Asianet Suvarna News Asianet Suvarna News

ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಶೆಟ್ಟರ್ ಹೋಗಿದ್ದಾರೆ: ಬಿ.ಎಸ್.ಯಡಿಯೂರಪ್ಪ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಆರ್ಭಟಿಸಿದ್ದು, ಬಹಿರಂಗ ಸಮಾವೇಶದಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Karnataka Election 2023 Former CM BS Yediyurappa Slams On Jagadish Shettar gvd
Author
First Published Apr 26, 2023, 9:37 PM IST

ಹುಬ್ಬಳ್ಳಿ (ಏ.26): ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಆರ್ಭಟಿಸಿದ್ದು, ಬಹಿರಂಗ ಸಮಾವೇಶದಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಗದೀಶ್ ಶೆಟ್ಟರ್ ನಂಬಿಕೆ ಮತ್ತು ವಿಶ್ವಾಸ ದ್ರೋಹ ಮಾಡಿದ್ದಾರೆ. ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಹೊರಟು ಹೋಗಿದ್ದಾರೆ. ಪಕ್ಷದ ಬೆನ್ನಿಗೆ ಚೂರಿ ಹಾಕಿ ಜಗದೀಶ್ ಶೆಟ್ಟರ್ ಹೋಗಿದ್ದಾರೆ. ಜೀವನದಲ್ಲಿ ಮರೆಯಲಾಗದ ಸೋಲನ್ನು ನೀವು ಅನುಭವಿಸುತ್ತೀರಿ. ಜಗದೀಶ್ ಶೆಟ್ಟರ್ ದ್ರೋಹ ಮಾಡಿರೋ ಬಗ್ಗೆ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಇನ್ನೂ ಹತ್ತು-ಹನ್ನೇರಡೂ ದಿನ ಜಗದೀಶ್ ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದರ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಎಂದರು. 

ಜಗದೀಶ್ ಶೆಟ್ಟರ್ ಅವರನ್ನ ಈ ಬಾರಿಗೆ ಮನೆಗೆ ‌ಕಳುಹಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಇಷ್ಟು ದೊಡ್ಡ ಮಟ್ಟದಲ್ಲಿ ಜನ್ರು ಸೇರಿದ್ದು ನೋಡಿದ್ರೆ ನನಗೆ ವಿಶ್ವಾಸ ಬಂದಿದೆ. ನಮಗೆ ದ್ರೋಹ ಮಾಡಿದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಮನೆಗೆ ಹೋಗುತ್ತಾರೆ.  ವಿಧಾನಸಭಾ ಚುನಾವಣೆಯಲ್ಲಿ ಸೋತ ಸವದಿಯನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ‌ ಮಾಡಿದ್ದೆ ನಾನು. ಅವನು ನನಗೆ ದ್ರೋಹ ಮಾಡಿದ್ದಾನೆ, ಇನ್ನೂ ಜಗದೀಶ್ ಶೆಟ್ಟರ್ ಕಥೆ ಬೇರೆ. ನಾವು ಯಾರು ಶೆಟ್ಟರ್ ಜೊತೆಗೆ ಯಾರು ಓಡಾಟ ಮಾಡಬೇಡಿ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಪಕ್ಷ, ಆ ಪಕ್ಷದ ನಾಯಕ ಯಾರು..?. ಅವರು ತಬ್ಬಲಿಗಳಾಗಿದ್ದಾರೆ ಎಂದರು.

ಉತ್ತಮ ಆಡಳಿತ, ಅಭಿವೃದ್ಧಿಯೇ ಬಿಜೆಪಿ ಧ್ಯೇಯ: ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌

