ಹೈಕಮಾಂಡ್ ಒಪ್ಪಿದರೆ 2 ಕಡೆ ಸ್ಪರ್ಧಿಸುವೆ: ಸಿದ್ದರಾಮಯ್ಯ
‘ನಾನು ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕೋಲಾರ (ಏ.02): ‘ನಾನು ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ನಂದಿನಿ ಪ್ಯಾಲೇಸ್‌ನಲ್ಲಿ ಏ.9ರಂದು ಕಾಂಗ್ರೆಸ್ ಆಯೋಜಿಸಿರುವ ಸತ್ಯಮೇವ ಜಯತೆ ಸಮಾವೇಶದ ಅಂಗವಾಗಿ ಶನಿವಾರ ನಡೆದ ಪುರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ವೇಳೆ, ಸಿದ್ದರಾಮಯ್ಯನವರಿಗೆ ಕೋಲಾರದಿಂದಲೇ ಸ್ಪರ್ಧಿಸಲು ಕಾರ್ಯಕರ್ತರು ತೀವ್ರ ಒತ್ತಡ ಹಾಕಿದರು.
ಈ ಬಗ್ಗೆ ಪ್ರತಿಕ್ರಿಯಿಸಿ, ವರುಣ ಮತ್ತು ಕೋಲಾರ ಎರಡೂ ಕಡೆ ಸ್ಪರ್ಧೆ ಮಾಡುವ ಇಚ್ಛೆ ನನಗಿದೆ. ಆದರೆ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು. ವರುಣ ನನ್ನ ಸ್ವ ಕ್ಷೇತ್ರ. ಇದು ನನ್ನ ಕೊನೆಯ ಚುನಾವಣೆ. ವರುಣ ಕ್ಷೇತ್ರದಿಂದ ನನ್ನ ರಾಜಕೀಯ ಆರಂಭವಾಗಿದ್ದು, ತಾಲೂಕು ಬೋರ್ಡ್, ಶಾಸಕ ಸ್ಥಾನ, ಲೋಕಸಭೆಗೆ ಅಲ್ಲಿಂದಲೇ ಸ್ಪರ್ಧೆ ಮಾಡಿದ್ದೇನೆ. ಆದ್ದ ರಿಂದ ವರುಣದಲ್ಲಿ ನಿಲ್ಲುತ್ತಿದ್ದೇನೆ. ನನ್ನ ಹುಟ್ಟೂರಿನಿಂದ ಸ್ಪರ್ಧಿಸಬೇಕು ಅನ್ನೋದು ನನ್ನ ಆಸೆ. ಕೋಲಾರ ಸೇರಿ ರಾಜ್ಯದ 25 ಕಡೆ ಸ್ಪರ್ಧೆಗೆ ನನಗೆ ಆಗ್ರಹವಿದೆ. ಇನ್ನು, ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಎರಡು ಕಡೆಯಿಂದ ಅವಕಾಶ ಕೊಟ್ಟರೂ ನಿಲ್ಲುವೆ ಎಂದು ತಿಳಿಸಿದರು.
ಕಳ್ಳರನ್ನು ಕಳ್ಳ ಎನ್ನುವುದು ಅಪರಾಧವೇ: ರಣದೀಪ್ ಸಿಂಗ್ ಸುರ್ಜೇವಾಲ
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ದೇಶದ ಸಂಪತ್ತನ್ನು ಲೂಟಿ ಮಾಡಿಕೊಂಡು ಪರಾರಿಯಾದ ಚೋರರ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿಯವರು, ರಾಹುಲ್ ಗಾಂಧಿಗೆ ಪ್ರಶ್ನಿಸಲು ಅವಕಾಶ ಇಲ್ಲದಂತೆ ಪ್ರಕರಣ ದಾಖಲು ಮಾಡಿ 2 ವರ್ಷ ಜೈಲು ಶಿಕ್ಷೆ ಕೊಡಿಸಿದ್ದಾರೆ. ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ, ಪ್ರಜಾತಂತ್ರದ ಧಮನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹೋರಾಟ ಬೆಂಬಲಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಆರಗ ರಾಜೀನಾಮೆಗೆ ಆಗ್ರಹ: ಕಗ್ಗಲೀಪುರದ ಬಾಲಕಿಯ ಅತ್ಯಾಚಾರ ಪ್ರಕರಣ ನಡೆದು ವಾರ ಕಳೆದಿಲ್ಲ. ಅಷ್ಟರಲ್ಲೇ ಕೋರಮಂಗಲದಲ್ಲಿ ಯುವತಿಯನ್ನು ನಾಲ್ವರು ಅತ್ಯಾಚಾರಗೈದು ಅಟ್ಟಹಾಸ ಮೆರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನು ಜನ ಕಳೆದುಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಸಮಾಜದಲ್ಲಿನ ದುಷ್ಟರು, ಸಮಾಜಘಾತುಕರನ್ನು ಸದೆ ಬಡೆಯಬೇಕಿದ್ದ ಬಿಜೆಪಿ ಸರ್ಕಾರವು ರೌಡಿಶೀಟರ್, ಕೊಲೆಗಡುಕರಿಗೆ ರತ್ನಗಂಬಳಿ ಹಾಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಇದರ ಫಲವನ್ನು ಜನಸಾಮಾನ್ಯರು ಉಣ್ಣುವಂತಾಗಿದೆ.
ಆಮ್ ಆದ್ಮಿ ಪಕ್ಷದ ಹಿನ್ನಡೆಗೆ ಬಿಜೆಪಿ ಹುನ್ನಾರ: ಮುಖ್ಯಮಂತ್ರಿ ಚಂದ್ರು
ಸಾಮರ್ಥ್ಯ, ನೈತಿಕತೆ ಇಲ್ಲದೆ ಕುರ್ಚಿಗೆ ಅಂಟಿಕೊಂಡು ಕುಳಿತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನಗರದಲ್ಲಿ ಚಲಿಸುವ ಕಾರಿನಲ್ಲಿ ಕೋರಮಂಗಲದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಟೀಕಿಸಿದ್ದಾರೆ. ಅರಗ ಜ್ಞಾನೇಂದ್ರ ಸ್ಯಾಂಟ್ರೋ ರವಿ ಹೇಳುವ ವರ್ಗಾವಣೆ ಮಾಡಿಸಲಷ್ಟೇ ಶಕ್ತರು ದೂರಿದ್ದಾರೆ.