ಬೆಂಗಳೂರು, (ಮಾ.21): ರಾಜ್ಯ ಕಾಂಗ್ರೆಸ್ ಪ್ರಮುಖ ನಾಯಕರಾದ ಮಾಜಿ ಸಚಿವ ಕೃಷ್ಣ ಭೈರೇಗೌಡ, ಮಾಜಿ ಸಂಸದ ಉಗ್ರಪ್ಪ ಮತ್ತು ಬ್ರಿಜೇಶ್ ಕಾಳಪ್ಪ ಈ ಮೂವರು ಒಟ್ಟಿಗೆ ಸುದ್ದಿಗೋಷ್ಠಿ ನಡೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಸಭೆಯಲ್ಲಿ ಮಾತನಾಡಿರುವ ಮಾಜಿ ಸಂಸದ ಉಗ್ರಪ್ಪ, ಕೆಪಿಸಿಸಿ ಆದೇಶದಂತೆ ಇಂದು ಸುದ್ದಿಗೋಷ್ಟಿ ನಡೆಸುತ್ತಿದ್ದೇವೆ.ಬಿಜೆಪಿಯವರು ಭ್ರಷ್ಟಾಚಾರ ಹೆಚ್ಚಾಗಿದೆ. ಲೋಕಪಾಲ್ ಕಾಯ್ದೆ ಜಾರಿಗೆ ಬರಬೇಕು ಎಂದು ಹೋರಾಟ ಮಾಡಿದ್ದವರು ಇದೇ ಬಿಜೆಪಿವರು. ಆದ್ರೆ ಇಂದು ಆ ಬಗ್ಗೆ ಬಿಜೆಪಿಯ ಯಾವ ನಾಯಕರು ಮಾತನಾಡುತ್ತಿಲ್ಲ. ಕಪ್ಪು ಹಣ ದೇಶಕ್ಕೆ ವಾಪಸ್ ಬರುತ್ತೆ ಅಂತ ಹೇಳಿದ್ರೂ ಆ ಕೆಲಸ ಕೂಡ ಇವರಗೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

'ಮೇ 2ರ ನಂತ್ರ ಸಿಎಂ ಬದಲಾವಣೆ, ಉ.ಕರ್ನಾಟಕದ ಹಿಂದೂಪರ ವ್ಯಕ್ತಿ ಮುಂದಿನ ಸಿಎಂ'

ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇದ್ಯಾ. ಸಿಎಂ ಯಡಿಯೂರಪ್ಪ ವಿರುದ್ದ ದೇವನಹಳ್ಳಿ ತಾಲ್ಲೂಕು ಕೆಐಡಿಬಿ ಲ್ಯಾಂಡ್ ವಿಚಾರಕ್ಕೆ ಹೈ ಕೋರ್ಟ್‍ ಆದೇಶ ಒಂದನ್ನ ಕೊಟ್ಟಿದೆ. ರಾಜಕೀಯ ಭ್ರಷ್ಟಾಚಾರ ತೊಲಗಬೇಕೆಂದರೆ ಲೋಕಪಾಲ್ ವ್ಯವಸ್ಥೆ ಬರಬೇಕು ಎಂದು ಮೋದಿ ಹೇಳಿದ್ದರು. ಮೋದಿಯವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಮೇಲೆ 10% ಸರ್ಕಾರ ಎಂದು ಆರೋಪ ಮಾಡಿದ್ದರು. ಡಿಮಾನಟೈಸೆಷನ್ ಮೂಲಕ ರಾಜಕೀಯ ಭ್ರಷ್ಟಾಚಾರ ತಡೆಯುತ್ತೇವೆ ಎಂದು ಕಿಡಿಕಾರಿದರು.

ನಾನು ಈಗ ಮಿಸ್ಟರ್ ಮೋದಿಯವರನ್ನ ಕೇಳ್ತಿದ್ದೀನಿ, ಮೊನ್ನೆ ಹೈಕೋರ್ಟ್ ಒಂದು‌ ಜಡ್ಜ್ ಮೆಂಟ್ ನೀಡಿದೆ. ಬಹುದೊಡ್ಡ ಭ್ರಷ್ಟಾಚಾರ ಆದ ಹಿನ್ನೆಲೆಯಲ್ಲಿ ಕೆಐಡಿಬಿ ಅಕ್ವೈರ್ ಮಾಡಿದ ಜಮೀನನ್ನು ಸಿಎಂ ಯಡಿಯೂರಪ್ಪ, ನಿರಾಣಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಿಕ್ ಬ್ಯಾಕ್ ಡಿನೊಟಿಫಿಕೇಶನ್ ಮಾಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿ ನಂಬರ್ 1. ಇವರು ಯಡಿಯೂರಪ್ಪ ಯಾವ ರೀತಿ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಪ್ರಶ್ನಿಸಿದರು.

 'ಬಿಜೆಪಿ ಜಗತ್ತಿನ ದೊಡ್ಡ ಸುಲಿಗೆಕೋರ ಪಕ್ಷ'

ಇದೇ ವೇಳೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ರು. ತಮ್ಮ ವೈಯಕ್ತಿಕ ಲಾಭಕ್ಕಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಸ್ಪೆಷಲ್ ಕೋರ್ಟ್ ತಪ್ಪು ಮಾಡಿದೆ ಅಂತ ಹೈ ಕೋರ್ಟ್ ನ್ಯಾಯಮೂರ್ತಿ ಹೇಳಿದ್ದಾರೆ. ಯಡಿಯೂರಪ್ಪ ವಿರುದ್ಧ ಈ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ತನಿಖೆಗೆ ಒಳಪಡಬೇಕು ಆಗ್ರಹಿಸಿದರು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು. ವಿಚಾರಣೆ ನಡೆಯುವಾಗ ಯಡಿಯೂರಪ್ಪ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಯಡಿಯೂರಪ್ಪ ತಮ್ಮ ಸ್ಥಾನದಲ್ಲಿ ಇರದೇ ರಾಜೀನಾಮೆ ಕೊಡಬೇಕು ಒತ್ತಾಯಿಸಿದರು.

ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಯಡಿಯೂರಪ್ಪ ಅವರನ್ನು ಸಿಎಂ ಆಗಿ ಮುಂದುವರೆಸುತ್ತಾರೆ? ಚಾರ್ಜ್ ಶೀಟ್ ಹಾಕಿದ ಹಿನ್ನೆಲೆ ಯಡಿಯೂರಪ್ಪ ಟ್ರಯಲ್ ಫೇಸ್ ಮಾಡಲಿ. ಕಾಂಗ್ರೆಸ್ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸುತ್ತದೆ ಎಂದರು.