Asianet Suvarna News Asianet Suvarna News

Breaking: ರಾಜ್ಯಸಭಾ ಚುನಾವಣೆಗೆ ಕರ್ನಾಟಕದ ಸ್ಪರ್ಧಿಗಳ ಲಿಸ್ಟ್‌ ರಿಲೀಸ್‌!


ರಾಜ್ಯಸಭೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಒಟ್ಟು ಮೂರು ಅಭ್ಯರ್ಥಿಗಳ ಹೆಸರನ್ನು ರಾಜ್ಯ ಕಾಂಗ್ರೆಸ್‌ ಪ್ರಕಟಿಸಿದೆ.

Karnataka Congress list of candidates for Rajya Sabha elections released san
Author
First Published Feb 14, 2024, 4:08 PM IST

ಬೆಂಗಳೂರು (ಫೆ.14): ಮುಂಬರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಕಾಂಗ್ರೆಸ್‌ ಪ್ರಕಟಿಸಿದೆ. ಅಜಯ್‌ ಮಾಕೆನ್‌, ಜಿಸಿ ಚಂದ್ರಶೇಖರ್‌ ಹಾಗೂ ಸಯ್ಯದ್‌ ನಾಸಿರ್‌ ಹುಸೇನ್‌ಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.  ದೆಹಲಿ ಕಾಂಗ್ರೆಸ್‌ನ ನಾಯಕರಾಗಿರುವ ಅಜಯ್‌ ಮಾಕೇನ್‌ಗೆ ಈ ಬಾರಿ ಹೊಸದಾಗಿ ಅವಕಾಶ ನೀಡಲಾಗಿದೆ. ಇನ್ನು ಜಿಸಿ ಚಂದ್ರಶೇಖರ್‌ ಹಾಗೂ ಸಯ್ಯದ್‌ ನಾಸಿರ್‌ ಹುಸೇನ್‌ಗೆ ಮರು ಆಯ್ಕೆಗೆ ಅವಕಾಶ ನೀಡಲಾಗಿದೆ. ಎಲ್‌.ಹನುಮಂತಯ್ಯ ಅವರಿಗೆ ಇದ್ದ ಟಿಕೆಟ್‌ಅನ್ನು ಅಜಯ್‌ ಮಾಕೆನ್‌ಗೆ ನೀಡಲಾಗಿದೆ. ನಾಮಪತ್ರ ಸಲ್ಲಿಕೆಗೆ ನಾಳೆಯೇ ಕೊನೆಯ ದಿನವಾಗಿದ್ದು, ಅದಕ್ಕೂ ಒಂದು ದಿನ ಮುನ್ನ ಕಾಂಗ್ರೆಸ್‌ ಕರ್ನಾಟಕದ ಅಭ್ಯರ್ಥಿಗಳ ಲಿಸ್ಟ್‌ ಪ್ರಕಟಿಸಿದೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು,  ರಾಜ್ಯದ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಪಕ್ಷ ಫೈನಲ್‌ ಮಾಡಿದೆ. ಮುಖ್ಯವಾಗಿ ಜಿಸಿ ಚಂದ್ರಶೇಖರ್‌ ಹಾಗೂ ನಾಸಿರ್‌ ಹುಸೇನ್‌ಗೆ ಮತ್ತೊಮ್ಮೆ ಅವಕಾಶವನ್ನು ಕೇಂದ್ರ ನಾಯಕತ್ವ ನೀಡಿದೆ. ಇದು ನಾಸಿರ್‌ ಹಾಗೂ ಚಂದ್ರಶೇಖರ್‌ ಅವರಿಗೆ 2ನೇ ಅವಧಿಯಾಗಿದೆ. ಇನ್ನು ಅಜಯ್‌ ಮಾಕೆನ್‌ ಅವರ ಹೆಸರನ್ನು ಎಲ್‌.ಹನುಮಂತಯ್ಯ ಅವರ ಬದಲು ಫೈನಲ್‌ ಮಾಡಲಾಗಿದೆ. ಮನಮೋಹನ್‌ ಸಿಂಗ್‌ ಅವರ ಪ್ರಧಾನಮಂತ್ರಿ ಅವಧಿಯಲ್ಲಿ ಅಜಯ್‌ ಮಾಕೆನ್‌ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು. ಅದಲ್ಲದೆ, ಇಂದಿಗೂ ದೆಹಲಿ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಪ್ರಭಾವವನ್ನು ಅವರು ಉಳಿಸಿಕೊಂಡಿದ್ದಾರೆ. ಅದಲ್ಲದೆ, ಅವರು ಮೂರು ಬಾರಿ ಶಾಸಕರಾಗಿಯೂ ಕೆಲಸ ಮಾಡಿದ್ದಾರೆ.

