ಬೆಂಗಳೂರು, (ಜುಲೈ.21): ಕಾಂಗ್ರೆಸ್​ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. 

ಪಕ್ಷ ವಿರೋಧಿ ಚಟುವಟಿಕೆ, ಬಹಿರಂಗ ಹೇಳಿಕೆ, ಅನಗತ್ಯ ಗೊಂದಲ ಸೃಷ್ಟಿಗೆ ಬ್ರೇಕ್ ಹಾಕಲು ಸಮಿತಿ ರಚನೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಜುಲೈ 22ರ ಟಾಪ್‌ 10 ಸುದ್ದಿ

ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ನೇತೃತ್ವದಲ್ಲಿ 12 ಜನರನ್ನ ಒಳಗೊಂಡಿರುವ ಸಮಿತಿ ರಚಿಸಿದ್ದಾರೆ. ಇತ್ತೋಚೆಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನ ಮಟ್ಟಹಾಕಲು ಡಿಕೆಶಿ ಈ ಪ್ಲಾನ್ ಮಾಡಿದ್ದಾರೆ.

ಸಮಿತಿಯ ಸದಸ್ಯರು
ಕೆ.ಬಿ ಕೋಳಿವಾಡ, ಜೆ. ಅಲೆಗ್ಸಾಂಡರ್, ರಾಣಿ ಸತೀಶ್, ಟಿ.ವಿ ಮಾರುತಿ, ಕೈಲಾಶ್ ನಾಥ್ ಪಾಟೀಲ್, ಮಲ್ಲಾಜಮ್ಮ, ಜಲಜಾ ನಾಯಕ್, ಜೆ. ಹುಚ್ಚಪ್ಪ, ಸಿ.ಎಂ ಧನಂಜಯ್, ಸಯ್ಯದ್ ಜುಲ್ಲಾ, ಶಶಿಧರ್ ಹೆಗಡೆ ಸಮಿತಿಯ ಸದಸ್ಯರಾಗಿದ್ದಾರೆ.