ಬೆಂಗಳೂರು, (ಫೆ.05): ಫೆಬ್ರವರಿ 6 ರಿಂದ ಅಧಿವೇಶನ ಮುಗಿಯುವವರೆಗೂ ಕಡ್ಡಾಯವಾಗಿ ಸದನಕ್ಕೆ ಹಾಜರಾಗುವಂತೆ ಕಾಂಗ್ರೆಸ್​ ಪಕ್ಷದ ಎಲ್ಲ ಶಾಸಕರಿಗೂ ಕಾಂಗ್ರೆಸ್ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಪ್ ಜಾರಿ ಮಾಡಿದ್ದಾರೆ. 

ನಾಳೆಯಿಂದ (ಬುಧವಾರ) ಸದನದಲ್ಲಿ ಅಧಿವೇಶನ ನಡೆಯಲಿದೆ. ಮೈತ್ರಿ ಸರ್ಕಾರದಲ್ಲಿರುವ ಅತೃಪ್ತ ಶಾಸಕರನ್ನು ಬಳಸಿಕೊಂಡು ಸದನದಲ್ಲಿ ಅವಿಶ್ವಾಸ ಮಂಡನೆ ಮಾಡಲು ಬಿಜೆಪಿ  ಚಿಂತನೆ ನಡೆಸಿದೆ ಎನ್ನಲಾಗಿದೆ. 

ಬಜೆಟ್ ಅಧಿವೇಶನಕ್ಕೆ ಬಾರದಿದ್ದರೆ ಜೋಕೆ, 'ಕೈ' ಮಾಸ್ಟರ್ ಸ್ಟ್ರೋಕ್

ಈ ಹಿನ್ನೆಲೆಯಲ್ಲಿ ಅಧಿವೇಶನ ಮುಗಿಯುವವರೆಗೂ ಕಡ್ಡಾಯವಾಗಿ ಸದನಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಲಾಗಿದ್ದು,  ಅಷ್ಟೇ ಅಲ್ಲದೇ ಪತ್ರದ ಜೊತೆಗೆ ಇ ಮೇಲ್, ವಾಟ್ಸ್ ಆ್ಯಪ್​ ಮೂಲಕ ವಿಪ್ ಜಾರಿ ಸಂದೇಶ ರವಾನಿಸಲು ಕಾಂಗ್ರೆಸ್ ನಿರ್ಧರಿಸಿದೆ.

HDK ಬಜೆಟ್ ಮಂಡನೆ ಡೌಟ್ ಎಂದ BJP, ಅಲರ್ಟ್ ಆದ ಮೈತ್ರಿ ಸರ್ಕಾರ

ಫೆ. 8ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ.

ಒಂದು ವೇಳೆ ಬಜೆಟ್ ಅಧಿವೇಶನಕ್ಕೆ ಗೈರಾಗುವ ಶಾಸಕರ ಮೇಲೆ ಪಕ್ಷಾಂತರ ಕಾಯ್ದೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.