ಬೆಂಗಳೂರಿಗರಿಗೆ ಶಾಕ್! ನಾನು ನೀರಿನ ಬಿಲ್ ಹೆಚ್ಚಳ ಮಾಡೇ ಮಾಡುತ್ತೇನೆ: ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ನೀರಿನ ಬಿಲ್ ಶೀಘ್ರದಲ್ಲೇ ಹೆಚ್ಚಾಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾಗರೀಕರಿಂದ ಟೀಕೆಗಳು ಬಂದರೂ ಹೆಚ್ಚಳ ಮಾಡುತ್ತೇನೆ ಎಂದು ಅವರು ಹೇಳಿದರು. ಜೊತೆಗೆ, 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಯೋಜನೆಗೆ ಚಾಲನೆ ನೀಡಿದರು.
ಬೆಂಗಳೂರು (ಆ.22): ಬೆಂಗಳೂರಿಗೆ ಶಾಕಿಂಗ್ ಸುದ್ದಿಯೊಂದಿದೆ. ಮತ್ತೆ ನೀರಿನ ಬಿಲ್ ಹೆಚ್ಚಳವಾಗಲಿದೆ. ಇದಕ್ಕೆ ಪೂರಕ ಎಂಬಂತೆ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದ್ದಾರೆ. ನನ್ನನ್ನು ಮಿಡಿಯಾದವರು ಬೈಯ್ಯಲಿ, ಜನ ಆದ್ರೂ ಬೈಯ್ರಿ, ವಿರೋಧ ಪಕ್ಷಗಳಾದ್ರೂ ಬೈಯ್ಯಲಿ. ನಾನು ನೀರಿ ಬಿಲ್ ಹೆಚ್ಚಳ ಮಾಡೇ ಮಾಡುತ್ತೇನೆ ಎಂದಿದ್ದಾರೆ.
ಜೊತೆಗೆ ನಾಗರೀಕರಿಗೆ ಎಷ್ಟು ಮಾಡಿದರೂ ಅಷ್ಟೆ ಅವರಿಗೆ ಉಪಕಾರದ ಸ್ಮರಣೆ ಇಲ್ಲ. ಬೈತಾರೆ ಕಾಮೆಂಟ್ ಮಾಡ್ತಾರೆ. ವಾಟ್ಸಪ್ ನಲ್ಲಿ ಹಾಕ್ತಾರೆ ಕೆಲವರು ದುಡ್ಡು ಕಟ್ಟೋರು ಕಟ್ಟುತ್ತಾರೆ ಕೆಲವರು ಕಟ್ಟಲ್ಲ ಎಂದು ಹೇಳಿಕೆ ನೀಡಿದ್ದಾರೆ.
3 ಲಕ್ಷಕ್ಕೂ ಹೆಚ್ಚು ಕೋಟ್ಯಾಧಿಪತಿಗಳು ವಾಸಿಸುವ ವಿಶ್ವದ ಅತ್ಯಂತ ಶ್ರೀಮಂತ ನಗರವಿದು!
ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ:
ವಿಧಾನಸೌಧದ ಗ್ರಾಂಡ್ ಸ್ಟೆಪ್ ಮುಂಭಾಗದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ 110 ಹಳ್ಳಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದರು. ಇದರ ಜತೆ ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ ಹಾಗೂ ವರುಣಮಿತ್ರ ತರಬೇತಿ ಹಾಗೂ ಯುನೈಟೆಡ್ ನೇಷನ್ ಇನೋವೇಷನ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯುರಿಟಿ ಇನ್ ಬೆಂಗಳೂರು ಸಿಟಿ ಯೋಜನೆ, ಈ ಎಲ್ಲಾ ಯೋಜನೆಗಳಿಗೆ ಚಾಲನೆ ನೀಡಿದರು.
110 ಹಳ್ಳಿಗಳಿಗೆ ಕಾವೇರಿ ಸಂಪರ್ಕ ಅಭಿಯಾನದಡಿ ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಟಿ ದಾಸರಹಳ್ಳಿ, ಬ್ಯಾಟರಾಯನಪುರ, ಮಹದೇವಪುರ ವಿಧಾನಸಭೆಗೆ ಸೇರಿರುವ ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ದೊರೆಯಲಿದೆ.
ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜಲ ನೀರು ಮತ್ತು ಪವರ್ ಈ ಎರಡು ಪ್ರಮುಖವಾದ ಇಲಾಖೆಗಳು. ಎರಡು ಇಲಾಖೆ ನಾನು ನೋಡ್ತಾ ಇದ್ದೇನೆ. ಹಿಂದೆ ಎಸ್.ಎಂ.ಕೃಷ್ಣ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಚರ್ಚೆ ನಡೆದಿತ್ತು. ಅದರ ಬಗ್ಗೆ ಫ್ರಾನ್ಸ್ ಗೆ ಎಲ್ಲಾ ಹೋಗಿ ನೋಡಿಕೊಂಡು ಬಂದೆ. ನೋಡಿ ಬಂದು ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗುತ್ತೆ ಎಂದು ಮಾಹಿತಿ ನೀಡಿದೆ. ಸಾಕಷ್ಟು ವಿರೋಧವು ವ್ಯಕ್ತವಾಯ್ತು ಆನಂತರ ಕೈ ಬಿಟ್ಟೆವು. ಈಗಲೂ ನಾನು ಸಚಿವನಾದ ಮೇಲೆ ಮತ್ತೆ ಕೆಲವರು ಬಂದರೂ ಆಗಲ್ಲ ನಾನಿರುವವರೆಗೆ ಆಗಲ್ಲ ಅಂತ ಹೇಳಿದ್ದೇನೆ.
