ಅಮಿತ್‌ ಶಾ ಹೇಳಿದಂತೆ ನಡೆಯಲು ಇದು ಯುಪಿಯಲ್ಲ: ಜಗದೀಶ್‌ ಶೆಟ್ಟರ್‌

‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದಂತೆ ನಡೆಯಲು ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ. ಅದರಲ್ಲೂ ನನ್ನ ಕ್ಷೇತ್ರದ ಮತದಾರರಿಗೆ ನಾನು ಏನೆಂದು ಗೊತ್ತಿದೆ. ಅವರು ನನ್ನನ್ನು ಕೈಬಿಡುವುದಿಲ್ಲ. ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

Karnataka Election 2023 Jagadish Shettar Slams On Amit Shah gvd

ಕೊಪ್ಪಳ (ಮೇ.02): ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದಂತೆ ನಡೆಯಲು ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ. ಅದರಲ್ಲೂ ನನ್ನ ಕ್ಷೇತ್ರದ ಮತದಾರರಿಗೆ ನಾನು ಏನೆಂದು ಗೊತ್ತಿದೆ. ಅವರು ನನ್ನನ್ನು ಕೈಬಿಡುವುದಿಲ್ಲ. ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದ್ದಾರೆ. ಜಗದೀಶ ಶೆಟ್ಟರ್‌ ಅವರ ಸೋಲು ನಿಶ್ಚಿತ ಎಂಬ ಅಮಿತ್‌ ಶಾ ಹೇಳಿಕೆಗೆ ತಿರುಗೇಟು ನೀಡಿ, ನನ್ನನ್ನು ಮತದಾರರು ಆರು ಬಾರಿ ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಈ ಬಾರಿ ಬಿಜೆಪಿಯ ಸರ್ವೆಯಲ್ಲಿಯೇ ನಾನು ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎನ್ನಲಾಗಿದೆ. 

ಹೀಗಾಗಿ, ಯಾರೋ ಹೇಳುತ್ತಾರೆ ಎಂದಾಕ್ಷಣ ಸೋಲುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ ಅಮಿತ್‌ ಶಾ ಹೇಳಿದಂತೆ ನಡೆಯಲು ಇದು ಉತ್ತರಪ್ರದೇಶ ಅಲ್ಲ, ಕರ್ನಾಟಕ ಎಂದರು. ನನಗೆ ಟಿಕೆಟ್‌ ತಪ್ಪಲು, ಬಿಜೆಪಿಯಲ್ಲಿ ಲಿಂಗಾಯತರನ್ನು ಆಚೆ ಹಾಕುವುದಕ್ಕೆ ಬಿ.ಎಲ್‌.ಸಂತೋಷ್‌ ಅವರೇ ಕಾರಣ ಎಂದು ಪುನರುಚ್ಚರಿಸಿದರು. ಬಿಜೆಪಿಯಲ್ಲಿ ಈಗ ಯಾವುದೇ ತತ್ವ, ಸಿದ್ಧಾಂತ ಉಳಿದಿಲ್ಲ. ನಾನು ಕೇವಲ ಶಾಸಕನಾಗಿ ಇರುತ್ತೇನೆ ಎಂದರೂ ಟಿಕೆಟ್‌ ನೀಡಲಿಲ್ಲ. ನನ್ನ ಸೊಸೆಗೆ ಟಿಕೆಟ್‌ ನೀಡುತ್ತೇನೆ ಎಂದರು. ಅವರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವಾಗ ಟಿಕೆಟ್‌ ನೀಡಿ ಏನು ಪ್ರಯೋಜನ ಎಂದು ನಾನು ಪ್ರಶ್ನೆ ಮಾಡಿದೆ. 

ಅಂಬೇಡ್ಕರ್‌ ಹೆಸರನ್ನು ಪಸರಿಸಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ: ಶಾಸಕ ಎನ್‌.ಮಹೇಶ್‌

ಕೊಪ್ಪಳದಲ್ಲಿಯೂ ಹಾಗೆ ಆಗಿದೆ. ಇಲ್ಲಿ ಸಂಸದ ಸಂಗಣ್ಣ ಕರಡಿ ಅವರ ಸೊಸೆಗೆ ಟಿಕೆಟ್‌ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ ಎಂದು ಕಿಡಿಕಾರಿದರು. ಎಷ್ಟೋ ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್‌ ನೀಡಿದ್ದಾರೆ. 75 ವರ್ಷ ಮೇಲ್ಪಟ್ಟವರಿಗೂ ಟಿಕೆಟ್‌ ನೀಡಿದ್ದಾರೆ. ಬಿಜೆಪಿಯಲ್ಲಿ ಹಿಡನ್‌ ಅಜೆಂಡಾ ಇದೆ. ನಾನು ಆರು ಬಾರಿ ಶಾಸಕನಾಗಿದ್ದು, ಈ ಬಾರಿ ಗೆದ್ದರೆ ಮುಖ್ಯಮಂತ್ರಿ ಹುದ್ದೆ ಕೊಡಬೇಕಾಗಿ ಬರುತ್ತದೆ ಎಂದುಕೊಂಡೇ ಈ ರೀತಿ ಮಾಡಿದ್ದಾರೆ. ಲಿಂಗಾಯತ ಸಮುದಾಯದವರ ಹಿರಿತನ ತಪ್ಪಿಸುವುದಕ್ಕಾಗಿಯೇ ನನಗೆ ಟಿಕೆಟ್‌ ತಪ್ಪಿಸಿದ್ದಾರೆ. ಹೀಗಿದ್ದ ಮೇಲೆಯೂ ಸುಮ್ಮನಿರುವುದು ಅಸಾಧ್ಯ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಚಾಮರಾಜನಗರವನ್ನು ಗುಡಿಸಲು ಮುಕ್ತ ಜಿಲ್ಲೆಯಾಗಿಸುವೆ: ಸಚಿವ ಸೋಮಣ್ಣ

ಸುಮ್ಮನಿದ್ದರೆ ಗುಲಾಮಗಿರಿಗೆ ಒಳಪಟ್ಟಂತೆ ಆಗುತ್ತದೆ ಎಂದು ನಾನು ಸಿಡಿದೆದ್ದು ಬಂದಿದ್ದು, ಗೆದ್ದೇ ಗೆಲ್ಲುತ್ತೇನೆ ಎಂದರು. ಕಾಂಗ್ರೆಸ್‌ನಲ್ಲಿ ಹಿರಿತನಕ್ಕೆ ಬೆಲೆ ಇದೆ. 92 ವರ್ಷ ವಯಸ್ಸಾಗಿರುವ ಶ್ಯಾಮನೂರು ಶಿವಶಂಕರಪ್ಪ ಅವರ ಮನೆಗೆ ಟಿಕೆಟ್‌ ನೀಡಿರುವ ಹಿರಿಮೆ ಕಾಂಗ್ರೆಸ್‌ನದ್ದಾಗಿದೆ. ಬಿಜೆಪಿಯಲ್ಲಿ ಹಿರಿಯರನ್ನು ಆಚೆ ಹಾಕಿ, ತಾವೇ ದರ್ಬಾರ ಮಾಡುವ ಉದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios