ಮತದಾನ ಮಾಡಲು ನಮ್ಮ ಮತಗಟ್ಟೆ ಹುಡುಕುವುದು ಹೇಗೆ? ಎಂಬ ಚಿಂತನೆಯೇ ಇಲ್ಲಿದೆ ಸುಲಭ ಮಾರ್ಗ. ಮೊಬೈಲ್‌ನಲ್ಲಿ ಒಂದು ಆ್ಯಪ್‌ ಡೌನ್‌ಲೋಡ್‌ ಮಾಡಿ ಸುಲಭವಾಗಿ ಮತಗಟ್ಟೆಗೆ ಹೋಗಿ.

ಬೆಂಗಳೂರು (ಮೇ 09): ರಾಜ್ಯಾದ್ಯಂತ ನಾಳೆ (ಮೇ 10) ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಮತದಾರರು ತಮ್ಮ ಮತಗಟ್ಟೆ ವಿಳಾಸ ಎಲ್ಲಿದೆ ಎಂದು ಹುಡುಕಿಕೊಂಡು ಹೋಗಲು ಪ್ರಯಾಸ ಪಡುತ್ತಾರೆ. ಆದರೆ, ಮತದಾರರಿಗೆ ಅನುಕೂಲ ಆಗುವಂತೆ ಕೇಂದ್ರ ಚುನಾಣಾ ಆಯೋಗದಿಂದ ಚುನಾವಣಾ ಆ್ಯಪ್‌ ಸಿದ್ಧಪಡಿಸಿದ್ದು, ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಸೀದಾ ಮತಗಟ್ಟೆಗೆ ಗೂಗಲ್‌ ಲೊಕೇಶನ್‌ ಆಧರಿಸಿ ಹೋಗಬಹುದು. 

ಈಗ ಯಾವುದೇ ವಿಚಾರ, ಸ್ಥಳ, ಮಾಹಿತಿ ಬೇಕೆಮದರೂ ಗೂಗಲ್‌ ಮೊರೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳು ಸೇರಿ ಕೆಲವು ಸಣ್ಣ ಪುಟ್ಟ ಸ್ಥಳಗಳ ಬಗ್ಗೆ ಗೂಗಲ್‌ನಲ್ಲಿಯೂ ಮಾಹಿತಿ ಲಭ್ಯವಿರುವುದಿಲ್ಲ. ಜೊತೆಗೆ ಅಂತಹ ಸ್ಥಳಗಳನ್ನು ಗೂಗಲ್‌ ಮ್ಯಾಪ್‌ ಕೂಡ ತೋರಿಸುವುದಿಲ್ಲ. ಹೀಗಾಗಿ, ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಎಲ್ಲ 58,545 ಮತಗಟ್ಟೆಗಳ ವಿವರವನ್ನು ತಿಳಿದುಕೊಳ್ಳಲು ವಿಶೇಷ ವ್ಯವಸ್ಥೆಯನ್ನೂ ಮಾಡಿದೆ. ಮತದಾರರು ಮೊಬೈಲ್‌ ಅಪ್ಲಿಕೇಶನ್‌, ವೆಬ್‌ಸೈಟ್‌ ಹಾಗೂ ಕಾಲ್‌ ಸೆಂಟರ್‌ಗೆ ಕರೆ ಮಾಡುವ ಮೂಲಕ ಮತದಾರರು ತಮ್ಮ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ.

Karnataka Assembly Election 2023 Live Updates: ಮತ ನಮ್ಮೆಲ್ಲರ ಹಕ್ಕು, ತಪ್ಪದೇ ಚಲಾಯಿಸಿ...

1. ಚುನಾವಣಾ ಅಪ್ಲಿಕೇಶನ್‌
ಚುನಾವಣಾ ಆಯೋಗವು ಚುನಾವಣಾ (Chunavana) ಹೆಸರಿನಲ್ಲಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಓಪನ್‌ ಮಾಡಿದಾಗ Search by Epic No ಅಥವಾ Search by Name ಎಂಬ ಎರಡು ಆಯ್ಕೆ ಸಿಗುತ್ತದೆ. ಅದರಲ್ಲಿ ನಾವು Search by Epic No ಆಯ್ಕೆ ಮಾಡಿದರೆ ವೋಟರ್‌ ಐಡಿ ನಂಬರ್‌ ಹಾಕಿದರೆ ನೀವು ಯಾವ ಮತಗಟ್ಟೆಗೆ ಹೋಗಬೇಕು ಎಂಬ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಜೊತೆಗೆ, ಜಿಪಿಎಸ್‌ ಆನ್‌ ಮಾಡಿ ಲೊಕೇಶನ್‌ ಮೂಲಕವೂ ಹೋಗಿ ಮತಗಟ್ಟೆಯನ್ನು ಹುಡುಕಬಹುದು. ಈ ಜಿಪಿಎಸ್‌ ಮ್ಯಾಪ್‌ ಆಧರಿಸಿ ನಿಮ್ಮ ವಾಹನಗಳಲ್ಲಿ ಅಥವಾ ಕಾಲ್ನಡಿಗೆ ಮೂಲಕ ಮತಗಟ್ಟಗೆ ಸುಲಭವಾಗಿ ಹೋಗಬಹುದು. 

ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಿ –Chunavana App
ಐಒಎಸ್‌ ಆಪ್‌ ಡೌನ್‌ಲೋಡ್‌ ಮಾಡಿ – Chunavana App

2. ಚುನಾವಣಾ ಆಯೋಗದ ವೆಬ್‌ಸೈಟ್‌ : 
ಇನ್ನು ನಮ್ಮ ಮೊಬೈಲ್‌ನಲ್ಲಿ ಒಂದು ಅಪ್ಲಿಕೇಶನ್‌ ಡೌನ್‌ಲೋಡ್‌ ಆಗುವುದಿಲ್ಲ ಎಂದು ಹೇಳುವವರಿಗೂ ಮತ್ತೊಂದು ಅವಕಾಶವಿದೆ. ನಿಮ್ಮ ಮೊಬೈಲ್‌ನಲ್ಲಿ ವೆಬ್‌ಸೈಟ್‌ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ, ನಿಮ್ಮ ಮತಗಟ್ಟೆಯನ್ನು ಸುಲಭವಾಗಿ ಹುಡುಕಬಹುದು. ಇಲ್ಲಿಯೂ ಕೂಡ ನಿಮ್ಮ ಮತಗಟ್ಟೆ ತಿಳಿಯಿರಿ ಎಂಬ ಆಯ್ಕೆಯಲ್ಲಿ ನಿಮ್ಮ ಎಪಿಕ್‌ ನಂಬರ್‌ ದಾಖಲಿಸುವ ಮೂಲಕ ನಿಮ್ಮ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದು. ಚುನಾವಣಾ ಆಯೋಗದ ವೆಬ್‌ಸೈಟ್‌ ಕ್ಲಿಕ್‌ ಮಾಡಿ: www.kgis.ksrsac.in

3. ಸಹಾಯವಾಣಿಗೆ ಕರೆ ಮಾಡಿ: 
ನಮಗೆ ಆಂಡ್ರಾಯ್ಡ್‌ ಮೊಬೈಲ್‌ ಬಳಕೆ ಗೊತ್ತಿಲ್ಲ ಎನ್ನುವವರು ಕೂಡ ಯಾವುದೇ ಆ್ಯಪ್‌ ಡೌನ್‌ಲೋಡ್‌ ಮಾಡದೇ, ವೆಬ್‌ಸೈಟ್‌ಗೆ ಭೇಟಿ ನೀಡದೇ ಮತಗಟ್ಟೆಯ ಮಾಹಿತಿ ತಿಳಿದುಕೊಂಡು ಹೋಗಲು ಅವಕಾಶ ಒದಗಿಸಲಾಗಿದೆ. ಇದಕ್ಕಾಗಿ ಮತಗಟ್ಟೆ ಮಾಹಿತಿ ಪಡೆಯಲು 1950 ಅಥವಾ 180042 551950 ನಂಬರ್‌ಗೆ ಕರೆ ಮಾಡಿ ಮತಗಟ್ಟೆಯ ವಿವರ ತಿಳಿದುಕೊಳ್ಳಬಹುದು. ಜೊತೆಗೆ, ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ವಿವರ, ಪಾರ್ಕಿಂಗ್‌ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಆರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ತಿಳಿಯಬಹುದು.

ಶಾಲೆಗೆ ಬರುವ ಸ್ಯಾಂಡಲ್‌ವುಡ್‌ ಸ್ಟಾರ್ಸ್: ಸುದೀಪ್, ಯಶ್, ಡಾಲಿ, ಶಿವಣ್ಣ ಎಲ್ಲಿ ವೋಟ್ ಹಾಕ್ತಾರೆ?

ವೋಟರ್‌ ಕಾರ್ಡ್‌ಗೆ ಪರ್ಯಾಯ ದಾಖಲೆಗಳು: 
ರಾಜ್ಯದ ಪ್ರತಿಯೊಬ್ಬ ಮತದಾರನು ತನ್ನ ಮತವನ್ನು ಚಲಾಯಿಸಲು ಮುಖ್ಯವಾಗಿ ಮತದಾರರ ಗುರುತಿನ ಚೀಟಿ ಹೊಂದಿರಬೇಕು. ಒಂದು ವೇಳೆ ವೋಟರ್‌ ಐಡಿ ಇಲ್ಲವೆಂದರೂ ಮತದಾನ ಮಾಡಲು ಅವಕಾಶನ್ನು ನೀಡಲಾಗಿದೆ. ಯಾವುದೇ ಭಾವಚಿತ್ರವಿರುವ ದಾಖಲೆಯನ್ನು ತೋರಿಸಿ ಮತದಾನ ಮಾಡಬಹುದು. ಮತದಾರರು ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್‌ ಕಾರ್ಡ್, ಕಾರ್ಮಿಕ ಇಲಾಖೆ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ಪಾಸ್‌ಬುಕ್, ಅಂಗವಿಕಲ ಕಾರ್ಡ್‌, ಆಧಾರ್ ಕಾರ್ಡ್‌ ಬಳಕೆ ಮಾಡಿಯೂ ಮತ ಹಾಕಬಹುದು.

Scroll to load tweet…