ನನಗೆ ಈಗ 80 ವರ್ಷ, ನಾನು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನು ಈಗ ಇಲ್ಲಿ ಬಂದಿರುವ ಉದ್ದೇಶ ಶೆಟ್ಟರ್ ಅವರನ್ನ ಮನರಗೆ ಕಳುಹಿಸಲಿಕ್ಕೆ‌. ನರೇಂದ್ರ ಮೋದಿ, ಅಮಿತ್ ಶಾ ಎದುರು ಯಂಕಾ, ನಾಣಿ, ಶಿನ ಏನೂ ಮಾಡಲಿಕ್ಕೆ ಸಾಧ್ಯವಿಲ್ಲ. ಜಗದೀಶ್ ಶೆಟ್ಟರ್ ಮನೆಗೆ ಹೋಗ್ತಾರೆ, ಮಹೇಶ್ ತೆಂಗಿನಕಾಯಿ ಗೆದ್ದು ನಿಮ್ಮ ಸೇವೆ ಮಾಡ್ತಾರೆ. ನಾನು ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಮಾತು ಕೊಟ್ಟು ಬಂದಿದ್ದೇನೆ. 150 ಸ್ಥಾನದಲ್ಲಿ ಗೆದ್ದು ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರ್ತೆನಿ ಎಂದು ಮಾತು ಕೊಟ್ಟಿದ್ದೇನೆ. ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬನ್ನಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಚುನಾವಣೆ ಮುಗಿದ ಬಳಿಕ‌ ಇದೇ ಜಾಗದಲ್ಲಿ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿಯೇ 1 ಲಕ್ಷ ಜನರನ್ನ ಸೇರಿಸಿ ವಿಜಯೋತ್ಸವ ಮಾಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಡಬಲ್‌ ಎಂಜಿನ್‌ ಡಬಲ್‌ ಸ್ಪೀಡ್‌ ಆಗಲು ಬೆಂಬಲಿಸಿ: ಈ ಚುನಾವಣೆ ನಂದಲ್ಲ. ರಾಮಚಂದ್ರ ಗೌಡರದ್ದೂ ಅಲ್ಲ. ಇದು ನಿಮ್ಮದು. ನಿಮ್ಮ ವಿಕಾಸಕ್ಕೆ ನೀವೇ ಆರಿಸಿಕೊಳ್ಳುವಂತಹ ಹಾಗೂ ಅದರಿಂದ ಉಪಯೋಗ ಪಡೆದುಕೊಳ್ಳುವಂತಹ ಒಂದು ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು. ಶಿಡ್ಲಘಟ್ಟ ಪಟ್ಟಣದಲ್ಲಿ  ಬಿಜೆಪಿ ಅಭ್ಯರ್ಥಿ ಸೀಕಲ್‌ ರಾಮಚಂದ್ರ ಗೌಡರ ಪರವಾಗಿ ಮಯೂರ ವೃತ್ತದಿಂದ ಟಿ.ಬಿ ರಸ್ತೆ ಯವರೆಗೂ ಬ್ಯಾಂಡ್ಸೆಟ್‌ , ತಮಟೆ, ಡೊಳ್ಳು, ವೀರಗಾಸೆ, ಪಟಾಕಿ ಸಿಡಿಸಿ ಕಳಸಗಳನ್ನು ಹೊತ್ತ ಮಹಿಳೆಯರನ್ನು ಒಳಗೊಂಡ ಕಾರ್ಯಕರ್ತರೊಂದಿಗೆ ರೋಡ್‌ ಶೋ ಮಾಡುವ ಮೂಲಕ ಅಬ್ಬರದ ಪ್ರಚಾರ ನಡೆಸಿ ಅವರು ಮಾತನಾಡಿದರು. ಶಿಡ್ಲಘಟ್ಟದಲ್ಲಿ ಸೀಕಲ್‌ ರಾಮಚಂದ್ರ ಗೌಡ ಹಾಗೂ ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್‌ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಡಬಲ್‌ ಸ್ಪೀಡ್‌ ಆಗಲು ಬಿಜೆಪಿ ಗೆಲ್ಲಿಸಿ ನಮ್ಮ ಡಬ್ಬಲ್‌ ಎಂಜಿನ್‌ ಸರ್ಕಾರವನ್ನ ಡಬ್ಬಲ್‌ ಸ್ಪೀಡ್‌ ಆಗುವಂತೆ ಮತ ಚಲಾಯಿಸೋಣ. ನಮ್ಮ ಗುರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರೋವರೆಗೂ ಕರ್ನಾಟಕದ ಅಭಿವೃದ್ಧಿ ಖಂಡಿತ ಸಾಧ್ಯ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ನಿಮ್ಮ ಅಭಿವೃದ್ಧಿಗೆ ಕೆಲಸ ಮಾಡಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಜಾರಿಗೆ ತಂದಿದೆ ಎಂದರು. ಭಾರತೀಯ ಜನತಾ ಪಾರ್ಟಿಯ ಬೊಮ್ಮಾಯಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರೋಣ. ದೇಶ ವಿರೋಧಿ ಪಿಎಫ್‌ಐಯನ್ನು ಹೊಡೆದೋಡಿಸಿದ್ದು ನಮ್ಮ ಮೋದಿ ಸರ್ಕಾರ. ಭಯೋತ್ಪಾದಕರನ್ನು ಹೊಡೆದೋಡಿಸಲು ಕಮಲದ ಚಿನ್ಹೆಯನ್ನು ಮತ್ತೆ ಮೇ 10ಕ್ಕೆ ಒತ್ತಬೇಕೆಂದರು. 

ಭರವಸೆ ಈಡೇರಿಸದಿದ್ದರೆ ಮುಂದಿನ ಚುನಾವಣೆಗೆ ನಿಲ್ಲೋಲ್ಲ: ಸಚಿವ ಸುಧಾಕರ್‌

ಕೊನೆಯಲ್ಲಿ ಕೆ ಸುಧಾಕರ್‌ ಮತ್ತು ಸೀಕಲ್‌ ರಾಮಚಂದ್ರ ಗೌಡರ ಕೈಗಳನ್ನು ಮೇಲೆ ಎತ್ತುವ ಮೂಲಕ ವಿಜಯದ ಸಂಕೇತವನ್ನು ಸೂಚಿಸಿದರು. ಭಾರಿ ಜನಸ್ತೋಮ ಸೇರಿದ್ದ ಮೆರವಣಿಗೆಯಲ್ಲಿ ನಾಯಕರೆಲ್ಲರೂ ಜನರಿಗೆ ಬಿಜೆಪಿಗೆ ಮತ ನೀಡುವಂತೆ ಕೇಳಿಕೊಂಡರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios