ಬಜರಂಗದಳವನ್ನು ಟಚ್‌ ಮಾಡಿದರೆ ಭಸ್ಮವಾಗಿ ಬಿಡ್ತೀರಾ: ಬಿ.ಎಸ್‌.ಯಡಿಯೂರಪ್ಪ

ದೇಶದಲ್ಲಿ ಬಜರಂಗ ನಿಷೇಧ ಮಾಡುವುದಿರಲಿ, ಬಜರಂಗದಳವನ್ನು ಮುಟ್ಟಿದರೆ ನೀವು ಭಸ್ಮವಾಗುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Karnataka Election 2023 Former CM BS Yediyurappa Slams On Congress Over Bajrang Dal Ban gvd

ಪೀಣ್ಯ ದಾಸರಹಳ್ಳಿ (ಮೇ.05): ದೇಶದಲ್ಲಿ ಬಜರಂಗ ನಿಷೇಧ ಮಾಡುವುದಿರಲಿ, ಬಜರಂಗದಳವನ್ನು ಮುಟ್ಟಿದರೆ ನೀವು ಭಸ್ಮವಾಗುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅವರು ಆಯೋಜನೆಗೊಂಡಿದ್ದ ವೀರಶೈವ ಮುಖಂಡರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಮುನಿರಾಜು ಪರ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಯಡಿಯೂರಪ್ಪ, ಪ್ರಧಾನಿ ಮೋದಿ ಅವರು ಕರ್ನಾಟಕದ ಬಗ್ಗೆ ವಿಶೇಷ ಅಭಿಮಾನ ಗೌರವ ಇಟ್ಟುಕೊಂಡಿದ್ದಾರೆ. 

ಅವರಿಗೆ ಗೌರವ ತರಬೇಕಾದರೆ ಬೆಂಗಳೂರಿನಲ್ಲಿ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕಾಗಿದೆ. ರಾಜ್ಯದಲ್ಲಿ 130-135 ಸೀಟು ಗೆದ್ದು ಈ ಭಾರಿ ಸ್ಪಷ್ಟಬಹುಮತದಿಂದ ಯಾರ ಹಂಗಿಲ್ಲದೇ ಅಧಿಕಾರಕ್ಕೆ ಬರುತ್ತದೆ. ಸೂರ್ಯ ಚಂದ್ರ ಇರುವುದು ಎಷ್ಟುಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು. ನೀವು ಪ್ರಾಮಾಣಿಕವಾಗಿ ಪಕ್ಷದ ಪರ ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿಸದಂತೆ ಕೆಲಸ ಮಾಡಿ. ಮುನಿರಾಜು ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದ ಬಿಎಸ್‌ವೈ, ಚುನಾವಣೆ ಮುಗಿದ ನಂತರ ನಾನು ಮತ್ತೊಮ್ಮೆ ದಾಸರಹಳ್ಳಿಗೆ ವಿಜಯೋತ್ಸವ ಆಚರಿಸಲು ಬರುತ್ತೇನೆ ಎಂದರು.

ಏಷ್ಯಾನೆಟ್‌ ಸುವರ್ಣನ್ಯೂಸ್‌ ಸಮೀಕ್ಷೆ: ಬಿಜೆಪಿ ಅತಿದೊಡ್ಡ ಪಕ್ಷ, ಕಾಂಗ್ರೆಸ್‌ಗೆ 2ನೇ ಸ್ಥಾನ

ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗು. ಆ ಪಕ್ಷ ನಾಯಕ ರಾಹುಲ್‌ ಗಾಂಧಿಗೆ ಮೋದಿ, ಅಮಿತ್‌ ಶಾ ಎದುರು ನಿಲ್ಲಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಹಾಲಿಗೆ ಪ್ರೋತ್ಸಾಹ ಧನ .5ರಿಂದ 7 ಹೆಚ್ಚಿಗೆ ನೀಡಲು ನಮ್ಮ ಪ್ರಣಾಳಿಕೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದರು. ಅಭ್ಯರ್ಥಿ ಮುನಿರಾಜು ಮಾತನಾಡಿ, 2008, 2013ರ ಸಾರ್ವಜನಿಕರ ಚುನಾವಣೆಯಲ್ಲಿ ಯಡಿಯೂರಪ್ಪ ಅಪ್ಪಾಜಿ ಅವರು ದಾಸರಹಳ್ಳಿ ಕ್ಷೇತ್ರಕ್ಕೆ ಬಂದಿದ್ದರು. ಆಗ ನಾನು ಗೆದ್ದು ಶಾಸಕನಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದೆ. ಆದರೆ 2018ರಲ್ಲಿ ಅವರು ಕ್ಷೇತ್ರಕ್ಕೆ ಬರದೇ ಇದ್ದುದರಿಂದ ನಾನು ಸೋಲಬೇಕಾಯಿತು. 

ರಾಮ-ಹನುಮನಂತೆ ಬಜರಂಗಿ, ಬಜರಂಗ ದಳ ಸಂಬಂಧ: ಸಿಎಂ ಬೊಮ್ಮಾಯಿ

ಆದರೆ ಈ ಬಾರಿ ಬಿಎಸ್‌ವೈ ದಾಸರಹಳ್ಳಿಗೆ ಬಂದಿದ್ದಾರೆ. ನನ್ನ ಗೆಲುವು ನೂರಕ್ಕೆ ನೂರು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಪಾಲಿಕೆ ಮಾಜಿ ಸದಸ್ಯರಾದ ಟಿ.ಎಸ್‌. ಗಂಗರಾಜು, ತಿಮ್ಮನಂಜಯ್ಯ, ನಿಸರ್ಗ ಕೆಂಪರಾಜು, ಡಿ.ಕೆ.ಮಹೇಶ್‌, ಪಿ.ಎಚ್‌.ರಾಜು, ಗುರುಪ್ರಸಾದ್‌, ಮೇದರಹಳ್ಳಿ ಸೋಮಶೇಖರ್‌, ನಿಶ್ಚಲ, ಅಭಿಷೇಕ್‌ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios