ಮಂಡ್ಯದಲ್ಲಿ ನಿಖಿಲ್‌ ಸೋಲಿಸಿದ್ದಕ್ಕೆ ಕಾಂಗ್ರೆಸ್‌ಗೆ ಈಗ ಪಶ್ಚಾತ್ತಾಪ: ಎಚ್‌.ಡಿ.ಕುಮಾರಸ್ವಾಮಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ(ನಿಖಿಲ್‌ ಕುಮಾರಸ್ವಾಮಿ)ಯನ್ನು ಸೋಲಿಸಿದ್ದರ ಬಗ್ಗೆ ಈಗ ಕಾಂಗ್ರೆಸ್‌ನವರು ಪಶ್ಚಾತ್ತಾಪ ಪಡುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ ಜೆಡಿಎಸ್‌ ವಿರುದ್ಧ ಈಗಲೂ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 
 

Karnataka Election 2023 Former CM HD Kumaraswamy Slams On Congress gvd

ಕೆ.ಆರ್‌.ಪೇಟೆ (ಮೇ.06): ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ(ನಿಖಿಲ್‌ ಕುಮಾರಸ್ವಾಮಿ)ಯನ್ನು ಸೋಲಿಸಿದ್ದರ ಬಗ್ಗೆ ಈಗ ಕಾಂಗ್ರೆಸ್‌ನವರು ಪಶ್ಚಾತ್ತಾಪ ಪಡುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ ಜೆಡಿಎಸ್‌ ವಿರುದ್ಧ ಈಗಲೂ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಈ ಮೂಲಕ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾವು ಬೆಂಬಲಿಸಿದ ಸುಮಲತಾ ಅವರು ಇದೀಗ ಬಿಜೆಪಿ ಸೇರ್ಪಡೆಯಾಗಿರುವ ಕುರಿತು ಪಶ್ಚಾತ್ತಾಪ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಪರ ಪಟ್ಟಣದ ಪುರಸಭಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಜೆಡಿಎಸ್‌ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಇದರ ಬಗ್ಗೆ ಪಕ್ಷದ ಕಾರ್ಯಕರ್ತರು ಎಚ್ಚರದಿಂದ ಇರಬೇಕು ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯದ ಜನರ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆ ರೂಪಿಸಿ ಅದರ ಅನುಷ್ಠಾನಕ್ಕಾಗಿ ನಾನು ಏಕಾಂಗಿ ಹೋರಾಟ ನಡೆಸುತ್ತಿದ್ದೇನೆ. ನನ್ನ ಏಕಾಂಗಿ ಹೋರಾಟ ಗಮನಿಸಿ ದೇವೇಗೌಡರು ಇಳಿವಯಸ್ಸಿನಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ಮೂಸೂರಿನ ಪಂಚರತ್ನ ಯೋಜನೆಯ ಸಮಾರೋಪದ ಸಂದರ್ಭದಲ್ಲಿ ಗೌಡರ ಆರೋಗ್ಯ ಹದಗೆಟ್ಟಿತ್ತು. ಆದರೆ ಇದೀಗ ನಿಮ್ಮೆಲ್ಲರ ಆರ್ಶೀವಾದದ ಫಲವಾಗಿ ಅವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದರು.

ಬೊಂಬೆನಗ​ರಿ​ಯಲ್ಲಿ ಕು​ಮಾ​ರ​ಸ್ವಾ​ಮಿಯನ್ನು ಮಣಿಸಿ ಯೋ​ಗೇ​ಶ್ವರ್‌ ವಿಧಾ​ನ​ಸೌಧ ಪ್ರವೇ​ಶಿ​ಸು​ತ್ತಾರಾ?

ಪಂಚರತ್ನ ಯೋಜನೆಯ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಸುಮಾರು 50-60 ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಆಲಿಸಿದ್ದೇನೆ. ರಾಜ್ಯದ ಸರ್ವ ಜನರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಲು ನಿರ್ಧರಿಸಿದ್ದೇನೆ. ರೈತರು ಕೃಷಿಗಾಗಿ ಸಾಲ ಮಾಡುವುದನ್ನು ತಪ್ಪಿಸಲು ಮುಂಗಾರು ಪೂರ್ವದಲ್ಲಿ ಪ್ರತಿ ಎಕರೆಗೆ .10 ಸಾವಿರದಂತೆ ಕನಿಷ್ಠ 10 ಎಕರೆವರೆಗೆ ಗರಿಷ್ಠ .1 ಲಕ್ಷ ಸಹಾಯಧನ ನೀಡುತ್ತೇನೆ. ಭೂಮಿಯಿಲ್ಲದ ಕೃಷಿ ಕಾರ್ಮಿಕರ ಕುಟುಂಬಕ್ಕೆ ಮಾಸಿಕ .2 ಸಾವಿರ, ಬೀದಿ ಬದಿ ವ್ಯಾಪಾರಿಗಳು, ಸಣ್ಣಪುಟ್ಟವ್ಯಾಪಾರಿಗಳ ನೆರವಿಗೆ ಅರ್ಥಿಕ ಸಹಾಯ, ಪ್ರತಿ ವರ್ಷ ಯುವಜನರಿಗಾಗಿ 1 ಲಕ್ಷ ಉದ್ಯೋಗ ಸೃಷ್ಟಿ, ಮನೆಯಿಲ್ಲವರಿಗೆ .5 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಕೊಡುವ ಕಾರ್ಯಕ್ರಮ, ಕಬ್ಬಿನ ಬೆಲೆ ನಿಗದಿಗೆ ತಜ್ಞರ ವರದಿ ಪಡೆದು ಅದನ್ನು ಜಾರಿಗೊಳಿಸುತ್ತೇನೆ ಎಂದರು.

ಪಂಚರತ್ನ ಯೋಜನೆ ಜಾರಿಗಾಗಿ ಜೆಡಿಎಸ್‌ ಆಶೀರ್ವದಿಸಿ: ಬಡವರು, ಜನಸಾಮಾನ್ಯರ ಬದುಕಿಗೆ ಹೊಸ ಕಾಯಕಲ್ಪ ಒದಗಿಸುವ ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಬಹುಮತದಿಂದ ಜೆಡಿಎಸ್‌ ಸರ್ಕಾರ ರಚನೆಗೆ ಆಶೀರ್ವದಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಪಟ್ಟಣದ ಅನಂತ್‌ ರಾಂ ವೃತ್ತದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಡವರ ಬದುಕು ಸುಧಾರಣೆ ಕಂಡಿಲ್ಲ. ರೈತರು, ಬಡವರು, ನಿರುದ್ಯೋಗಿಗಳ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕಾಂಗ್ರೆಸ್‌ ಪಕ್ಷ ಇನ್ನು 50 ವರ್ಷ ಆದ್ರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ. ಈ ಹಿಂದೆ 5 ವರ್ಷ ಅಧಿಕಾರ ಮಾಡಿ ಏನು ಕೊಡಲಿಲ್ಲ. 71 ರಿಂದ 30ಕ್ಕೆ ಇಳಿಯುತ್ತದೆ. ನಮ್ಮ ಜೊತೆ ಸರ್ಕಾರ ರಚನೆ ಮಾಡಿ ಕುತಂತ್ರದಿಂದ ಪತನಗೊಳಿಸಿದರು. ಈಗ ಮುಸ್ಲಿಂರ ಮತ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಅವರಿಗೆ ಯಶಸ್ಸು ಸಿಗೋದಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್‌ನ ಯಾವುದೇ ಕುತಂತ್ರಗಳಿಗೆ ಮರುಳಾಗಬೇಡಿ. ಯಾವುದೇ ಸಮಾಜಗಳಿಗೆ ಗೌರವ ಕೊಡದವರನ್ನು ಮನೆಗೆ ಕಳಿಸುವ ತೀರ್ಮಾನ ಮಾಡಬೇಕು. ಇದು ಅವರ ಕೊನೆ ಚುನಾವಣೆ ಆಗಬೇಕು. ನಿಮ್ಮ ಅಭ್ಯರ್ಥಿ ಕುಮಾರಣ್ಣ ಅಂತ ಭಾವಿಸಿ ನಿಮ್ಮ ಮನೆ ಮಗ ಡಾ.ಕೆ.ಅನ್ನದಾನಿಯನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಾಗಲಕೋಟೆ ‘ಕಮಲ’ ಕೋಟೆ ಭೇದಿಸಲು ‘ಕೈ’ ರಣತಂತ್ರ

ಶಾಸಕ, ಜೆಡಿಎಸ್‌ ಅಭ್ಯರ್ಥಿ ಡಾ.ಕೆ.ಅನ್ನದಾನಿ ಮಾತನಾಡಿ, ತಾಲೂಕಿನಲ್ಲಿ ಸಿಪಿಐಎಂ ಪಕ್ಷವು ಜೆಡಿಎಸ್‌ಗೆ ಬೆಂಬಲ ಸೂಚಿಸುತ್ತದೆ. ಬಾಗೇಪಲ್ಲಿಯಲ್ಲಿ ಸಿಪಿಐಎಂ ಬೆಂಬಲಿಸಿದ್ದೇವೆ. ಸಾಯೋವರೆಗೂ ನಿಮ್ಮ ಋುಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕುರುಬ ಸಮುದಾಯದ ಮುಖಂಡರು ಬಂಡೂರು ಕುರಿಯನ್ನು ಕೊಟ್ಟು ಕಂಬಳಿಯನ್ನು ಹೊದಿಸಿ ಗೌರವ ಸಲ್ಲಿಸಿದರು. ಸಾವಿರಾರು ಮಂದಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios