Asianet Suvarna News

'ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ'

* ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕನ ಕೋಟಿ-ಕೋಟಿ ಡೀಲ್ ಪ್ರಕರಣ
* ಅರೆಸ್ಟ್ ಮಾಡಿದ 24 ಗಂಟೆಗಳಲ್ಲಿ ಶ್ರೀರಾಮುಲು ಪಿಎ ರಿಲೀಸ್
* ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

Karnataka Congress Hits out at BJP Govt Over Sriramulu PA Released rbj
Author
Bengaluru, First Published Jul 3, 2021, 3:59 PM IST
  • Facebook
  • Twitter
  • Whatsapp

ಬೆಂಗಳೂರು, (ಜುಲೈ.03): ವಂಚನೆ ಪ್ರಕರಣದಲ್ಲಿ ಸಚಿವ ಶ್ರೀರಾಮುಲು ಪಿಎ ಬಂಧಿಸಿದ 24 ಗಂಟೆಯೊಳಗೆ ಬಿಡುಗಡೆಗೊಳಿಸಿದ್ದು ರಾಜ್ಯದಲ್ಲಿ ಪೊಲೀಸರಿಗೆ ಸ್ವತಂತ್ರವಿಲ್ಲದ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಚಿವ ಶ್ರೀರಾಮುಲು ಪಿ ಎ ವಿರುದ್ದ ಎಫ್ ಐಆರ್ ಆಗಿದ್ದರೂ ಕೋರ್ಟಿಗೆ ಹಾಜರುಪಡಿಸದೆ ಬಿಡುಗಡೆಗೊಳಿಸಿದ್ದು ಏಕೆ? ಪ್ರಭಾವ ಬೀರಿದ್ದು ಯಾರು? ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ ಎಂದು ಟೀಕಿಸಿದೆ.

ಅರೆಸ್ಟ್ ಆಗಿದ್ದ ರಾಮುಲು ಆಪ್ತ ರಿಲೀಸ್, ಅನುಮಾನ ಮೂಡಿಸಿದ ಸಿಸಿಬಿ ನಡೆ

ಅರೆಸ್ಟ್ ಮಾಡಿ ಎಂದಾಗ ಅರೆಸ್ಟ್ ಮಾಡುವುದು, ಬಿಡುಗಡೆ ಮಾಡಿ ಎಂದಾಗ ಬಿಡುಗಡೆ ಮಾಡುವುದಕ್ಕೆ ಪೊಲೀಸರು ವಿಜಯೇಂದ್ರ ಮನೆಯ ಕಾಲಾಳುಗಳಂತಗಿದ್ದಾರೆಯೇ? ಎಫ್ ಐಆರ್ ದಾಖಲಾಗಿದ್ದರೂ ಆರೋಪಿಯನ್ನ ಬಿಡುಗಡೆ ಮಾಡುವುದರ ಹಿಂದೆ ಭ್ರಷ್ಟ ಹಣದ “ಸೆಟಲ್ಮೆಂಟ್” ನಡೆದಿರುವಂತಿದೆ. ಬಸವರಾಜ್ ಬೊಮ್ಮಾಯಿ ಅವರೇ, ಪೊಲೀಸ್ ಇಲಾಖೆ ನಿಮ್ಮ ಪಕ್ಷದ ಅನುಕೂಲಕ್ಕೆ ಇರುವುದೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರಾಜ್ಯದಲ್ಲಿ ಅಧಿಕಾರಿಗಳದ್ದು ಡೀಲಿಂಗ್, ಸಚಿವರದ್ದು ಡೀಲಿಂಗ್, ಸಚಿವರ ಪಿಎಗಳದ್ದೂ ಡೀಲಿಂಗ್. ನಿಮ್ಮ ಪಕ್ಷದ ಈ ಸರ್ಕಾರ ಎಷ್ಟು ಪರ್ಸೆಂಟ್‌ನದ್ದು ಸ್ವಲ್ಪ ಹೇಳಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಟ್ಯಾಗ್ ಮಾಡಿ ವ್ಯಂಗ್ಯವಾಡಿದೆ..

ಅಮಿತ್ ಶಾ ಅವರು ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವನ್ನು 10 ಪರ್ಸೆಂಟ್ ಎಂದು ಲೇವಡಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್ ಅಮಿತ್ ಶಾಗೆ ತಿರುಗೇಟು ಕೊಟ್ಟಿದೆ.

Follow Us:
Download App:
  • android
  • ios