ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್, ದಳಪತಿಗಳ ಭದ್ರಕೋಟೆಯಲ್ಲಿ ಗುಡುಗಿದ ಮೋದಿ
ಚನ್ನಪಟ್ಟಣದ ಸಮಾವೇಶದಲ್ಲಿ ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್ ಎಂದಿರುವ ಪ್ರಧಾನಿ ಮೋದಿ ವೈಯಕ್ತಿಕವಾಗಿ ಜೆಡಿಎಸ್ ವರಿಷ್ಠ ದೇವೆಗೌಡರ, ಹೆಚ್ ಡಿ ಕುಮಾರಸ್ವಾಮಿ, ಡಿಕೆಶಿ ಹೆಸರು ಪ್ರಸ್ತಾಪ ಮಾಡದೇ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ (ಏ.30): ಜೆಡಿಎಸ್‌ನ ಭದ್ರ ಕೋಟೆ ಬೊಂಬೆಗಳ ನಗರಿ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಭರ್ಜರಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ. ಕನ್ನಡಲ್ಲೇ ಭಾಷಣ ಆರಂಭಿಸಿದ ಮೋದಿ ರಾಮ ಅನುಗ್ರಹಿಸಿದ ರಾಮನಗರ ಜನರಿಗೆ ನಮಸ್ಕಾರ. ಸಂತ ಶ್ರೇಷ್ಠರಿಗೆ ನಮಸ್ಕಾರ ಮಾಡ್ತೇನೆ ಎಂದರು. ಜೊತೆಗೆ ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್ ಎಂದ ಮೋದಿ, ಡಬಲ್ ಎಂಜಿನ್ ಸರ್ಕಾರದ ಅಗತ್ಯತೆಯನ್ನು ಪ್ರತಿಪಾದನೆ ಮಾಡಿದರು. ಅಭಿವೃದ್ಧಿ ಮಂತ್ರ ಪಠಣದ ಮೂಲಕ ಮತಯಾಚನೆ ಮಾಡಿದ ಮೋದಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರಾಮನಗರಕ್ಕೆ ಆದ ಲಾಭ ವಿವರಿಸಿದರು. ವೈಯಕ್ತಿಕವಾಗಿ ಜೆಡಿಎಸ್ ವರಿಷ್ಠ ದೇವೆಗೌಡರ, ಹೆಚ್ ಡಿ ಕುಮಾರಸ್ವಾಮಿ, ಡಿಕೆಶಿ ಹೆಸರು ಪ್ರಸ್ತಾಪ ಮಾಡದೇ ವಾಗ್ದಾಳಿ ನಡೆಸಿದರು.
ಈ ಚುನಾವಣೆ ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡೋದಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಎಟಿಎಂ ಆಗಿದೆ. ಕರ್ನಾಟಕದ ವಿಕಾಸ ನಿಶ್ಚಯ ಮಾಡಲಿದೆ. ಅಭಿವೃದ್ಧಿ ಸಂಕಲ್ಪ ಬಿಜೆಪಿ ಮಾತ್ರ ಮಾಡಲಿದೆ. ದೇಶದ ವಿಕಾಸದ ಎಂಜೀನ್ ಕರ್ನಾಟಕ ಆಗಿದೆ. ಅತಂತ್ರ ಸರ್ಕಾರದ ನಾಟಕ ನೋಡಿದ್ದೇವೆ. ಲೂಟಿ ಹೊಡೆಯುವ ಸರ್ಕಾರ ನೋಡಿದ್ದೇವೆ. ಅಭಿವೃದ್ಧಿ ಸರ್ಕಾರ ಅದಲ್ಲ. ಎರಡು ಪಕ್ಷಗಳು ಒಟ್ಟಿಗೆ ಇರುತ್ತದೆ. ಕುಟುಂಬ ರಾಜಕಾರಣದ ಪಕ್ಷಗಳು ಅವು. ನಮಗೆ 15 ರಿಂದ 20 ಸೀಟ್ ಬಂದ್ರೆ ಸಾಕು ಅಂತಿವೆ. ನಾವೇ ಕಿಂಗ್ ಮೇಕರ್ ಅಂತಾರೆ. ಜೆಡಿಎಸ್ ಕಾಂಗ್ರೆಸ್ ನ ಬೀ ಟೀಮ್ ತರಹ ಇರಲಿದೆ. ಇದಕ್ಕಾಗಿ ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಜೆಡಿಎಸ್‌ಗೆ ಮೋದಿ ಟಾಂಗ್ ಕೊಟ್ಟಿದ್ದಾರೆ.
