ಅಧಿವೇಶ ಆರಂಭಕ್ಕೂ ಮುನ್ನವೇ ಜನಪ್ರತಿನಿಧಿಗಳಗೆ ಕೊರೋನಾ ಶಾಕ್ ಕೊಡುತ್ತುದೆ. ಇದೀಗ ಉಪಮುಖ್ಯಮಂತ್ರಿಗೂ ಕೊರೋನಾ ಪಾಸಿಟಿವ್ .

ಬೆಂಗಳೂರು, (ಸೆ.19): ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬೆನ್ನಲ್ಲೇ ಇದೀಗ ಉಪ ಮುಖ್ಯಮಂತ್ರಿ ಡಾ. ಸಿ.ಎನ್​. ಅಶ್ವಥ್ ನಾರಾಯಣ್​ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. 

ಸೆ.16ರಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕೊರೋನಾ ಸೋಂಕು ತುಗುಲಿದ್ದು, ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಡಿಸಿಎಂ ಅಶ್ವಥ್ ನಾರಾಯಣ್‌ಗೂ ಕೋವಿಡ್​ ಪಾಸಿಟಿವ್​ ಬಂದಿದೆ. ಈ ಬಗ್ಗೆ ಸ್ವತಃ ಅಶ್ವಥ್​ ನಾರಾಯಣ್​ ಅವರೇ ಟ್ವಿಟರ್​ನಲ್ಲಿ ಬಹಿರಂಗಪಡಿಸಿದ್ದಾರೆ.

ಮೊದಲ ದಿನವೇ ಅಧಿವೇಶನಕ್ಕೆ ಕೊರೋನಾ ಶಾಕ್: ಅನಂತ್ ಕುಮಾರ್ ಹೆಗಡೆ ಸೇರಿ 17 ಸಂಸದರಿಗೆ ಸೋಂಕು 

ಸೋಮವಾರದಿಂದ ವಿಧಾನಸಭೆಯ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ಕರೊನಾ ಪಾಸಿಟಿವ್​ ಬಂದಿದೆ. ಆದರೆ, ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ಆರೋಗ್ಯವಾಗಿದ್ದೆ. ವರದಿ ಪಾಸಿಟಿವ್​ ಇರುವ ಕಾರಣ ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ’ ಎಂದು ಡಿಸಿಎಂ ತಿಳಿಸಿದ್ದಾರೆ. ಅಲ್ಲದೆ ‘ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದವರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

Scroll to load tweet…

ಇದೇ ಸೆಪ್ಟೆಂಬರ್ 21ರಂದು ಅಧಿವೇಶನ ಆರಂಭವಾಗುತ್ತಿದೆ. ಆದ್ಎ, ಅಧಿವೇಶ ಆರಂಭಕ್ಕೂ ಮುನ್ನವೇ ಕೋವಿಡ್​ ಸೋಂಕಿಕ ಜನಪ್ರತಿನಿಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಬಾರಿಯ ಅಧಿವೇಶನದಲ್ಲಿ ಬಹುತೇಕರು ಭಾಗವಹಿಸುವುದು ಅನುಮಾನವಾಗಿದೆ.