ಉತ್ತಮ ಆಡಳಿತ, ಅಭಿವೃದ್ಧಿಯೇ ಬಿಜೆಪಿ ಧ್ಯೇಯ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್
ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಈ ಎರಡು ಸದೃಢ ಸರ್ಕಾರ ನಡೆಸಲು ಬುನಾದಿಯಾಗುತ್ತದೆ. ಇಂತಹ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.
ಶ್ರೀನಿವಾಸಪುರ (ಏ.26): ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಈ ಎರಡು ಸದೃಢ ಸರ್ಕಾರ ನಡೆಸಲು ಬುನಾದಿಯಾಗುತ್ತದೆ. ಇಂತಹ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು. ಅವರು ಇಂದು ತಾಲೂಕಿನ ಯಲ್ದೂರಿನಲ್ಲಿ ಭರ್ಜರಿ ರೊಡ್ ಶೊ ನಡೆಸಿ ಬಿಜೆಪಿ ಅಭ್ಯರ್ಥಿ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಪರ ಪ್ರಚಾರ ನಡೆಸಿ ಮತ ಯಾಚನೆ ಮಾಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ತರುವ ಮೂಲಕ ಡಬಲ್ ಎಂಜಿನ್ ಸರ್ಕಾರ ರಚನೆಗೆ ಇಲ್ಲಿನ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್‌ನಲ್ಲಿ ಸ್ಥಳೀಯ ನಾಯಕರೇ ಪ್ರಬಲ: ಬಿಜೆಪಿ ಕುಟುಂಬ ಪಕ್ಷ ಅಲ್ಲ ರಾಷ್ರೀಯ ಪಕ್ಷ. ಇದರ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಕಾಂಗ್ರೆಸ್ ಇದಕ್ಕೆ ಭಿನ್ನ ಅಲ್ಲಿ ರಾಷ್ಟ್ರೀಯ ಚಿಂತನೆಗಿಂತ ಮತ ಒಲೈಕೆ ಚಿಂತನೆಗೆ ಹೆಚ್ಚು ಆದ್ಯತೆ ನೀಡುತ್ತದೆ. ಹೈಕಮಾಂಡ್‌ಗಿಂತ ಸ್ಥಳೀಯ ನಾಯಕರು ಬಲಿಷ್ಠರಾಗಿ ಪಕ್ಷ ಮುನ್ನೆಡಿಸುತ್ತಾರೆ ಎಂದು ರಾಜಾಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಅಲ್ಲಿನ ಮುಖ್ಯಮಂತ್ರಿ ಆಶೋಕ್ ಗೆಹ್ಲೋಟ್ ಕಪಿ ಮುಷ್ಠಿಯಲ್ಲಿಟ್ಟುಕೊಂಡಿದ್ದಾರೆ ಎಂದು ವಿವರಿಸಿದರು.
ಚುನಾವಣೆಯಲ್ಲಿ ಮತ್ತೊಮ್ಮೆಎಚ್‌ಡಿಕೆಯನ್ನು ಜನ ಆರ್ಶಿವದಿಸಲಿದ್ದಾರೆ: ಅನಿತಾ ಕುಮಾರಸ್ವಾಮಿ
ವಿಧಾನಪರಿಷತ್ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಲಿಂಗಾಯಿತ ಸಮಾಜವನ್ನು ಒಡೆಯಲು ಮುಂದಾಗಿದ್ದರು. ಅದಕ್ಕೆ ಪ್ರತಿಫಲ ಎನ್ನುವಂತೆ ಜನ ತೀರ್ಪು ನೀಡಿದ್ದರು. ಕೋಲಾರದ ಘಟಬಂಧನ್ ನಾಯಕರು ತಮ್ಮ ಗೆಲವಿಗೆ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರಲು ಮುಂದಾಗಿದ್ದರು. ಕೊನೆಗೆ ಸಿದ್ದರಾಮಯ್ಯ ಘಟಬಂಧನ್ ಮುಖಂಡರಿಗೆ ಕೈಕೊಟ್ಟಿದ್ದರಿಂದ ದಯನೀಯ ಪರಿಸ್ಥಿತಿ ಏರ್ಪಟ್ಟಿದೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಅಂದುಕೊಂಡ ಫಲಿತಾಂಶ ಬರುವುದಿಲ್ಲ ಎಂದರು.
ಜೆಡಿಎಸ್ ಕುಟುಂಬ ರಾಜಕಾರಣ: ಜೆಡಿಎಸ್ ಕುಟುಂಬ ಇಡಿ ಕುಟುಂದ ಸದಸ್ಯರು ಅಧಿಕಾರದಲ್ಲಿದ್ದಾರೆ ಈಗ ಮತ್ತೆ ಸೀಟಿಗಾಗಿ ಕಾದಾಟಾ ನಡೆಸುತ್ತಿದ್ದಾರೆ ಪಕ್ಷವನ್ನು ತಮ್ಮ ಕುಟುಂಬಕ್ಕೆ ಬಳಸಿಕೊಳ್ಳುತ್ತಿದ್ದಾರೆ ಬಿಜೆಪಿ ಕುಟುಂಬ ಹಾಗು ವಂಶಪಾರಂಪರ್ಯದ ಪಕ್ಷ ಅಲ್ಲ. ಇದು ಕಾರ್ಯಕರ್ತರ ಪಕ್ಷ ಇಲ್ಲಿ ದೇಶ ರಕ್ಷಣೆಯೆ ಮುಖ್ಯ ಚಿಂತನೆ ಹೊಂದಿದೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಧ್ಯೇಯೋದ್ಧೇೕಶದಿಂದ ಇಲ್ಲಿನ ರೈತರು ಕಾರ್ಮಿಕರು ಮಹಿಳೆಯರು ಯುವಕರನ್ನು ಕಾಪಾಡುವ ಅಜೆಂಡ ಇಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೆವೆ ಎಂದರು.
ಹಾಸನಕ್ಕೆ ಶಾ ಭೇಟಿ: ನಮಗೆ ದೇವೇಗೌಡ, ಕುಮಾರಣ್ಣನೇ ಸಾಕು, ಇನ್ಯಾರು ಬೇಡ ಎಂದ ಎಚ್.ಡಿ.ರೇವಣ್ಣ
ಯಲ್ದೂರಿನಲ್ಲಿ ನಡೆದಂತ ರೊಡ್ ಶೊ ನಂತರ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಬಿಜೆಪಿ ಅಭ್ಯರ್ಥಿ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಅವರೊಂದಿಗೆ ಸುದೀರ್ಘವಾದ ಮಾತು ಕತೆ ನಡೆಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ್ ರೆಡ್ಡಿ,ಹಿರಿಯ ಮುಖಂಡ ಪನಸಮಾಕಲಹಳ್ಳಿನಾರಯಣಸ್ವಾಮಿ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್, ರಾಜಶೇಖರೆಡ್ಡಿ,ಯಲ್ದೂರು ಪದ್ಮನಾಭ್,ಲಕ್ಷಮಣಗೌಡ ಇತರರು ಇದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.