ಭಾರತ-ಪಾಕಿಸ್ತಾನ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ, ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದು ಪೋಸ್ಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ. 

ಬೆಂಗಳೂರು (ಮೇ.12): ಭಾರತ-ಪಾಕಿಸ್ತಾನ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿ, ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದು ಪೋಸ್ಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನಕ್ಕೆ ಐಎಮ್‌ಎಫ್ ಸಾಲ ಮಂಜೂರಿಯನ್ನ ಟೀಕಿಸಿ ಹಾಕಿದ್ದ ಈ ಪೋಸ್ಟ್‌ನಲ್ಲಿ, ಕೆಪಿಸಿಸಿಯು ಭಾರತೀಯ ನಕ್ಷೆಯನ್ನ ಸಹಿತವಾಗಿ ಪ್ರಕಟಿಸಿತ್ತು. ಆದರೆ ಆ ನಕ್ಷೆಯಲ್ಲಿ ಕಾಶ್ಮೀರ ಭಾಗವನ್ನು ಪಾಕಿಸ್ತಾನದೊಳಗಿನಂತೆ ತೋರಿಸಲಾಗಿತ್ತು! 

ಈ ಯಡವಟ್ಟು ಮಿಂಚಿನಂತೆ ಹರಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೊದಲು ಈ ನಕ್ಷೆ ಹೊಂದಿದ ಪೋಸ್ಟ್ ಅನ್ನು ಹಾಕಿ, ಕೆಲವೇ ನಿಮಿಷಗಳಲ್ಲಿ ಕೆಪಿಸಿಸಿ ಡಿಲೀಟ್ ಮಾಡಿದರೂ, ಅದರ ಸ್ಕ್ರೀನ್‌ಶಾಟ್‌ಗಳು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸದ್ಯ ಈ ಆಚಾತುರ್ಯಕ್ಕೆ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದ ಸಿಬ್ಬಂದಿಗೆ ಹಿಗ್ಗಾ ಮುಗ್ಗಾ ತರಾಟೆ ನಡೆಸಿದ್ದಾರೆ ಎನ್ನಲಾಗಿದೆ.

ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ: ತಳ್ಬೇಡ್ರಿ ಸಿಎಂ ಹೊಡೀತಾರೆ ಅಂತ ಭಯಗೊಂಡಿದ್ದೇಕೆ?

ಬೆಂ.ದಕ್ಷಿಣ ಜಿಲ್ಲೆ ತಡೆಯಲಾಗದು: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ವಿಷಯದಲ್ಲಿ ಯಾರು ಎಷ್ಟೇ ಕುತಂತ್ರ ಮಾಡಿದರೂ ತಡೆಯಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಗರಸಭೆ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭ ಉದ್ಘಾಟಿಸಿದ ಅವರು, ನೀವು ಕೊಟ್ಟ ಅವಕಾಶದ ಋಣ ತೀರಿಸುತ್ತೇನೆ. ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಉಳಿಸಿಕೊಂಡು ಬೆಂಗಳೂರು ಬ್ರ್ಯಾಂಡ್ ಹೆಸರಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.

ಇನ್ನೂ ಮೃತರ ಹೆಸರಲ್ಲೇ ಇವೆ 52 ಲಕ್ಷ ಜಮೀನು ಖಾತೆ: ಸಚಿವ ಕೃಷ್ಣ ಬೈರೇಗೌಡ

ರಾಮನಗರ ಜನರು ಕೆಲವರಿಗೆ ಇಲ್ಲಿಂದ ದೆಹಲಿವರೆಗೆ ಅವಕಾಶ ಕೊಟ್ಟಿದ್ರಿ. ಅವರದು ಖಾಲಿ ಟ್ರಂಕು, ಬರೀ ಮಾತು ಎನ್ನುವಂತಾಗಿದೆ. ಇಪ್ಪತ್ತೈದು ವರ್ಷದ ಬಳಿಕ ರಾಮನಗರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದೀರಿ. ಇನ್ನು ಮುಂದೆ ಜಿಲ್ಲೆಯನ್ನು ನಾವು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪರಿಶಿಷ್ಟ ಸಮುದಾಯದವರಿಗೆ ಮಾತ್ರ ಸೀಮಿತ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಸರ್ವರಿಗೂ ಸಮಬಾಳು, ಸಮಪಾಲು ಎಂದು ಸಾರಿದ ಅವರು ಎಲ್ಲರಿಗೂ ಸೇರಿದವರು. ನಾನು ಪಕ್ಷದ ಚುಕ್ಕಾಣಿ ಹಿಡಿದ ಬಳಿಕ ಪಕ್ಷದ ಸಭೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಪರಿಪಾಠ ಶುರು ಮಾಡಿದೆ ಎಂದು ಹೇಳಿದರು.