

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ್‌, ನಗರ ಘಟಕದ ಅಧ್ಯಕ್ಷ ವೆಂಕಟೇಶ್‌,ಭೂ ಮಂಜೂರಾತಿ ಸದಸ್ಯ ರವಿಕುಮಾರ್‌, ನಗರಸಭೆ ಸದಸ್ಯೆ ಮಾಲತಿ ಆನಂದ್‌, ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ನಾಗನಂದ್‌, ತಾಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಶಿವಮುತ್ತು,ಯುವ ಮೋರ್ಚಾ ಅಧ್ಯಕ್ಷ ಸುನೀಲ ಮ​ತ್ತಿ​ತ​ರರು ಹಾಜ​ರಿ​ದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಶೆಟ್ಟರ್‌, ಸವದಿ ತಪ್ಪು ಹೆಜ್ಜೆ: ವಿಧಾನಸಭಾಧ್ಯಕ್ಷ ಕಾಗೇರಿ ಬೇಸರ

ಡಿಕೆಶಿಗೇಕೆ ಭಯ?: ಸಿದ್ದರಾಮಯ್ಯ, ಪರಮೇಶ್ವರ್‌, ಜಾರಕಿಹೊಳಿ, ಎಂ.ಬಿ.ಪಾಟೀಲ ಅವರಿಗೆ ಇಲ್ಲದಂತಹ ಭಯ ಡಿಕೆಶಿ ಅವರಿಗೆ ಏಕೆಂಬುದು ರಾಜ್ಯದ ಜನರಿಗೆ ತಿಳಿದಿದೆ ಎಂದು ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ಟಾಂಗ್‌ ನೀಡಿ​ದ​ರು. ನಗರದ ಶ್ರೀ ದೇಗುಲಮಠಕ್ಕೆ ಭೇಟಿ ನೀಡಿ ಶ್ರೀ ಮಠದ ಹಿರಿಯ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ರೇಸ್‌ನಲ್ಲಿರುವ ಸಿದ್ದರಾಮಯ್ಯ, ಪರಮೇಶ್ವರ್‌, ಕಾಂಗ್ರೆಸ್‌ ಪಕ್ಷದ ಲಿಂಗಾಯತ ನಾಯಕ ಎಂ.ಬಿ.ಪಾಟೀಲ ವಿರುದ್ಧ ಇಲ್ಲದ ಷಡ್ಯಂತ್ರ, ಕುತಂತ್ರ ಇವರ ಮೇಲೆ ಮಾತ್ರ ಯಾಕೆ ಮಾಡುತ್ತಾರೆ ಎಂಬುದು ಅವರಿಗೆ ತಿಳಿದಿದೆ. ಸುಖಾ-ಸುಮ್ಮನೆ ನಮ್ಮ ಕೇಂದ್ರ ಮತ್ತು ರಾಜ್ಯ ನಾಯಕರ ಮೇಲೆ ಆರೋಪ ಮಾಡುವ ಡಿಕೆಶಿ ಸಹೋದರರು ಮೊದಲು ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದರು.

Latest Videos
Follow Us:
Download App:
  • android
  • ios