ಅಭಿವೃದ್ಧಿ ಕೆಲಸ ಹಾಗೂ ಅಭಿವೃದ್ಧಿ ಸಾಧನೆ ಮಾಡುವಂತಹ ವಿಚಾರದಲ್ಲಿ ಮುಂಚೂಣೆಯಲ್ಲಿರುವ ಆಮ್‌ ಆದ್ಮಿ ಪಕ್ಷಕ್ಕೆ ಹಿನ್ನಡೆ ಮಾಡಬೇಕೆಂದು ಬಿಜೆಪಿ ಸರ್ಕಾರ ಹಪಿಸುತ್ತಿದೆ ಎಂದು ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. 

ರಾಣಿಬೆನ್ನೂರು (ಏ.01): ಅಭಿವೃದ್ಧಿ ಕೆಲಸ ಹಾಗೂ ಅಭಿವೃದ್ಧಿ ಸಾಧನೆ ಮಾಡುವಂತಹ ವಿಚಾರದಲ್ಲಿ ಮುಂಚೂಣೆಯಲ್ಲಿರುವ ಆಮ್‌ ಆದ್ಮಿ ಪಕ್ಷಕ್ಕೆ ಹಿನ್ನಡೆ ಮಾಡಬೇಕೆಂದು ಬಿಜೆಪಿ ಸರ್ಕಾರ ಹಪಿಸುತ್ತಿದೆ ಎಂದು ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ನಗರದಲ್ಲಿ ಪಕ್ಷದ ವತಿಯಿಂದ ಜರುಗಿದ ಬೈಕ್‌ ರ್ಯಾಲಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಗುಜರಾತ್‌ ಚುನಾವಣೆ ಮುಗಿದ ಬಳಿಕ ಆಮ್‌ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವಾಗಲು ಎಲ್ಲ ಅರ್ಹತೆ ಪಡೆಯಿತು. ಆದರೆ ಕೇಂದ್ರ ಚುನಾವಣಾ ಆಯೋಗ ನಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಘೋಷಿಸುವ ವಿಚಾರವಾಗಿ ಬಿಜೆಪಿ ಇಲ್ಲಸಲ್ಲದ ಕುತಂತ್ರ ನಡೆಸಿತು. 

ನೀತಿ ಸಂಹಿತೆ ಜಾರಿ ಇರುವುದರಿಂದ ಆದಷ್ಟು ಕೂಡಲೇ ಅದು ಬಗೆಹರಿಯುತ್ತದೆ ಎಂದರು. ಸರ್ವಾಧಿಕಾರ, ಕೋಮುವಾದಿ ಹಾಗೂ ತಾರತಮ್ಯ ಧೋರಣೆಯ ಮೂಲಕ ಎಲ್ಲ ಪಕ್ಷಗಳನ್ನು ಹತ್ತಿಕ್ಕಬೇಕೆಂಬ ದುರಾಸೆಯನ್ನು ಬಿಜೆಪಿ ಇಟ್ಟುಕೊಂಡಿದೆ ಎಂದು ದೂರಿದರು. ಚುನಾವಣಾ ಸಂದರ್ಭದಲ್ಲಿ ತಮ್ಮ ಪಕ್ಷದವರನ್ನು ಬಿಟ್ಟು ಬೇರೆಯವರ ಮೇಲೆ ಲೋಕಾಯುಕ್ತ ದಾಳಿ, ಪ್ರಕರಣ ದಾಖಲು, ಜೈಲಿಗೆ ಕಳಿಸುವುದು ಹೀಗೆ ಹಲವಾರು ಪದ್ಧತಿ ಅನುಸರಿಸುತ್ತಿರುವುದು ಅವರ ಕಾರ್ಯವೈಖರಿ ನಾಡಿನ ಜನತೆಗೆ ತಿಳಿದಿದೆ ಎಂದರು. ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡಿ, ಭ್ರಷ್ಟರಿಗೆ, ವಂಚಕರಿಗೆ ನೆರವು ನೀಡುವ ಮೂಲಕ ಬಿಜೆಪಿ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ. 

ಕಾರ್ಮಿಕರ ಹಿತಕಾಯುವುದೇ ಕಾಂಗ್ರೆಸ್‌ ಧ್ಯೇಯ: ಮಾಜಿ ಸಚಿವ ಎಚ್‌.ವೈ.ಮೇಟಿ

ಇವೆಲ್ಲವುಗಳನ್ನು ಮಟ್ಟ ಹಾಕಲು ಪೊರಕೆಯೇ ಮದ್ದಾಗಿದೆ. ಹೀಗಾಗಿ ಆಮ್‌ ಆದ್ಮಿ ಪಕ್ಷದ ವತಿಯಿಂದ ಈ ಬಾರಿ 224 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ 80 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದ್ದು, ಇನ್ನುಳಿದ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ನಮ್ಮ ಪಕ್ಷದಲ್ಲಿ ನಿಷ್ಠಾ್ಠವಂತರಿಗೆ ಹಾಗೂ ಪ್ರಾಮಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹನುಮಂತಪ್ಪ ಕಬ್ಬಾರ ಅವರನ್ನು ಘೋಷಿಸಿದ್ದು, ಈ ಭಾಗದ ಮತದಾರರು ಕಬ್ಬಾರವರಿಗೆ ತಮ್ಮ ಅತ್ಯಅಮೂಲ್ಯವಾದ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. 

ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಇದ್ದೇ ಇದೆ: ಜಗದೀಶ್‌ ಶೆಟ್ಟರ್‌

ಅಭ್ಯರ್ಥಿ ಹನುಮಂತಪ್ಪ ಕಬ್ಬಾರ, ರಾಜ್ಯ ಉಪಾಧ್ಯಕ್ಷ ರೋಹನ್‌ ಐನಾಪುರ, ಪ್ರಧಾನ ಕಾರ್ಯದರ್ಶಿ ರವಿಚಂದ್ರನ ನರಬೆಂಚಿ, ಜಿಲ್ಲಾಧ್ಯಕ್ಷ ಫರೀದ್‌ ನದಾಫ್‌, ತಾಲೂಕು ಅಧ್ಯಕ್ಷ ಆನಂದ ಕಾಳೇರ ಸುದ್ದಿಗೋಷ್ಠಿಯಲ್ಲಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.