ಕೃಷ್ಣೆಗಾಗಿ ಬಲಿಯಾದ ಬದುಕುಗಳು: ಸಂತ್ರಸ್ತರ ಗೋಳು ಕೇಳೋರಿಲ್ಲ!
ನೀರಿನ ದರ ಸಾಕಷ್ಟು ವರ್ಷದಿಂದ ಏರಿಸಿಲ್ಲ. 1.4 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. ಮೇಕೆದಾಟುವಿನದು ನನಗೆ ಭರವಸೆ ಇದೆ ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯು ಇದೆ. ಅದಕ್ಕೆ ಆ ಭಾಗದಲ್ಲಿ ವಿರೋಧವಿದೆ.
ನೀರಾವರಿ ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿಮೀ ಯಾರು ಬೋರ್ ವೆಲ್ ಹಾಕುವಂತಿಲ್ಲ. ಯಾರು ಕಾಲುವೆಗಳಿಂದ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ಹೊಸ ಕಾನೂನು ಬಂದಿದೆ. ರಾಜ್ಯಪಾಲರು ಇದಕ್ಕೆ ಸಹಿ ಹಾಕಿದ್ದಾರೆ ಎಂದು ಸದ್ಯದಲ್ಲೇ ನೀರಿನ ಬೆಲೆ ಹೆಚ್ಚಳದ ಬಗ್ಗೆ ಡಿಸಿಎಂ ಡಿಕೆಶಿ ಸೂಚನೆ ಕೊಟ್ಟಿದ್ದಾರೆ.
BWSSB ಅವರು ನೀರಿ ದರದ ಬಗ್ಗೆ ಮಾಹಿತಿಯನ್ನ ಕೊಡಿ. ಎಷ್ಟು ನೀರಿಗೆ ಖರ್ಚಾಗುತ್ತಿದೆ. ಎಷ್ಟು ವರ್ಷಗಳಿಂದ ನೀರಿನ ಹೆಚ್ಚಳ ಮಾಡಿಲ್ಲ ಎಲ್ಲ ಮಾಹಿತಿ ಕೊಡಿ ಎಂದು BWSSB ಅಧಿಕಾರಿಗಳಿಗೆ ಡಿಸಿಎಂ ಸೂಚನೆ ನೀಡಿದರು.
ಎಷ್ಟೊಂದು ಜನ ನೀರಿನ ಬಿಲ್ ಕಟ್ಟುತ್ತಿಲ್ಲ. ಜಲಮಂಡಳಿ ಉಳಿಸಬೇಕು ಅಂದ್ರೆ ನೀರಿನ ಬಿಲ್ ಏರಿಕೆ ಅನಿವಾರ್ಯ. ಇದ್ರ ಬಗ್ಗೆ BWSSB ಜನರಿಗೆ ಜಾಗೃತಿ ಮೂಡಿಸಬೇಕು. ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗ್ಬೇಕು. ಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ ಆಗುತ್ತಿಲ್ಲ. ಮಂಡಳಿಯು ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್ ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡ್ಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ ಸಭೆ ಮತ್ತು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡ್ತೀವಿ ಎಂದಿದ್ದಾರೆ.
BWSSB ಅಧ್ಯಕ್ಷ ರಾಮಪ್ರಸಾದ್ ಮನೋಹರ್ ಹೇಳಿಕೆ ನೀಡಿ, 3 ಮುಖ್ಯ ಕಾರ್ಯಕ್ರಮಕ್ಕೆ ಡಿಸಿಎಂ ಚಾಲನೆ ನೀಡಿದ್ದಾರೆ. ಬೇಸಿಗೆ ಕಾಲದಲ್ಲಿ ವಿಶ್ವದ ಖ್ಯಾತ ಯುನೈಟೆಡ್ ನೇಷನ್ ಪ್ರಶಂಸೆ ವ್ಯಕ್ತಪಡಿಸಿ ಜಲಸಂರಕ್ಷಣೆಗಾಗಿ ಬೆಂಗಳೂರು ಜಲಮಂಡಳಿ ಇಡೀ ವಿಶ್ವಕ್ಕೆ ಮಾಡೆಲ್ ಆಗಿ ಅಳವಡಿಕೆ ಮಾಡಿದ್ದಾರೆ. ಅಂದೋಲನ ರೀತಿಯಲ್ಲಿ 110 ಹಳ್ಳಿಗಳಿಗೆ ಮನೆ ಮನೆ ನೀರಿನ ಸೌಲಭ್ಯ ಯೋಜನೆಗೆ ಚಾಲನೆ ದೊರೆತಿದೆ. ಮಳೆ ನೀರು ಕೋಯ್ಲು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.