ದೇವರು, ನ್ಯಾಯಾಲಯದ ಮೇಲೆ ನಂಬಿಕೆ ಇದೆ; ಏನೂ ಕೊಟ್ಟರೂ ಪ್ರಸಾದವೆಂದು ಸ್ವೀಕರಿಸುತ್ತೇನೆ -ಡಿಸಿಎಂ ಡಿಕೆ ಶಿವಕುಮಾರ
'ನನಗೆ ದೇವರು ಮತ್ತು ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಅವರು ಏನು ಕೊಟ್ಟರೂ ಪ್ರಸಾದ ಅಂತಾ ಸ್ವೀಕಾರ ಮಾಡುತ್ತೇನೆ' ಎಂದು ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ ಆಕಾಶದ ಮುಖ ಮಾಡಿದರು.
ಹಾಸನ (ಆ.29): 'ನನಗೆ ದೇವರು ಮತ್ತು ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಅವರು ಏನು ಕೊಟ್ಟರೂ ಪ್ರಸಾದ ಅಂತಾ ಸ್ವೀಕಾರ ಮಾಡುತ್ತೇನೆ' ಎಂದು ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ ಆಕಾಶದ ಮುಖ ಮಾಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಮೊದಲ ಹಂತದ ಪ್ರಾಯೋಗಿಕ ನೀರು ಹರಿವಿಗೆ ಚಾಲನೆ ನೀಡಲು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಗೆ ಬಂದಿದ್ದ ವೇಳೆ ಹೈಕೋರ್ಟ್ ವಿಚಾರಣೆ ಕುರಿತು ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ ಅವರು, ಏನೂ ಆಗಲ್ಲ, ನ್ಯಾಯಾಲಯದಲ್ಲಿ ತೀರ್ಪು ಏನೇ ಬಂದರೂ ಪ್ರಸಾದ ಅಂತಾ ಸ್ವೀಕರಿಸುತ್ತೇನೆ ಎಂದರು.
ಇಂದೇ ವಿಚಾರಣೆಗೆ ಹಾಜರಾಗುವಂತೆ ಡಿಸಿಎಂ ಡಿಕೆಶಿಗೆ ಲೋಕಾಯುಕ್ತ ನೋಟಿಸ್!
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್ ವಿಚಾರಣೆ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ ಅವರು, ಸಿಎಂ ಏನು ಮಾಡಿದ್ದಾರೆ ಎಲ್ಲರೂ ಕಾತುರದಿಂದ ಇದ್ದಾರೆ? ಏನೂ ಆಗುವುದಿಲ್ಲ, ಇದು ಅಷ್ಟು ಸುಲಭದ ಕೆಲಸವಲ್ಲ. ಅವರು ಏನಾದರೂ ಸಹಿ ಮಾಡಿ, ತಪ್ಪು ಮಾಡಿದ್ರೆ ಪರ್ವಾಗಿಲ್ಲ ಆದರೆ ಜಮೀನು ಕಳೆದುಕೊಂಡಿದ್ದಾರೆ ಅರ್ಜಿ ಕೊಟ್ಟವ್ರೆ ಬಿಜೆಪಿಯವರು ಅರ್ಜಿ ಪಡೆದುಕೊಂಡೇ ಸೈಟ್ ಕೊಟ್ಟವ್ರೆ ಇಷ್ಟು ಬಿಟ್ಟರೆ ಇನ್ನೇನಿದೆ? ಇದರಲ್ಲೇ ಸಿಎಂ ಅವರ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಪುತ್ರ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ, ' ನೋಡಿ ನಾನು ಅವರಿಗೆಲ್ಲ, ಆ ನಕಲಿಗಳಿಗೆಲ್ಲ ಉತ್ತರ ಕೊಡಲ್ಲ. ಅಸಲಿಯತ್ತು ಇದ್ರೆ ಮಾತ್ರ ಉತ್ತರ ಕೊಡ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಹೆಚ್‌ಡಿ ಕುಮಾರಸ್ವಾಮಿಗೆ ನಕಲಿ ಮನುಷ್ಯನೆಂದು ಟಾಂಗ್ ನೀಡಿದರು.
ಬೆಂಗಳೂರಿಗರಿಗೆ ಶಾಕ್! ನಾನು ನೀರಿನ ಬಿಲ್ ಹೆಚ್ಚಳ ಮಾಡೇ ಮಾಡುತ್ತೇನೆ: ಡಿಕೆ ಶಿವಕುಮಾರ್
ಎತ್ತಿನಹೊಳೆ ಆರಂಭಿಕ ಯಶಸ್ಸು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಯೋಜನೆಗೆ ಮೊದಲ ಹಂತದ ಪ್ರಾಯೋಗಿಕ ನೀರು ಹರಿವಿಗೆ ಮೊದಲ ಹಂತದ ಯಶಸ್ಸು ಸಿಕ್ಕಿದೆ. ನಿನ್ನೆ ಸಂಜೆಯೇ ಸಕಲೇಶಪುರ ತಾಲ್ಲೂಕಿನ ಕಪ್ಪಳ್ಳಿ ಬಳಿ ಚಾಲನೆ ನೀಡಿದ್ದ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಯೋಗಿಕವಾಗಿ ಪರಿಕ್ಷಾರ್ಥ ಚಾಲನೆ ನೀಡಿದರು. ಇಂದು ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾಜಿ ಸಚಿವ ಟಿ ಬಿ ಜಯಚಂದ್ರ ,ಶಾಸಕ ಶಿವಲಿಂಗೇಗೌಡ , ಸಂಸದ ಶ್ರೇಯಸ್ ಪಟೇಲ್ ಜೊತೆಗಿದ್ದರು.