ಬಿಜೆಪಿ ಗೆದ್ದರಷ್ಟೇ ಕರ್ನಾಟಕ ನಂ.1: ಪ್ರಧಾನಿ ಮೋದಿ ಸಂಕಲ್ಪ

ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವುದು, ದೇಶದ ಸೂಪರ್‌ ಪವರ್‌ ರಾಜ್ಯವನ್ನಾಗಿ ಮಾಡುವುದು ಬಿಜೆಪಿ ಸಂಕಲ್ಪ. ಇಲ್ಲಿ ಬಿಜೆಪಿ ಗೆದ್ದರಷ್ಟೇ ಕರ್ನಾಟಕವನ್ನು ನಂ.1 ಮಾಡಲು ಸಾಧ್ಯವಿದೆ. 

Karnataka Election 2023 Karnataka is No 1 only if BJP wins Says PM Narendra Modi gvd

ಮಂಗಳೂರು/ಅಂಕೋಲಾ/ಬೆಳಗಾವಿ (ಮೇ.04): ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವುದು, ದೇಶದ ಸೂಪರ್‌ ಪವರ್‌ ರಾಜ್ಯವನ್ನಾಗಿ ಮಾಡುವುದು ಬಿಜೆಪಿ ಸಂಕಲ್ಪ. ಇಲ್ಲಿ ಬಿಜೆಪಿ ಗೆದ್ದರಷ್ಟೇ ಕರ್ನಾಟಕವನ್ನು ನಂ.1 ಮಾಡಲು ಸಾಧ್ಯವಿದೆ. ಆದರೆ, ಕಾಂಗ್ರೆಸ್‌ ಮಾತ್ರ ಕರ್ನಾಟಕವನ್ನು ದೆಹಲಿಯ ಕುಟುಂಬದ ನಂ.1 ಎಂಟಿಎಂ ಆಗಿ ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಕೊಳ್ನಾಡು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿ ಗೌರಿಕೆರೆ ಮೈದಾನ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಬುಧವಾರ ಬಿಜೆಪಿಯಿಂದ ಆಯೋಜಿಸಿದ್ದ ಸಮಾವೇಶಗಳಲ್ಲಿ ಮಾತನಾಡಿದ ಅವರು ಕರ್ನಾಟಕದ ಪ್ರಗತಿಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ ಸ್ಥಿರ ಸರ್ಕಾರ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದರು.

ನಾವು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ದೇಶದಲ್ಲಿ ಕರ್ನಾಟಕವನ್ನು ನಂ.1 ಮಾಡುವುದು ಬಿಜೆಪಿಯ ಸಂಕಲ್ಪ. ಕೈಗಾರಿಕೆಯಲ್ಲಿ, ಕೃಷಿ, ಮೀನುಗಾರಿಕೆ, ಕ್ರೀಡಾ ವಿಭಾಗದಲ್ಲಿ ಮೊದಲ ಸ್ಥಾನಕ್ಕೆ ತರುತ್ತೇವೆ. ಆಧುನಿಕ ಮೂಲ ಸೌಕರ್ಯಗಳನ್ನು ಬಲಪಡಿಸಿ ಸೂಪರ್‌ ಪವರ್‌ ರಾಜ್ಯವನ್ನಾಗಿ ಮಾಡುತ್ತೇವೆ. ಇದಕ್ಕಾಗಿ ಜನ ಬಿಜೆಪಿಗೆ ಮತ ನೀಡಬೇಕು. ನಿಮ್ಮ ಪ್ರತಿ ಮತಕ್ಕೂ ರಾಜ್ಯವನ್ನು ನಂ.1 ಮಾಡುವ ಶಕ್ತಿ ಇದೆ ಎಂದರು. ಬಿಜೆಪಿ ಕೈಗೊಂಡ ಜನಕಲ್ಯಾಣ ಯೋಜನೆಗಳನ್ನು ಬುಡಮೇಲು ಮಾಡಲು ಕಾಂಗ್ರೆಸ್‌ ಹೊರಟಿದೆ ಎಂದು ಆರೋಪಿಸಿದ ಮೋದಿ, ಕಾಂಗ್ರೆಸ್‌ ಏನು ಮಾಡಲು ಹೊರಟಿದೆ ಎಂಬುದು ಗೊತ್ತಿದೆಯೇ? 

ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್‌ ಸುರ್ಜೇವಾಲಾ ಕಿಡಿ

ಕಾಂಗ್ರೆಸ್‌ಗೆ ದೆಹಲಿಯಲ್ಲಿರುವ ಕುಟುಂಬಕ್ಕೆ ಈ ರಾಜ್ಯವನ್ನು ನಂಬರ್‌ ವನ್‌ ಎಟಿಎಂ ಮಾಡುವ ಗುರಿಯಷ್ಟೆಇದೆ. ಕಾಂಗ್ರೆಸ್‌ 85 ಪರ್ಸೆಂಟ್‌ ಮೂಲಕ ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆಯಲು ಹೊರಟಿದೆ. ಇದರ ಜತೆಗೆ ಜೆಡಿಎಸ್‌ ಕೂಡ ಇದೆ ಎಂದು ದೂರಿದರು. ದೇಶವನ್ನು ಕೊಳ್ಳೆ ಹೊಡೆಯುವವರಿಂದ ರಕ್ಷಿಸಿ ಸುಭದ್ರ ಬಿಜೆಪಿ ಸರ್ಕಾರ ಆಡಳಿತಕ್ಕೆ ತರಲು ಮತದಾರರು ಬೆಂಬಲ ನೀಡಬೇಕಿದೆ. ನಿಮ್ಮ ಮತಶಕ್ತಿಯಿಂದಾಗಿ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ. ಅದು ಪ್ರಧಾನಿ ಮೋದಿಯ ತಾಕತ್ತು ಅಲ್ಲ, ಮತದಾರರ ತಾಕತ್ತು. ನಮ್ಮ ದೇಶ ಜಗತ್ತಿನಲ್ಲಿ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. 

ಕೆಲವೇ ವರ್ಷಗಳಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮಲಿದೆ. ಈ ಸಂದರ್ಭ ಕರ್ನಾಟಕವೂ ಸೂಪರ್‌ ಪವರ್‌ ಆಗಲು ಇಲ್ಲಿ ಬಿಜೆಪಿಯ ಸ್ಥಿರ ಸರ್ಕಾರ ಬೇಕಾಗಿದೆ. ಇದೇ ನಮ್ಮ ರೋಡ್‌ ಮ್ಯಾಪ್‌ ಕೂಡ ಆಗಿದೆ ಎಂದು ಹೇಳಿದರು. ಕಾಂಗ್ರೆಸ್‌ ಕರ್ನಾಟಕದಲ್ಲಿ ಕಾಂಗ್ರೆಸ್‌ ಶಾಂತಿ ಹಾಗೂ ಅಭಿವೃದ್ಧಿಯ ವಿರೋಧಿ. ಕಾಂಗ್ರೆಸ್‌ ನಾಯಕರು ಈಗ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಬರುತ್ತಿದ್ದಾರೆ. ರಾಜ್ಯದಲ್ಲಿ ಅಸ್ಥಿರ ಸರ್ಕಾರ ಬಂದರೆ, ಜನತೆಯ ಭವಿಷ್ಯ ಅಸ್ಥಿರವಾಗಿರುತ್ತದೆ. ಯಾಕೆಂದರೆ, ಕಾಂಗ್ರೆಸ್‌ ಶಾಂತಿ ಮತ್ತು ವಿಕಾಸದ ವಿರೋಧಿ. ತುಷ್ಟೀಕರಣ ರಾಜಕೀಯಕ್ಕೆ ಕಾಂಗ್ರೆಸ್‌ ಬೆಂಬಲ ನೀಡುತ್ತದೆ. ಇಂಥವರಿಗೆ ಚುನಾವಣೆ ಮೂಲಕ ಪಾಠ ಕಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ರಾಷ್ಟ್ರ ವಿರೋಧಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಚುನಾವಣೆಗೆ ಅವರ ಸಹಾಯ ಪಡೆಯುತ್ತದೆ ಎಂದು ಗಂಭೀರ ಆರೋಪ ಮಾಡಿದ ಪ್ರಧಾನಿ, ರಾಷ್ಟ್ರ ವಿರೋಧಿಗಳ ಮೇಲಿನ ಪ್ರಕರಣಗಳನ್ನು ಕಾಂಗ್ರೆಸ್‌ ಹಿಂಪಡೆಯುತ್ತದೆ. ಈ ಮೂಲಕ ಭಯೋತ್ಪಾದಕ ಬೆಂಬಲಿಗರನ್ನು ರಕ್ಷಿಸುತ್ತದೆ. ರಾಜಸ್ಥಾನದಲ್ಲಿ ಬಾಂಬ್‌ ಸ್ಫೋಟದಲ್ಲಿ ಭಾಗಿಯಾದ ಆರೋಪಿಗಳನ್ನು ಕಾಂಗ್ರೆಸ್‌ ರಕ್ಷಿಸಿದೆ. ಅಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ. ಕಾಂಗ್ರೆಸ್‌ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಕರ್ನಾಟಕದಲ್ಲಿ ಇಂಥ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ಬರಲು ಬಿಡುತ್ತೀರಾ? ನಿಮ್ಮ ರಾಜ್ಯವನ್ನು ನಾಶ ಮಾಡಲು ಬಿಡುತ್ತೀರಾ? 

ನಿಮ್ಮ ಭವಿಷ್ಯವನ್ನು ಹಾಳು ಮಾಡಲು ಬೀಡುತ್ತೀರಾ ಎಂದು ಪ್ರಶ್ನಿಸಿದರು. ದೇಶಾದ್ಯಂತ ಶಾಂತಿ ಮತ್ತು ಪ್ರಗತಿಯನ್ನು ಬಯಸುವ ಜನತೆ ಮೊದಲು ತಮ್ಮ ರಾಜ್ಯದಿಂದ ಕಾಂಗ್ರೆಸ್‌ನ್ನು ಹೊರಹಾಕುತ್ತಾರೆ ಎಂದು ಮೋದಿ ಹೇಳಿದರು. ಜನತೆಗೆ ಸುಳ್ಳು ಭರವಸೆ ನೀಡುವ ರೂಢಿ ಕಾಂಗ್ರೆಸ್‌ಗೆ ಇದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವಾರ ಬಾಕಿ ಉಳಿದಿದೆ. ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಬಿಜೆಪಿ ಸ್ಥಿರ ಸರ್ಕಾರ ನೀಡಲು ನಾಡಿನ ಜನತೆ ನಿರ್ಣಯಿಸಿದ್ದಾರೆ. ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರದ ಮೇಲೆ ರಾಜ್ಯದ ಬಡವರು, ಮಧ್ಯಮ ವರ್ಗದವರು, ಯುವಕರು, ಮಹಿಳೆಯರು, ಶೋಷಿತ ವರ್ಗದವರು, ದಲಿತರು ವಿಶ್ವಾಸ ಇಟ್ಟಿದ್ದಾರೆ. ಎಲ್ಲರೂ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರದ ಯೋಜನೆಗಳ ಲಾಭ ಪಡೆದಿದ್ದಾರೆ ಎಂದರು.

ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ಬಜರಂಗಿ ಸಂಘರ್ಷ: ನಿಷೇಧ ಪ್ರಸ್ತಾವಕ್ಕೆ ಪ್ರಧಾನಿ ತಿರುಗೇಟು

ಶಾರ್ಟ್‌ಕಟ್‌ ರಾಜಕೀಯ: ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಶಾರ್ಟ್‌ ಕಟ್‌ (ಅಡ್ಡದಾರಿ) ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ ಅವರು, ಶಾರ್ಟ್‌ಕಟ್‌ ರಾಜಕೀಯದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಈ ಶಾರ್ಟ್‌ ಕಟ್‌ ಸರ್ಕಾರದಿಂದ ಜಾತಿ ಜಾತಿಗಳ ನಡುವೆ ಹೊಡೆದಾಟ, ಸಮಾಜವನ್ನು ಒಡೆದು ಹಾಕುವ ಕೆಲಸವನ್ನು ಈ ಶಾರ್ಟ್‌ಕಟ್‌ ಸರ್ಕಾರ ಮಾಡಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿವೆ. ಹೀಗಾಗಿ ಈ ಶಾರ್ಟ್‌ಕಟ್‌ ಸರ್ಕಾರವನ್ನು ರಾಜ್ಯದ ಆಡಳಿತದಿಂದ ದೂರವಿಟ್ಟು ಬಿಜೆಪಿ ಸರ್ಕಾರವನ್ನು ಜಾರಿಗೆ ತರಬೇಕು. ನಿಮ್ಮ ಓಟಿನ ತಾಕತ್ತಿನಿಂದಾಗಿ ದೆಹಲಿಯಲ್ಲಿ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಯಿತು. ಇದರಿಂದ ದೇಶದ ಗೌರವ ಹೆಚ್ಚಾಯಿತು. ಕರ್ನಾಟಕದಲ್ಲೂ ಸ್ಥಿರ ಸರ್ಕಾರ ರಚನೆಗಾಗಿ ನಿಮ್ಮ ಮತ ಬೇಕಾಗಿದೆ. ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರ ಎಂದು ಜನತೆ ಕೂಡ ನಿರ್ಧಾರ ಮಾಡಿದ್ದಾರೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios