ನಾನು ಉಪಚುನಾವಣೆಗೂ ಮುನ್ನ ಕ್ಷೇತ್ರದ ಸವಾಂರ್‍ಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಮತದಾರರಿಗೆ ಮಾತು ಕೊಟ್ಟಿದ್ದೆ. ಅದೇ ಪ್ರಕಾರ ಈಗ ಅಸಂಖ್ಯ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮುಂದಿನ ಬಾರಿಯೂ ನನಗೆ ಆಶೀರ್ವಾದ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮನವಿ ಮಾಡಿದರು. 

ಹಿರೇಕೆರೂರ (ಏ.15): ನಾನು ಉಪಚುನಾವಣೆಗೂ ಮುನ್ನ ಕ್ಷೇತ್ರದ ಸವಾಂರ್‍ಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಮತದಾರರಿಗೆ ಮಾತು ಕೊಟ್ಟಿದ್ದೆ. ಅದೇ ಪ್ರಕಾರ ಈಗ ಅಸಂಖ್ಯ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮುಂದಿನ ಬಾರಿಯೂ ನನಗೆ ಆಶೀರ್ವಾದ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮನವಿ ಮಾಡಿದರು. ಪಟ್ಟಣದ ಅವರ ನಿವಾಸದಲ್ಲಿ ತಾಲೂಕಿನ ಬಣಜಿಗ ಸಮಾಜದ ಮುಖಂಡರ ಸಭೆ ನಡೆಸಿ ಮಾತನಾಡಿದರು. ಬಿಜೆಪಿಯ ಮೂಲ ಧ್ಯೇಯವೇ ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡಿಸುವುದು, ಬಡತನ, ಹಸಿವು, ನಿರುದ್ಯೋಗ ಹೋಗಲಾಡಿಸುವುದಾಗಿದೆ. 

ದೇಶದ ಸರ್ವತೋಮುಖ ಅಭಿವೃದ್ಧಿಗೋಸ್ಕರ ಅನೇಕ ಜನಪ್ರಿಯ ಕಾರ್ಯಕ್ರಮ ಜಾರಿಗೆ ತರುವ ಮೂಲಕ ದೇಶದ ಜನರನ್ನು ಸಬಲರನ್ನಾಗಿ ಮಾಡಲಾಗುತ್ತಿದೆ. ದೇಶದ ಕಟ್ಟಕಡೆಯ ವ್ಯಕ್ತಿಯೂ ಸಹ ಆರ್ಥಿಕವಾಗಿ ಸದೃಢ ಮತ್ತು ಸಾಮಾಜಿಕವಾಗಿ ಭದ್ರತೆ ಹೊಂದಬೇಕು ಎನ್ನುವ ಗುರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮಾಸೂರಿನಲ್ಲಿ ಗಾಮೆಂರ್‍ಟ್‌ ಸ್ಥಾಪಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ಥಳೀಯವಾಗಿ ಉದ್ಯೋಗ ಪಡೆಯಲಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ವಿಷಯದಲ್ಲೂ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸಿದೆ ಎಂದರು.

ನನಗೆ ಮಂತ್ರಿಯಾಗುವ ಅವಕಾಶವಿದೆ ಗೆಲ್ಲಿಸಿ​: ಮಾಲೀಕಯ್ಯ ಗುತ್ತೇದಾರ್‌

ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಮದ್ವೀರಶೈವ ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಹಂಪಾಳಿ, ಪಪಂ ಸದಸ್ಯ ಗುರುಶಾಂತ ಯತ್ತಿನಹಳ್ಳಿ, ಚನ್ನವೀರಪ್ರಭು ಕುಬಸದ, ಬಾಬಣ್ಣ ಅಣಗೊಂಡರ, ಮಂಜಣ್ಣ ತಿಪ್ಪಶೆಟ್ಟಿ, ಇಂದುಧರ ಶೆಟ್ಟರ, ವ್ಯವಸಾಯೇತರ ಸಹಕಾರಿ ಸಂಘದ ಅಧ್ಯಕ್ಷ ಸಿದ್ಧಲಿಂಗೇಶ ಶೆಟ್ಟರ, ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬಣ್ಣ ಹಂಚಿನ, ಚಂದ್ರಣ್ಣ ಕಲ್ಯಾಣಿ, ಮಲ್ಲಿಕಾರ್ಜುನ ಹಳಕಟ್ಟಿ, ಶಂಭು ಹಂಜಿ, ಶಿವಲಿಂಗಣ್ಣ ಕಲ್ಯಾಣಿ, ಇರಣ್ಣ ಹಾದ್ರಿಹಳ್ಳಿ, ಶಂಭುಲಿಂಗ ಮೊಗಲಿ, ಶಿವಾನಂದ ಅಂಗಡಿ, ಪ್ರಕಾಶ ಮಾಳ್ವಿ, ಸಂತೋಷ ಚಂಚಿ, ಗಿರೀಶ ವಾಲಿ, ರಾಜಣ್ಣ ಚಿನ್ನಿಕಟ್ಟಿ, ನಾಮದೇವ ಸಿಂಪಿ ಸಮಾಜದ ಈಶ್ವನಾಥ ಖಾಂಡ್ಕೆ, ರಾಮನಾಥ ಚೌಧರಿ, ಮಂಜುನಾಥ ಖಟಾವಕರ, ನರಹರಿ ಬೊಂಗಾಳೆ, ಭಾಸ್ಕರ್‌ ರಾಕುಂಡೆ ಹಾಜರಿದ್ದರು.

ಹಿರೇಕೆರೂರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರು. ಅನುದಾನ: ತಾಲೂಕಿನಲ್ಲಿ ಸಾವಿರಾರು ಕೋಟಿ ರು. ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು. ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಮತಯಾಚನೆ ಮಾಡಿದರು. ತಾಲೂಕಿನಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರು, ರಸ್ತೆ ನಿರ್ಮಾಣ ಮತ್ತಿತರ ಕೆಲಸಗಳು ನಡೆದಿವೆ. ಮಾಸೂರಿನಲ್ಲಿ ಗಾರ್ಮೆಂಟ್‌ ಫ್ಯಾಕ್ಟರಿ ಆರಂಭ, ಅಲದಗೇರಿಯಲ್ಲಿ ಜವಳಿ ಪಾರ್ಕ್ ನಿರ್ಮಾಣದಿಂದ ಅನೇಕ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.

ಸಮುದಾಯ ಒಡೆಯುವ ಕೀಳು ರಾಜಕಾರಣಿ ನಾನಲ್ಲ: ಸಚಿವ ಸುಧಾಕರ್‌

ತಾಲೂಕಿನಲ್ಲಿ ಮತ್ತಷ್ಟುಅಭಿವೃದ್ಧಿ ಕಾರ್ಯಗಳಾಗಲು ಮತದಾರರನ್ನು ತಮ್ಮನ್ನು ಬೆಂಬಲಿಸಬೇಕು ಎಂದು ಅವರು ಕೋರಿದರು. ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಎಸ್‌.ಎಸ್‌. ಪಾಟೀಲ, ಎನ್‌.ಎಂ. ಈಟೇರ, ಡಿ.ಸಿ. ಪಾಟೀಲ, ಬಿ.ಎನ್‌. ಬಣಕಾರ, ರವಿಶಂಕರ ಬಾಳಿಕಾಯಿ ಹಾಗೂ ಕಾರ್ಯಕರ್ತರು, ಗ್ರಾಮದ ಮುಖಂಡರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.