ದೆಹಲಿ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರಾಗಿರುವ ಅವರಿಗೆ ಕರ್ನಾಟಕದಿಂದ ಟಿಕೆಟ್ ನೀಡುವ ನಿರ್ಧಾರವನ್ನು ಮಾಡಲಾಗಿದೆ. ಆ ಮೂಲಕ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರಾಗಿ ಅಜಯ್ ಮಾಕೇನ್‌ ಆಯ್ಕೆಯಾಗಲಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್‌ ಪಾಲಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್‌ ಮಾಡುವುದು ಕೂಡ ಅಷ್ಟು ಸುಲಭವಾಗಿರಲಿಲ್ಲ. ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರ ಬಣಗಳು ತಮ್ಮದೇ ಆದ ಕೆಲವೊಂದು ಹೆಸರುಗಳನ್ನು ಹೊಂದಿದ್ದವು. ಅದಕ್ಕೆ ದೊಡ್ಡ ಪ್ರಮಾಣದ ಲಾಬಿ ಕೂಡ ಮಾಡಲಾಗಿತ್ತು. ಅಂತಿಮವಾಗಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಅತ್ಯಂತ ಆಪ್ತರಾಗಿರುವ ನಾಸಿರ್‌ ಹುಸೇನ್‌ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಲೋಕಸಭೆ ಕದನದಿಂದ ಅಧಿಕೃತವಾಗಿ ಹಿಂದೆ ಸರಿದ ಸೋನಿಯಾ, ರಾಜಸ್ಥಾನದಿಂದ ರಾಜ್ಯಸಭೆಗೆ ಫೈಟ್‌!

ಇನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಜಿಸಿ ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಪಡೆದುಕೊಳ್ಳುವ ಮೂಲಕ ಡಿಕೆ ಶಿವಕುಮಾರ್‌ ಅವರ ಬಣದ ಕೈ ಮೇಲಾಗಿದೆ ಎನ್ನುವುದು ಗೋಚರವಾಗಿದೆ. ಅಜಯ್‌ ಮಾಕೆನ್‌ ಅವರನ್ನು ಎಐಸಿಸಿಯೇ ನಿರ್ಧಾರ ಮಾಡಿತ್ತು. ಈ ಮೊದಲು ಅಜಯ್‌ ಮಾಕೆನ್‌ ಅವರ ಹೆಸರು ಹಿಮಾಚಲ ವಿಧಾನಸಭೆಯಿಂದ ಕೇಳಿ ಬಂದಿತ್ತು. ಕೊನೆಗೆ ಅಭಿಷೇಕ್‌ ಮನು ಸಿಂಗ್ವಿಗೆ ಹಿಮಾಚಲ ಪ್ರದೇಶದಿಂದ ರಾಜ್ಯಸಭೆ ಟಿಕೆಟ್‌ ನೀಡಲಾಗಿದ್ದರೆ, ಕರ್ನಾಟಕದಿಂದ ಮಾಕೆನ್‌ಗೆ ಅವಕಾಶ ನೀಡಲಾಗಿದೆ.

ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ಸಿಎಂ ಅಶೋಕ್ ಚವಾಣ್, ನಾಳೆ ಕೇಸರಿ ಪಕ್ಷದಿಂದ ರಾಜ್ಯಸಭೆಗೆ ನಾಮಪತ್ರ!

Follow Us:
Download App:
  • android
  • ios