ಜೆಡಿಎಸ್ ಗೆ ಕೊಡುವ ಓಟು ಕಾಂಗ್ರೆಸ್ ಗೆ ಹೋಗಲಿದೆ. ಇವರು ದೆಹಲಿಯಲ್ಲಿ, ಸಂಸತ್ ನಲ್ಲಿ ಜೊತೆಗೆ ಇರ್ತಾರೆ. ಕರ್ನಾಟಕದ ಲಕ್ಷಾಂತರ ಕುಟುಂಬಕ್ಕೆ ನಷ್ಟ ಆಗಬಾರದು. ಅದು ನೆನಪಿನಲ್ಲಿ ಇರಲಿ. ಯಾವಾಗ ಕಾಂಗ್ರೆಸ್, ಜೆಡಿಎಸ್ ಸರ್ಕಾರ ಇರುತ್ತೋ ಅವರಿಗೆ ಕೆಲವು ವಿಶಿಷ್ಟ ಕುಟುಂಬದ ಪರಿವಾರದವರಾಗಿರುತ್ತಾರೆ. ಆದರೆ ಬಿಜೆಪಿಗೆ ರಾಜ್ಯದ ಪ್ರತಿಯೊಬ್ಬರೂ ನಮ್ಮ ಪರಿವಾರ ಎಂದುಕೊಂಡಿದೆ.
ಹಾವು ಶಿವನ ಹಾರ, ನನಗೆ ಜನರೇ ಶಿವ: ಕಾಂಗ್ರೆಸ್‌ನ ವಿಷಸರ್ಪ ಹೇಳಿಕೆ ಮೋದಿ ಟಾಂಗ್
ರಾಮನಗರದ ಜಿಲ್ಲೆಯಲ್ಲಿ 3 ಲಕ್ಷ ಜನರ ಬ್ಯಾಂಕ್ ಖಾತೆ ತೆರೆಯಲಾಗಿದೆ. ಕಾಂಗ್ರೆಸ್ ಯಾವಾಗಲೂ ವಿಶ್ವಾಸಘಾತಕ ಪಕ್ಷ. ರೈತರ ಹೆಸರಿನಲ್ಲಿ ವಿಶ್ವಾಸದ್ರೋಹದ ಕೆಲಸ ಕಾಂಗ್ರೆಸ್ ಮಾಡಿದೆ. ಸುಳ್ಳು ಸಾಲಮನ್ನಾ ಘೋಷಣೆ ಮಾಡಿತ್ತು. ಅವರ ಕಡೆಯವರು ಮಾತ್ರ ಸಾಲ ಮನ್ನಾ ಲಾಭ ಪಡೆದರು. ಆದರೆ ನಿಜವಾದ ಲಾಭ ರೈತರಿಗೆ ಸಿಕ್ಕಿಲ್ಲ. ರೈತರ ಸಾಲಮನ್ನಾದ ದೊಡ್ಡ ಭಾಗ ಭ್ರಷ್ಟಾಚಾರಿಗಳಿಗೆ, ಅವರ ಸಂಬಂಧಿಗಳಿಗೆ ಹೋಗಿತ್ತು.
ಬನ್ನಿ ರನ್ನಿಂಗ್ ಮಾಡೋಣ, ಯಾರ್ ಗೆಲ್ತಾರೆ ನೋಡೋಣ ಮೋದಿಗೆ ಸವಾಲೆಸೆದ ಸಿದ್ದು!
ಇದೇ ಕಾಂಗ್ರೆಸ್- ನ ಟ್ರ್ಯಾಕ್ ರೆಕಾರ್ಡ್. ಕಾಂಗ್ರೆಸ್- ನ ಗ್ಯಾರಂಟಿ ಸುಳ್ಳಿನ ಬಂಡಲ್. ಕಾಂಗ್ರೆಸ್ ನವರು ಈಗ ಸುಳ್ಳಿನ ಗ್ಯಾರಂಟಿ ಇಟ್ಕೊಂಡು ತಿರುಗಾಡ್ತಾ ಇದ್ದಾರೆ. ನಿಜವಾದ ಗ್ಯಾರಂಟಿ ಅಂದ್ರೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ. ರಾಜ್ಯದ ರೈತರಿಗೆ 18 ಸಾವಿರ ಕೋಟಿ ರೂ ಸಿಕ್ಕಿದೆ. ಇದು ಡಬಲ್ ಎಂಜಿನ್ ಸರ್ಕಾರದ ಗ್ಯಾರಂಟಿ. ಕೇಂದ್ರ ಸರ್ಕಾರದಿಂದ 5 ಲಕ್ಷ ರೂಗಳವರೆಗೆ ಉಚಿತ ಚಿಕಿತ್ಸೆ ನೆರವು ಕೊಡಲಾಗಿದೆ. ರಾಮನಗರ ಜಿಲ್ಲೆಯ 3 ಲಕ್ಷ ಜನರಿಗೆ ಇದರ ಲಾಭ ಇದೆ. ಇದು ರೇಷ್ಮೆ ನಾಡು ರೇಷ್ಮೆ ರೈತರಿಗೆ ಉಚಿತ ಸಹಾಯ ನಮ್ಮ ಸರ್ಕಾರ ನೀಡಿದೆ. 10 ಸಾವಿರ ರೂ ಸಹಾಯ ನೀಡಿದೆ. ಇದರಿಂದ ರೈತರ ಆದಾಯ ಹೆಚ್ಚಾಗಿದೆ. ರಪ್ತು ಹೆಚ್ಚಾಗಿದೆ. ಕಾಂಗ್ರೆಸ್ ನ ಗ್ಯಾರಂಟಿ ಮುಗಿದು ಹೋಗಲಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.