ಅಂಗಾರ, ಮಠಂದೂರಿಗೆ ಟಿಕೆಟ್‌ ತಪ್ಪಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ!

ಸುಳ್ಯದ ಬಂಗಾರ ಎಂದೇ ಕರೆಸಿಕೊಳ್ಳುತ್ತಿದ್ದ ಸಚಿವ ಅಂಗಾರ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಕೊನೆಕ್ಷಣದಲ್ಲಿ ಟಿಕೆಟ್‌ ತಪ್ಪಿದ್ದು ಹೇಗೆ? ಮೂಡುಬಿದಿರೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿಲ್ಲಾಧ್ಯಕ್ಷ ಸುದರ್ಶನ ಅವರಿಗೂ ಟಿಕೆಟ್‌ ದಕ್ಕದ್ದು ಹೇಗೆ ಎಂಬ ಸಂಗತಿಗೆ ಹಲವು ಕಾರಣಗಳು ಕೇಳಿಬರುತ್ತಿವೆ.

Karnataka election 2023 How did the ticket mised to Angara and Mathandur rav

ಮಗಳೂರು (ಏ.13) : ಸುಳ್ಯದ ಬಂಗಾರ ಎಂದೇ ಕರೆಸಿಕೊಳ್ಳುತ್ತಿದ್ದ ಸಚಿವ ಅಂಗಾರ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಕೊನೆಕ್ಷಣದಲ್ಲಿ ಟಿಕೆಟ್‌ ತಪ್ಪಿದ್ದು ಹೇಗೆ? ಮೂಡುಬಿದಿರೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿಲ್ಲಾಧ್ಯಕ್ಷ ಸುದರ್ಶನ ಅವರಿಗೂ ಟಿಕೆಟ್‌ ದಕ್ಕದ್ದು ಹೇಗೆ ಎಂಬ ಸಂಗತಿಗೆ ಹಲವು ಕಾರಣಗಳು ಕೇಳಿಬರುತ್ತಿವೆ.

ನಿರಂತರ ಆರು ಬಾರಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಲು ಅವಕಾಶ ಪಡೆದ ಅಂಗಾರ ಅವರು ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂಬ ಆರೋಪ ಸ್ವಪಕ್ಷೀಯರಿಂದಲೇ ಕೇಳಿಬಂದಿತ್ತು. ಅದಕ್ಕಿಂತಲೂ ಪ್ರಮುಖವಾಗಿ ಡಿಸಿಸಿ ಬ್ಯಾಂಕ್‌ ಚುನಾವಣೆ(DCC Bank election)ಯಲ್ಲಿ ಅಂಗಾರ ಮಧ್ಯಪ್ರವೇಶ ಮಾಡಿರುವುದು ಕೂಡ ಟಿಕೆಟ್‌ ನಿರಾಕರಣೆಗೆ ಕಾರಣವಾಗಿದೆ. ಸ್ವಪಕ್ಷೀಯರಲ್ಲದೆ, ಸಂಘಪರಿವಾರದ ಜತೆಯೂ ಅಂಗಾರ(S Angara) ಇತ್ತೀಚಿನ ದಿನಗಳಲ್ಲಿ ಅಷ್ಟಕ್ಕಷ್ಟೆ ಎಂಬಂತಿದ್ದರು. ಆರ್‌ಎಸ್‌ಎಸ್‌(RSS) ಶಕ್ತಿ ಕೇಂದ್ರ ಎಂದೇ ಕರೆಸಿಕೊಳ್ಳುವ ಡಾ.ಕಲ್ಲಡ್ಕ ಪ್ರಭಾಕರ ಭಟ್‌(Dr Kalladka prabhakar bhat) ಜತೆಯೂ ಅಂತಹ ಒಡನಾಟ ಹೊಂದಿರಲಿಲ್ಲ. ಸ್ಥಳೀಯ ಆರ್‌ಎಸ್‌ಎಸ್‌ ಮುಖಂಡರ ಜತೆ ಸಂಪರ್ಕ ಇದ್ದರೂ ಅದು ಅಂಗಾರ ಅವರಿಗೆ ಟಿಕೆಟ್‌ ದಕ್ಕಿಸಿಕೊಳ್ಳುವಲ್ಲಿ ನೆರವಾಗಲಿಲ್ಲ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಹಾಲಿ ಶಾಸಕರಿಗೆ ಕೊಕ್‌, ಹೊಸಬರಿಗೆ ಮಣೆ: ಉಡುಪಿ ಮಂಗಳೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಅಂಗಾರ ಅವರಿಗೆ ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಅವರು ಎರಡು ದಿನಗಳ ಹಿಂದೆ ಕರೆ ಮಾಡಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಅವರಂತೆ ಸ್ವಯಂ ನಿವೃತ್ತಿ ಘೋಷಿಸುವಂತೆ ಸೂಚಿಸಿದ್ದರು. ಆದರೆ ಅದಕ್ಕೆ ಅಂಗಾರ ಅವರು ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ. ಮಂಗಳೂರಲ್ಲಿ ನಡೆದ ಕೋರ್‌ ಕಮಿಟಿ ಸಭೆಗೆ ಆಹ್ವಾನ ಇಲ್ಲದೆ ತೆರಳಿದ ಅಂಗಾರ ಅವರಿಗೆ ಅಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು, ಸ್ವಪಕ್ಷೀಯರ ವಿರೋಧ ಹಿನ್ನೆಲೆಯಲ್ಲಿ ಟಿಕೆಟ್‌ ಅನುಮಾನ ಎಂದಿದ್ದರು. ಆಗ ಅಂಗಾರ ಅವರು, ಅವನ್ನೆಲ್ಲ ಸರಿಪಡಿಸಿ ಈ ಬಾರಿ ಒಂದು ಕೊನೆ ಅವಕಾಶ ನೀಡುವಂತೆ ಕೋರಿದ್ದರು ಎಂದು ಹೇಳಲಾಗಿದೆ.

ಹಿಂದೆ ಸಚಿವ ಸ್ಥಾನ ತಪ್ಪಿತ್ತು: ಈ ಹಿಂದೆ ಬಿಜೆಪಿ ಸರ್ಕಾರ ರಚನೆ ವೇಳೆ ಅಂಗಾರ ಅವರ ಹೆಸರು ಸಚಿವ ಸ್ಥಾನಕ್ಕೆ ನಿರ್ಧಾರವಾಗಿತ್ತು. ಹೀಗಾಗಿ ಅವರನ್ನು ತರಾತುರಿಯಲ್ಲಿ ಬೆಂಗಳೂರಿಗೆ ಪ್ರಮಾಣವಚನಕ್ಕೆ ಆಹ್ವಾನಿಸಲಾಗಿತ್ತು. ಹಿಂದಿನ ದಿನ ರಾತ್ರಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಅಂಗಾರಗೆ ಸಚಿವ ಸ್ಥಾನ ನಿರಾಕರಿಸಲಾಯಿತು. ಆಗ ಅವಕಾಶ ವಂಚಿತ ಅಂಗಾರ ಪಕ್ಷ ನಾಯಕರ ಈ ಧೋರಣೆಗೆ ಬೇಸರಗೊಂಡು ಕೆಲವು ದಿನ ಮನೆಯಲ್ಲೇ ಇದ್ದರು.

ಸಂಜೀವ ಮಠಂದೂರು ಅವರಿಗೆ ಸ್ವಪಕ್ಷೀಯರ ವಿರೋಧ ಹೊರತೂ ಟಿಕೆಟ್‌ ನೀಡಲು ಪಕ್ಷ ನಾಯಕತ್ವ ಮನಸ್ಸು ಮಾಡಿತ್ತು. ಆದರೆ ಸ್ವಪಕ್ಷೀಯರ ವಿರೋಧ, ಸಂಘಪರಿವಾರದ ಆಕ್ಷೇಪ ಟಿಕೆಟ್‌ ವಂಚಿಸುವಲ್ಲಿ ಯಶಸ್ವಿಯಾಯಿತು.

