Asianet Suvarna News Asianet Suvarna News

ಅಂಬೇಡ್ಕರ್‌ ಹೆಸರನ್ನು ಪಸರಿಸಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ: ಶಾಸಕ ಎನ್‌.ಮಹೇಶ್‌

ಕಾಂಗ್ರೆಸ್‌ ಪಕ್ಷದವರು 75ವರ್ಷ ಆಡಳಿತ ನಡೆಸಿದರೂ ಸಂವಿಧಾನದ ಬಗ್ಗೆ ಯಾರೂ ಚರ್ಚೆ ಮಾಡಲಿಲ್ಲ. ಆದರೆ, ಈಗ ಬಿಜೆಪಿಯವರು ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂದು ಹೇಳುವುದು ಸರಿಯಲ್ಲ. ಹರಿ ಬ್ರಹ್ಮ ಬಂದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

Karnataka Election 2023 I joined BJP party to spread the name of Ambedkar Says N Mahesh gvd
Author
First Published May 1, 2023, 10:42 PM IST

ಯಳಂದೂರು (ಮೇ.01): ಕಾಂಗ್ರೆಸ್‌ ಪಕ್ಷದವರು 75ವರ್ಷ ಆಡಳಿತ ನಡೆಸಿದರೂ ಸಂವಿಧಾನದ ಬಗ್ಗೆ ಯಾರೂ ಚರ್ಚೆ ಮಾಡಲಿಲ್ಲ. ಆದರೆ, ಈಗ ಬಿಜೆಪಿಯವರು ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂದು ಹೇಳುವುದು ಸರಿಯಲ್ಲ. ಹರಿ ಬ್ರಹ್ಮ ಬಂದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ, ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಈ ಬಗ್ಗೆ ಅಪಪ್ರಚಾರ ಮಾಡಕೂಡದು ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ನಾನು, ಇಸ್ಪೀಟ್‌ ಆಡಲು, ಕುಡಿದು ಶೋಕಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ.

ಅಂಬೇಡ್ಕರ್‌ ಅವರ ಹೆಸರನ್ನು ಪಸರಿಸಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ನಾನು, ಅಂಬೇಡ್ಕರ್‌ ಸಿದ್ಧಾಂತವನ್ನೇ ಒಪ್ಪಿಕೊಂಡಿದ್ದೇನೆ. ಅವರಿಗೋಸ್ಕರನೇ ನಾನು ರಾಜಕೀಯದಲ್ಲಿದ್ದೇನೆ. ದಲಿತರ ಅಭಿವೃದ್ಧಿಗಾಗಿ ನಾನು, ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದು ಅಂಬೇಡ್ಕರ್‌ ರೀತಿ ನನ್ನನ್ನು ಕೂಡ ನೀವು ಅಡಗಿಸಬಾರದು ಎಂದು ಮನವಿ ಮಾಡಿದರು. ಈಗಾಗಲೇ ಕಾಂಗ್ರೆಸ್‌ನವರು ಅಂಬೇಡ್ಕರ್‌ ಅವರ ಶವಸಂಸ್ಕಾರಕ್ಕೆ ಜಾಗ ನೀಡಲು ಮೀನಾ-ಮೇಷ ಎಣಿಸಿದ್ದರು. ಆದರೆ, ಬಿಜೆಪಿ ಸರ್ಕಾರ ನರೇಂದ್ರ ಮೋದಿಯವರು ಅಂಬೇಡ್ಕರ್‌ ಅವರ ಪರಿಬ್ಬಣ ದಿನಾಚರಣೆಗೆ 200 ಎಕರೆ ಪ್ರದೇಶವನ್ನು ಮೀಸಲಿಟ್ಟು ಅವರ ಬೃಹತ್‌ ಪುತ್ತಳಿ ಮಾಡಲಿದ್ದಾರೆ.

ತಮಿ​ಳರಂತೆ ಕನ್ನ​ಡಿ​ಗರು ಪ್ರಾದೇಶಿಕ ಪಕ್ಷವನ್ನು ಉಳಿಸಿ: ಎಚ್‌.ಡಿ.ದೇವೇಗೌಡ

ಆದರೆ, ಕಾಂಗ್ರೆಸ್‌ ಎಂದೂ ಸಂವಿಧಾನದ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ, ಬಿಜೆಪಿಯವರು ನಾಲ್ಕೈದು ಬಾರಿ ಚರ್ಚಿಸಿದ್ದಾರೆ. ಯಾರೂ ಕೂಡ ಅಪಪ್ರಚಾರಕ್ಕೆ ಕಿವಿಗೊಡದೆ ಕ್ಷೇತ್ರ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಅಧಿಕಾರಿ ನೀಡಬೇಕೆಂದು ಮನವಿ ಮಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು ಡಬಲ್‌ ಎಂಜಿನ್‌ ಸರ್ಕಾರವಾಗಿ ಅನೇಕ ಅಭಿವೃದ್ಧಿ ಜನಪರ ಕೆಲಸಗಳನ್ನು ಮಾಡಿದೆ ಎಂದು ತಿಳಿಸಿದರು. ಪಟ್ಟಣದ ಅಭಿವೃದ್ಧಿಗೆ 3.97 ಕೋಟಿ ರು. ಹಾಗೂ 4.30 ಕೋಟಿ ರು. ವಿಶೇಷ ಅನುದಾನ ತಂದು ಅನೇಕ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದರು. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಕೊಡುಗೆ ಅನನ್ಯ. 

ಭ್ರಷ್ಟಾಚಾರ ಕಾಂಗ್ರೆಸ್‌ನವರ ಮನೆ ಮಾತು: ಸಚಿವ ಅಶೋಕ್‌

ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಹಾಗೂ ರಾಜ್ಯದಲ್ಲಿ ಬಸವರಾಜ್‌ ಬೊಮ್ಮಾಯಿ ಅವರ ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದರು. ದೇಶದಲ್ಲಿ ಇನ್ನೂ ಹಲವು ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ಮಾಜಿ ಶಾಸಕ ಎಸ್‌ ಬಾಲರಾಜು, ಚಿತ್ರ ನಿರ್ದೇಶಕ ಎಸ್‌ ಮಹೇಂದರ್‌, ಪಪಂ ಸದಸ್ಯರಾದ ರಘು, ಜಿಲ್ಲಾ ಬಿಜೆಪಿ ಎಸ್‌ ಟಿ ಮೋರ್ಚಾ ಅಧ್ಯಕ್ಷ ಸುಂದರ್‌, ಕಂದಳ್ಳಿ ಮಹೇಶ್‌ ಕುಮಾರ್‌, ತಾಲೂಕು ಎಸ್‌ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಗುಂಬಳ್ಳಿ ರಾಜು, ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್‌, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಸೂರ್ಯನಾರಾಯಣ, ತಾಪಂ ಮಾಜಿ ಸದಸ್ಯ ವೈ ಕೆ.ಮೂಳೆ ನಾಗರಾಜು, ಅಂಬಳೆಮಹೇಶ್‌, ವೀರೇಶ್‌, ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios