ಭಜರಂಗ ದಳ-ಪಿಎಫ್ಐ ನಿಷೇಧದಿಂದ ಏನು ಲಾಭ: ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ದ ಎಚ್‌ಡಿಕೆ ವ್ಯಂಗ್ಯ

ಭಜರಂಗ ದಳ ಹಾಗು ಪಿಎಫ್ಐ ನಿಷೇಧದಿಂದ ಏನು ಲಾಭ. ಪರಿಹಾರವಲ್ಲ. ಭಜರಂಗದಲ್ಲಿ ಹಿಂದುಳಿದ ವರ್ಗಗಳ ಮಕ್ಕಳನ್ನು ಭಾವಾತ್ಮಕ ಮೆದುಳಿಗೆ ತುರಕಿ ಅವರ ಮುಖಾಂತರ ಚಟುವಟಿಕೆ ಮಾಡುತ್ತಿದ್ದಾರೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುವಂಥದ್ದೇನು ಅಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

Karnataka Election 2023 Former CM HD Kumaraswamy Talks Over Congress Manifesto At Koppal gvd

ಕೊಪ್ಪಳ (ಮೇ.03): ಭಜರಂಗ ದಳ ಹಾಗು ಪಿಎಫ್ಐ ನಿಷೇಧದಿಂದ ಏನು ಲಾಭ. ಪರಿಹಾರವಲ್ಲ. ಭಜರಂಗದಲ್ಲಿ ಹಿಂದುಳಿದ ವರ್ಗಗಳ ಮಕ್ಕಳನ್ನು ಭಾವಾತ್ಮಕ ಮೆದುಳಿಗೆ ತುರಕಿ ಅವರ ಮುಖಾಂತರ ಚಟುವಟಿಕೆ ಮಾಡುತ್ತಿದ್ದಾರೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುವಂಥದ್ದೇನು ಅಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಚುನಾವಣೆಯ ಅಂತಿಮ ದಿನದತ್ತ ಹೋಗುತ್ತಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳು ಈಗ ಆತ್ಮಿಯತೆ ಕಾಣುತ್ತೆ. ಕರ್ನಾಟಕ ಸಂಕಷ್ಟದಲ್ಲಿದ್ದಾಗ ಬಂದಿದ್ದರೆ ವಿಶ್ವಾಸ ಮೂಡುತ್ತಿತ್ತು. ಪಿಎಂ ಈಗ ಜನಕ್ಕೆ ಕೈ ಬಿಸಿ ಹೋಗುತ್ತಾರೆ ಎಂದರು.

ರೋಡ್ ಶೋನಲ್ಲಿ ಜನ ಹಾಗು ಅವರ ಮುಖಂಡರ ಮಧ್ಯೆ ಎಷ್ಟು ಸಹಕಾರ ಗೊತ್ತಿಲ್ಲ. ಮೋದಿಯವರ ಚಾರ್ಮ್ ಈಗ ಕಡಿಮೆಯಾಗಿದೆ. 9 ವರ್ಷವಾಯಿತು ಈಗ ಬದಲಾಗಿದೆ. ಬಿಜೆಪಿಯವರಿಗೆ ಬೊಮ್ಮಾಯಿ ಮುಖವಿಲ್ಲ. ಆದರೆ ಮೋದಿ ಮುಖ ತೋರಿಸುತ್ತಾರೆ. ಹಳೆಯ ಮೈಸೂರು ಭಾಗದಲ್ಲಿ ಈ ಬಾರಿ 10 ಜನ ಆಯ್ಕೆಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಅವರು ಅಧಿಕಾರ ಅಮೃತ ಆಚರಣೆ ಮಾಡಲು ಹೊರಟಿದ್ದಾರೆ. ಕಲ್ಯಾಣ ಕರ್ನಾಟಕವನ್ನು ವಿರೋಧ ಪಕ್ಷದ ಮರೆತಿದ್ದಾರೆ ಎಂದು ಬಿಜೆಪಿ ಹೇಳಿದೆ. ಕಲ್ಯಾಣ ಕರ್ನಾಟಕಕ್ಕೆ ಏನು ಯೋಜನೆ ಕೊಟ್ಟಿದ್ದಾರೆ. ಕೃಷ್ಣಾ ನ್ಯಾಯಾಧಿಕರಣ ತೀರ್ಪು ಬಂದು 10 ವರ್ಷವಾಯಿತು. ಈ ಅವಧಿಯಲ್ಲಿ ಎರಡೂ ಪಕ್ಷಗಳು ಏನು ಮಾಡಿದ್ಧಾರೆ ಎಂದರು.

ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಕಾಂಗ್ರೆಸ್ ಮ್ಯಾನಿಫೆಸ್ಟೋ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ

ಕಿಸಾನ ಸಮ್ಮಾನ್ ಯೋಜನೆಯಿಂದ ರೈತನಿಗೆ ಏನು ಲಾಭವಿದೆ. ರಸಗೊಬ್ಬರ ದರ ಹೆಚ್ಚು ಮಾಡಿ ಹೊಟ್ಟೆ ಹೊಡೆದ ಈಗ ಕಿಸಾನ ಸಮ್ಮಾನ ಯೋಜನೆ ನೀಡಿರುವುದು ಕೊಡುಗೆನಾ? ಜಲಜೀವನ ಮಿಷನ್ ನಲ್ಲಿ ಗುತ್ತಿಗೆದಾರರಿಗೆ ಲಾಭ. ಈ ಯೋಜನೆ ಮಂತ್ರಿಗಳು ಹಣ ಮಾಡಿಕೊಳ್ಳುತ್ತಾರೆ. ದೇಶದಲ್ಲಿ ಯಾವ ಪಕ್ಷಕ್ಕೆ ಸಿದ್ದಾಂತ ತತ್ವ ಇದೆಯೇ?. ಜೆಡಿಎಸ್‌ನ ಬಾಲ ಹಿಡಿದುಕೊಂಡು ಹೋಗುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ಯಾಕೆ ಸೋತ ಎತ್ತಿದವರ ಬಾಲ‌ ಹಿಡಿಯುತ್ತಾರೆ. ರಾಯಚೂರು ಜಿಲ್ಲೆಯ ಶಾಸಕರು ಮನೆ ಕಟ್ಟದೆ ಹಣ ಎತ್ತಿದ್ದಾರೆ. ನಮ್ಮ ಸರಕಾರ ಬರಲಿ ನೋಡೋಣ. ಉತ್ತರ ಕರ್ನಾಟಕದಲ್ಲಿ 30-35 ಜನರ ಗೆಲ್ಲುತ್ತಾರೆ ಎಂದು ಕುಮಾರಸ್ವಾಮಿ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕೋಟಿ ಸಂಪಾದನೆ ಬಿಟ್ಟು ಚುನಾವಣೆಗೆ ಇಳಿದ ರೈತ: ವಿದೇಶದಿಂದ ತವರಿಗೆ ಮರಳಿ ರಾಜಕೀಯಕ್ಕೆ

ಪರ್ಯಾಯ ಯೋಜನೆ ಇಲ್ಲದಕ್ಕೆ ವಿವಾದ ಸೃಷ್ಟಿ: ರಾಷ್ಟ್ರೀಯ ಪಕ್ಷಗಳಿಗೆ ಹೇಳಿಕೊಳ್ಳುವುದಕ್ಕೆ ಪರ್ಯಾಯ ಯೋಜನೆ ಇಲ್ಲ. ಹೀಗಾಗಿ ವಿಷಕನ್ಯೆ, ವಿಷ ಸರ್ಪ ಎಂದು ಹೇಳಿ ವಿವಾದ ಮಾಡುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಅವರು ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದಾಗ ಗವಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್‌ಗೆ ಅದೃಷ್ಟಕ್ಕಿಂತ ಶ್ರಮವಿದೆ, ಹೀಗಾಗಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ. ಉಚಿತ ಯೋಜನೆಗಳ ಘೋಷಣೆ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಕಾಂಪಿಟೇಷನ್‌ ಇದೆ ಏನಾಗುತ್ತೊ ನೋಡೋಣ ಎಂದರು. ಬಜರಂಗದಳ ಹಾಗು ಪಿಎಫ್‌ಐ ಬ್ಯಾನ್‌ ವಿಚಾರ ಪ್ರಸ್ತಾಪಿಸಿದ ಎಚ್‌ಡಿಕೆ, ಅವರಿಗೆ ಜನಪರ ಕೆಲಸಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಏನು ಇಲ್ಲ ಹೀಗಾಗಿ ಹೇಳುತ್ತಿದ್ದಾರೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios