Asianet Suvarna News Asianet Suvarna News

ಕರುನಾಡಿಗೆ ಚೊಂಬು ಕೊಟ್ಟಿದ್ದ ಮೋದಿ ಸರ್ಕಾರ ಈಗ ಕನ್ನಡಿಗರಿಗೆ ಮಕ್ಮಲ್ ಟೋಪಿ ಹಾಕಿದೆ: ಕಾಂಗ್ರೆಸ್‌

ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣನ ವಿರುದ್ಧದ ಮತ್ತೊಂದು ಪ್ರಕರಣ ದಾಖಲಾಗಿದೆ, ಆತನ ಕರ್ಮಕಾಂಡವು ದಿನದಿನಕ್ಕೂ ವಿಸ್ತರಿಸುತ್ತಲೇ ಇದೆ.ಇಷ್ಟೆಲ್ಲಾ ಮಾಹಿತಿ ಇದ್ದರೂ ಕರ್ನಾಟಕದ ಬಿಜೆಪಿ ನಾಯಕರು ಆತನ ಪರ ಪ್ರಚಾರ ನಡೆಸಿ ತಮ್ಮ ಮಾನ ಮರ್ಯಾದೆ, ನೈತಿಕತೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅತ್ಯಾಚಾರಿಯ ಪರ ಮತ ಕೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅತ್ಯಾಚಾರಿ, ಅನಾಚಾರಿಗಳ ಪರ ಎಂದು ಸಂದೇಶ ನೀಡಿದ್ದಾರೆ ಎಂದು ಮೋದಿ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್‌ 

Karnataka Congress Slams PM Narendra Modi Goverment grg
Author
First Published May 3, 2024, 6:29 PM IST

ಬೆಂಗಳೂರು(ಮೇ.03): ಕನ್ನಡಿಗರ ಕೈಗೆ ಚೊಂಬು ಕೊಟ್ಟಿದ್ದ ಮೋದಿ ಸರ್ಕಾರ ಈಗ ಕನ್ನಡಿಗರಿಗೆ ಮಕ್ಮಲ್ ಟೋಪಿ ಹಾಕಿದೆ. ಕರ್ನಾಟಕದಲ್ಲಿ ಬರದಿಂದ ನಷ್ಟವಾಗಿದ್ದು ₹35,000 ಕೋಟಿಗೂ ಹೆಚ್ಚು. NDRF ನಿಯಮದ ಪ್ರಕಾರ ರಾಜ್ಯ ಸರ್ಕಾರ ಕೇಳಿದ್ದು ₹18,172 ಕೋಟಿ, ಸುಪ್ರೀಂಕೋರ್ಟಿನ ತಪರಾಕಿಯ ನಂತರ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 19% ಮೊತ್ತವಷ್ಟೇ. ಇನ್ನೂ 81% ಹಣಕ್ಕೆ ಮಕ್ಮಲ್ ಟೋಪಿ ಹಾಕಿದ ಬಿಜೆಪಿಯನ್ನು ಕನ್ನಡಿಗರು ಸೋಲಿಸಿ ನ್ಯಾಯ ದೊರಕಿಸಿಕೊಡುವ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ವಿಶ್ವಾಸ ವ್ಯಕ್ತಪಡಿಸಿದೆ. 

ಇಂದು(ಶುಕ್ರವಾರ) ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ತನ್ನ ಅಧಿಕೃತ ಎಕ್ಸ್‌ನಲ್ಲಿ ಸಾಲು ಸಾಲು ಟ್ವೀಟ್‌ ಮಾಡುವ ಮೂಲವ ತೀವ್ರ ವಾಗ್ದಾಳಿ ನಡೆಸಿದೆ. 

ರಾಹುಲ್ ಗಾಂಧಿ ಹೊಗಳಿ, ಮಹಾತ್ಮಾ ಗಾಂಧಿ ಅವಮಾನಿಸಿದ ಕಾಂಗ್ರೆಸ್ ನಾಯಕ!

ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣನ ವಿರುದ್ಧದ ಮತ್ತೊಂದು ಪ್ರಕರಣ ದಾಖಲಾಗಿದೆ, ಆತನ ಕರ್ಮಕಾಂಡವು ದಿನದಿನಕ್ಕೂ ವಿಸ್ತರಿಸುತ್ತಲೇ ಇದೆ.ಇಷ್ಟೆಲ್ಲಾ ಮಾಹಿತಿ ಇದ್ದರೂ ಕರ್ನಾಟಕದ ಬಿಜೆಪಿ ನಾಯಕರು ಆತನ ಪರ ಪ್ರಚಾರ ನಡೆಸಿ ತಮ್ಮ ಮಾನ ಮರ್ಯಾದೆ, ನೈತಿಕತೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅತ್ಯಾಚಾರಿಯ ಪರ ಮತ ಕೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅತ್ಯಾಚಾರಿ, ಅನಾಚಾರಿಗಳ ಪರ ಎಂದು ಸಂದೇಶ ನೀಡಿದ್ದಾರೆ ಎಂದು ಮೋದಿ ವಿರುದ್ಧ ಕಿಡಿ ಕಾರಿದೆ. 

"ಉಪ್ಪು ತಿಂದವರು ನೀರು ಕುಡಿಯಲೇಬೇಕು" ಎಂದು ಹೇಳಿ ಈಗ ಪ್ರಜ್ವಲ್ ರೇವಣ್ಣನ ಕರ್ಮಕಾಂಡಕ್ಕೆ ಇತರರನ್ನು ಹೊಣೆ ಮಾಡಿ ಮಾತಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಮಹಿಳೆರನ್ನು ಅಮಾನವೀಯವಾಗಿ ಬಳಸಿಕೊಂಡು ವಿಡಿಯೋ ಮಾಡಿಕೊಳ್ಳಲು ಕಾಂಗ್ರೆಸ್‌ನವರು ಹೇಳಿದ್ರಾ?. ನಟನೆಯೂ ಪ್ರಜ್ವಲ್‌ನದ್ದೇ, ನಿರ್ದೇಶನವೂ ಅವನದ್ದೇ, ಕೋರಿಯಾಗ್ರಫಿ, ಸಿನೆಮಾಟೋಗ್ರಾಫಿಯೂ ಅವನದ್ದೇ, ಎಡಿಟಿಂಗ್ ಕೂಡ ಅವನದ್ದೇ, ಅಖಿಲ ಕರ್ನಾಟಕಕ್ಕೆ ಹಂಚಿಕೆದಾರರು ಮಾತ್ರ ಬಿಜೆಪಿ ನಾಯಕರದ್ದು!. ಹೀಗಿರುವಾಗ ಕುರುಡು ಗೂಬೆಯನ್ನು ತಂದು ಕಾಂಗ್ರೆಸ್‌ನವರ ಹೆಗಲ ಮೇಲೆ ಯಾಕೆ ಕೂರಿಸುವಿರಿ ಪೆನ್ ಡ್ರೈವ್ ಸ್ವಾಮಿಗಳೇ? ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ. 

Latest Videos
Follow Us:
Download App:
  • android
  • ios