ಚುನಾವಣೆಯಲ್ಲಿ ಬಿಜೆಪಿ ಹಣ ಹರಿಸಲಿದೆ, ಎಚ್ಚರವಹಿಸಿ: ಎಸ್.ಎಸ್.ಮಲ್ಲಿಕಾರ್ಜುನ
ಭ್ರಷ್ಟಾಚಾರದ ಹಣವನ್ನು ಬಿಜೆಪಿಯವರು ಚುನಾವಣೆಯಲ್ಲಿ ಖರ್ಚು ಮಾಡುವ ಸಂಭವ ಇದ್ದು, ಇಂತಹವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಿರಬೇಕು ಎಂದು ಕಾಂಗ್ರೆಸ್ ಉತ್ತರದ ಅಭ್ಯರ್ಥಿ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಿವಿಮಾತು ಹೇಳಿದ್ದಾರೆ.
ದಾವಣಗೆರೆ (ಏ.16): ಭ್ರಷ್ಟಾಚಾರದ ಹಣವನ್ನು ಬಿಜೆಪಿಯವರು ಚುನಾವಣೆಯಲ್ಲಿ ಖರ್ಚು ಮಾಡುವ ಸಂಭವ ಇದ್ದು, ಇಂತಹವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಿರಬೇಕು ಎಂದು ಕಾಂಗ್ರೆಸ್ ಉತ್ತರದ ಅಭ್ಯರ್ಥಿ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಿವಿಮಾತು ಹೇಳಿದ್ದಾರೆ. ನಗರದ 29ನೇ ವಾರ್ಡ್‌ನ ನಿಟುವಳ್ಳಿ, ಆಂಜನೇಯ ಬಡಾವಣೆ, ಶ್ರೀ ಕೊಟ್ಟೂರೇಶ್ವರ ಬಡಾವಣೆಯ ಸುತ್ತಮುತ್ತ ಶನಿವಾರ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಸಮೇತ ಮನೆ ಮನೆಗಳಿಗೆ ತೆರಳಿ ಮತಯಾಚಿಸಿ ಮಾತನಾಡಿ, ಬಿಜೆಪಿಯವರು ಹಣವನ್ನು ಹರಿಸುವ ಸಾಧ್ಯತೆ ಇದ್ದು, ಚುನಾವಣೆ ಮುಗಿಯುವವರೆಗೂ ನಮ್ಮೆಲ್ಲಾ ಮುಖಂಡರು, ಕಾರ್ಯರ್ತರು ಮೈಯೆಲ್ಲಾ ಕಣ್ಣಾಗಿಸಿ, ಕಾರ್ಯ ನಿರ್ವಹಿಸಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಸ್ವಂತ ಬಲದಿಂದ ಅಧಿಕಾರವನ್ನೇ ನಡೆಸಿಲ್ಲ. ಕೋಟಿ ಕೋಟಿಗಟ್ಟಲೇ ಹಣ ಕೊಟ್ಟು, ಎದುರಾಳಿ ಪಕ್ಷಗಳ ಶಾಸಕರನ್ನು ಖರೀದಿಸಿ, ವಾಮಮಾರ್ಗದಿಂದಲೇ ಅಧಿಕಾರ ನಡೆಸಿದೆ. ಈ ಬಾರಿ ಬಿಜೆಪಿಯವರ ದುಡ್ಡಿನ ಆಟಕ್ಕೆ ಮತದಾರರು ತಕ್ಕ ಪಾಠವನ್ನೇ ಕಲಿಸಲಿದ್ದಾರೆ. ಬಿಜೆಪಿ ಆಳ್ವಿಕೆಯಿಂದ ಜಿಲ್ಲೆ, ರಾಜ್ಯದ ಜನತೆ ಬೇಸತ್ತಿದ್ದು, ಇಂತಹ ಭ್ರಷ್ಟಸರ್ಕಾರವನ್ನು ಕಿತ್ತೊಗೆಯಲು ನಿರ್ಧಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೂ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಾಮಮಾರ್ಗದಿಂದಲೇ ಅಧಿಕಾರವನ್ನು ಹಿಡಿದ ಬಿಜೆಪಿಯ ಬಣ್ಣ, ಬಂಡವಾಳ ಈಗ ಒಂದೊಂದಾಗಿ ಹೊರ ಬರುತ್ತಿವೆ.
ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ
ಬಿಜೆಪಿಯವರ ಒಳ ಜಗಳಗಳೇ ಇಂತಹವರು ಏನು ಮಾಡಿದ್ದಾರೆಂಬುದು ಜಗಜ್ಜಾಹಿರಾಗುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಸಾಧ್ಯ. ಹಾಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಎಸ್ಸೆಸ್ ಮಲ್ಲಿಕಾರ್ಜುನ ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕೊಟ್ಟಮಾತಿನಂತೆ ನಡೆದುಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ: ಸಚಿವ ಬಿ.ಸಿ.ಪಾಟೀಲ್
ನಿಟುವಳ್ಳಿಯ ಮಣಿಕಂಠ ವೃತ್ತದಿಂದ ಆರಂಭವಾದ ಪ್ರಚಾರದಲ್ಲಿ ಮುಖಂಡರಾದ ಆರ್.ಎಚ್.ನಾಗಭೂಷಣ್, ರೇಣುಕಮ್ಮ ಪುಟ್ಟಪ್ಪ, ಡಿ.ಎಸ್.ಕೆ.ಪರಶುರಾಮ, ಕೆ.ಜಿ.ಶಿವಕುಮಾರ, ಪ್ರವೀಣಕುಮಾರ ಹುಲ್ಮನಿ, ನಿಟುವಳ್ಳಿ ಪ್ರವೀಣ, ಗಣೇಶ ಹುಲ್ಮನಿ, ಮಂಜಮ್ಮ, ಟಿ.ಡಿ.ಹಾಲೇಶ, ಶಿವಯೋಗಿ, ಹುಲಿಕಟ್ಟೆಚನ್ನಬಸಪ್ಪ, ಶಿವಯೋಗಿ, ಶಂಕರ, ಎನ್.ಜಿ.ಪುಟ್ಟಸ್ವಾಮಿ, ಪ್ರಕಾಶಷ ವಿಜಯಕುಮಾರ, ರಾಜು, ಸ್ಲಂ ಚಂದ್ರಪ್ಪ, ತರಕಾರಿ ಅಜ್ಜಪ್ಪ, ಯಶವಂತ, ಮಲ್ಲು, ಸಿದ್ದಪ್ಪ, ಹನುಮಂತ, ಮಹೇಶ್ವರಪ್ಪ, ಗುರುಶಾಂತಪ್ಪ, ಪುಷ್ಪಾವತಿ, ಹಾಲೇಶ, ಪಾಪಮ್ಮ, ರತ್ನಮ್ಮ, ಕಾವೇರಮ್ಮ, ನೀಲಮ್ಮ, ಉಮಾ, ನಾಗಮ್ಮ, ರಿಂದಮ್ಮ, ದುರ್ಗಾ ಶಂಕರಮೂರ್ತಿ ಇತರರು ಇದ್ದರು.