ಮಠಂದೂರು ಪರ ಲಾಬಿ ಮಾಡಿದ್ದು ಕಾಂಗ್ರೆಸ್‌!: ಸಂಜೀವ ಮಠಂದೂರು ಅವರಿಗೆ ಪುತ್ತೂರಿನಲ್ಲಿ ಮತ್ತೆ ಟಿಕೆಟ್‌ ನೀಡಬೇಕು ಎಂದು ಲಾಬಿ ಮಾಡಿದ್ದು ಸ್ವಪಕ್ಷೀಯರಲ್ಲ, ಬದಲು ಕಾಂಗ್ರೆಸ್‌! ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಪುತ್ತೂರಿನ ಸಮಾಜದ ಮುಖಂಡರೊಬ್ಬರು ಇತ್ತೀಚೆಗೆ ಅವರದೇ ಸಮುದಾಯದ ಸ್ವಾಮೀಜಿ ಅವರಲ್ಲಿಗೆ ತೆರಳಿ ಈ ಹಕ್ಕೊತ್ತಾಯ ಮಂಡಿಸಿದ್ದರು. ಅಲ್ಲದೆ ಈ ಬಗ್ಗೆ ಫೋಟೋಗಳನ್ನು ಕೂಡ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕರ ತೇಜೋವಧೆ ಮಾಡುವ ಷಡ್ಯಂತರ ನಡೆದಿತ್ತು. ಮರುದಿನ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಶಾಸಕರಿಗೆ ಟಿಕೆಟ್‌ ನೀಡಬೇಕು ಎಂದು ಒಂದಿಬ್ಬರು ಹೇಳಿದ್ದು ಬಿಟ್ಟರೆ, ಹೊಸಬರಿಗೆ ಕೊಡಿ ಎಂಬ ಆಗ್ರಹ ಬಲವಾಗಿ ಕೇಳಿಬಂದಿತ್ತು. ಹೊಸ ಅಭ್ಯರ್ಥಿ ಆಶಾ ತಿಮ್ಮಪ್ಪ ಕೂಡ ಈ ಬಾರಿ ಸಂಜೀವ ಮಠಂದೂರಿಗೆ ಟಿಕೆಟ್‌ ಸಿಗುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ ಎಂದು ಪುತ್ತೂರಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ಜಿಲ್ಲಾಧ್ಯಕ್ಷಗೂ ಟಿಕೆಟ್‌ ಮಿಸ್‌:

ಬಹಳ ನಿರೀಕ್ಷೆಯಲ್ಲಿದ್ದ ಜಿಲ್ಲಾಧ್ಯಕ್ಷ ಸುದರ್ಶನ್‌ಗೆ ಮೂಡುಬಿದಿರೆ ಟಿಕೆಟ್‌ ಮಿಸ್‌ ಆಗಿದೆ. ಇದರ ಹಿಂದೆ ಹಾಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಬೆದರಿಕೆ ತಂತ್ರ ಕೆಲಸ ಮಾಡಿದೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಸಂಪರ್ಕ ಕೊರತೆಯಿಂದಾಗಿ ರಘುಪತಿ ಭಟ್ಟರಿಗೆ ವಿಷಯ ತಿಳಿಸಲು ಸಾಧ್ಯವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಕಾರ್ಯಕರ್ತರೊಂದಿಗೆ ಒಡನಾಟ ಹೊಂದಿರದ ಕಾರಣಕ್ಕೆ ಹಾಲಿ ಶಾಸಕರನ್ನು ಬದಲಿಸಲು ಪಕ್ಷ ನಾಯಕರು ಮುಂದಾಗಿದ್ದರು. ಹಾಲಿ ಶಾಸಕರ ಸ್ಥಾನಕ್ಕೆ ಅದೇ ಸಮುದಾಯದ ಸುದರ್ಶನ್‌ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿತ್ತು. ಆದರೆ ಹಾಲಿ ಶಾಸಕರು ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಸ್ಪರ್ಧಿಸುವ ಬೆದರಿಕೆಯನ್ನು ಪಕ್ಷದ ಪ್ರಮುಖರಿಗೆ ರವಾನಿಸಿದ್ದರು. ಇದರಿಂದಾಗಿ ಸುದರ್ಶನ್‌ಗೆ ಟಿಕೆಟ್‌ ತಪ್ಪಿತು ಎನ್ನುತ್ತವೆ ಮೂಲಗಳು.

Latest Videos
Follow Us:
Download App:
  • android
  • ios