ಆಪರೇಷನ್ ಕಮಲ ಆಯ್ತು ಈಗ ಆಪರೇಷನ್ ಬಜೆಟ್ ಮೈತ್ರಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿನ್ನಲೆಯಲ್ಲಿ ಬಜೆಟ್ ಅಧಿವೇಶನಕ್ಕೆ ಕಡ್ಡಾಯವಾಗಿ ಎಲ್ಲಾ ಶಾಸಕರು ಹಾಜರಾಗಬೇಕೆಂದು ಕಾಂಗ್ರೆಸ್ ಖಡಕ್ ಎಚ್ಚರಿಕೆ ನೀಡಿದೆ.
ಮೈಸೂರು, (ಫೆ.4): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹೈಡ್ರಾಮಾ ಶುರುವಾಗಿದೆ. ಇಷ್ಟು ದಿನ ಆಪರೇಷನ್ ಕಮಲ ಈಗ ಆಪರೇಷನ್ ಬಜೆಟ್ ಆಗಿದೆ.
ಅಂದರೆ ಕೆಲ ಅತೃಪ್ತ ಕಾಂಗ್ರೆಸ್ ಶಾಸಕರನ್ನು ರಾಜ್ಯ ಬಜೆಟ್ ಅಧಿವೇಶನಕ್ಕೆ ಬಾರದಂತೆ ಬಿಜೆಪಿ ತಂತ್ರ ರೂಪಿಸಿದ್ದು, ಈ ಮೂಲಕ ಮೈತ್ರಿ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ಲಾನ್ ಮಾಡಿದೆ. ಆದ್ರೆ, ಇದಕ್ಕೆ ಕಾಂಗ್ರೆಸ್ ಕೂಡ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದೆ. ಅದುವೇ ವಿಪ್.
HDK ಬಜೆಟ್ ಮಂಡನೆ ಡೌಟ್ ಎಂದ BJP, ಅಲರ್ಟ್ ಆದ ಮೈತ್ರಿ ಸರ್ಕಾರ
ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 'ವಿಪ್ ಉಲ್ಲಂಘನೆ ಮಾಡುವ ಶಾಸಕರಿಗೆ ಕಾನೂನು ಕ್ರಮ ಕಟ್ಟಿಟ್ಟಬುತ್ತಿ' ಎಂದು ಶಾಸಕರಿಗೆ ಏಚ್ಚರಿಕೆ ನೀಡಿದ್ದಾರೆ.
ಬಜೆಟ್ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಜನರಿಗೆ ಅನುಕೂಲವಾಗುವ ರೀತಿ ಜನಪ್ರಿಯ ಬಜೆಟ್ ಮಂಡನೆಯಾಗಲಿದೆ. ನಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಂತಹ ಬಜೆಟ್ ಮಂಡಿಸಲಿದ್ದಾರೆ.
ಅಧಿವೇಶನಕ್ಕೆ 80 ಶಾಸಕರು ಬಂದು ಭಾಗವಹಿಸುವ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಂದು 3 ಜನ ಬಿಜೆಪಿಯವರ ಮಾತು ಕೇಳಿ ಈಗ ಸುಮ್ಮನಿರಬಹುದು.
ಆದರೆ ಬಿಜೆಪಿಯಿಂದ ಹೋದವರಿಗೆ ಯಾವ ರೀತಿಯ ಪರಿಸ್ಥಿತಿ ಬರುತ್ತದೆ ಎಂಬುದು ಅವರಿಗೆ ಗೊತ್ತಿದೆ. ಈ ಹಿಂದೆ ಬಿಜೆಪಿ ಬೆಂಬಲಿಸಿದ್ದ ಪಕ್ಷೇತರರನ್ನು ಯಾವ ರೀತಿ ನಡೆಸಿಕೊಂಡು ಕೈ ಬಿಟ್ಟಿದ್ದರು ಎಂದು ಗೊತ್ತಿದೆ.
ಒಂದು ವೇಳೆ ಯಾರಾದರೂ ವಿಪ್ ಉಲ್ಲಂಘಸಿದ್ರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗುಂಡೂರಾವ್ ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಏಚ್ಚರಿಕೆ ನೀಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 4, 2019, 4:51 PM IST