ಅರೆಸ್ಟ್ ಆಗಿದ್ದ ರಾಮುಲು ಆಪ್ತ ರಿಲೀಸ್, ಅನುಮಾನ ಮೂಡಿಸಿದ ಸಿಸಿಬಿ ನಡೆ
* ಸಚಿವ ಶ್ರೀರಾಮುಲು ಆಪ್ತ ರಾಜಣ್ಣ ಬಿಡುಗಡೆ
* ಹಣಕ್ಕೆ ಆಮಿಷ ಸೇರಿದಂತೆ ಕೋಟಿ ಕೋಟಿ ಡೀಲ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ರಾಮುಲು PA
* ಶ್ರೀರಾಮುಲು ಸುದ್ದಿಗೋಷ್ಠಿ ಬೆನ್ನಲೇ ರಾಜಣ್ಣ ರಿಲೀಸ್
8 ಅನುಮಾನ ಹಾಗೂ ಚರ್ಚೆಗೆ ಗ್ರಾಸವಾದ ಸಿಸಿಬಿ ಪೊಲೀಸರ ನಡೆ
ಬೆಂಗಳೂರು, (ಜುಲೈ.02): ಸಿಸಿಬಿಯಿಂದ ಬಂಧನಕ್ಕೊಳಗಾಗಿದ್ದ ಸಚಿವ ಶ್ರೀರಾಮುಲು ಆಪ್ತ ರಾಜಣ್ಣನನ್ನು ವಿಚಾರಣೆ ಬಳಿಕ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಣಕ್ಕೆ ಆಮಿಷ ಸೇರಿದಂತೆ ಕೋಟಿ ಕೋಟಿ ಡೀಲ್ ಪ್ರಕರಣದಲ್ಲಿ ಶ್ರೀರಾಮುಲು ಪಿಎ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ನಿನ್ನೆ (ಜುಲೈ.01) ಬಂಧಿಸಿದ್ದರು.
ಭಾರೀ ವಂಚನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಪಿಎ ಅರೆಸ್ಟ್!
ಆದ್ರೆ, ಇಂದು (ಶುಕ್ರವಾರ) ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಿದ್ದು, ದೂರು ನೀಡಿರುವ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದಾದ ಕೆಲವೇ ಗಂಟೆಯಲ್ಲಿ ಸಿಸಿಬಿ ಪೊಲೀಸರು ರಾಜಣ್ಣನನ್ನು ಬಿಟ್ಟು ಕಳುಹಿಸುರುವುದು ಸಾಕಷ್ಟು ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಸಂಜೆ ರಾಜಣ್ಣ ಅವರನ್ನ ವಶಕ್ಕೆ ಪಡೆಯಲಾಗಿತ್ತು. ಎಸಿಪಿ ನಾಗಾರಾಜ್ ಇನ್ಸ್ಪೆಕ್ಟರ್ಗಳಾದ ಹಜ್ರೇಶ್ ಮತ್ರು ಪ್ರಶಾಂತ್ ಬಾಬು ಅವರು ವಿಚಾರಣೆ ನಡೆಸಿದ್ದು, ರಾಜಣ್ಣ ಅವರ ವಾಯ್ಸ್ ಸ್ಯಾಂಪಲ್ ಪಡೆದುಕೊಳ್ಳಲಾಗಿದೆ. ಅದನ್ನ ಎಫ್‌ಎಸ್‌ಎಲ್‌ಗೂ ರವಾನಿಸಲಾಗಿದೆ.
ಮೊಬೈಲ್‌ನಲ್ಲಿ ಸಿಕ್ಕ ಆಡಿಯೋಗಳ ಮ್ಯಾಚ್ ಮಾಡುವ ಸಂಬಂಧ ವಾಯ್ಸ್ ಸ್ಯಾಂಪಲ್ ಪಡೆದುಕೊಂಡು FSlಗೆ ಕಳುಹಿಸಿದ್ದು, ಮತ್ತೆ ನೋಟಿಸ್ ಕೊಟ್ಟಾಗ ವಿಚಾರಣೆಗೆ ಹಾಜರಾಗಲು ಸೂಚಿಸಿ ಕಳುಹಿಸಿದ್ದಾರೆ.