ರಾಜ್ಯದ 24 ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಿಗೆ ಗೇಟ್‌ ಪಾಸ್‌: 6 ವರ್ಷ ಪಕ್ಷದಿಂದ ಉಚ್ಛಾಟನೆ

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡದೇ ಬಂಡಾಯವೆದ್ದಿರುವ 24 ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

Karnataka Congress 24 rebel candidates are expelled from the party sat

ಬೆಂಗಳೂರು  (ಮೇ 2): ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡದೇ ಬಂಡಾಯವೆದ್ದಿರುವ 24 ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದು ಶತಃಪ್ರಯತ್ನ ಮಾಡುತ್ತಿದೆ. ಆದರೆ, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಶಾಸಕರು, ಸಚಿವರು, ಕಾಂಗ್ರೆಸ್‌ ಘಟಕದಲ್ಲಿ ಪ್ರಮುಖ ಸ್ಥಾನಮಾನ ಹೊಂದಿದ್ದವರು, ಕಾಂಗ್ರೆಸ್‌ ಮುಖಂಡರು ಹಾಗೂ ಟಿಕೆಟ್‌ ಆಕಾಂಕ್ಷಿಗಳು ಈಗಾಗಲೇ ಟಿಕೆಟ್‌ ಸಿಗದೇ ಬಂಡಾಯ ಸ್ಪರ್ಧೆ ಮಾಡಿದ್ದಾರೆ. ಆದರೆ, ಬಂಡಾಯ ಸ್ಪರ್ಧೆ ಮಾಡಿ ಕಾಂಗ್ರೆಸ್‌ ಬಾವುಟ ಬಳಕೆ ಮಾಡುತ್ತಿದ್ದರೂ ಪಕ್ಷದ ಶಿಸ್ತುಪಾಲನಾ ಸಮಿತಿಯಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಮತದಾನಕ್ಕೆ ಇನ್ನು 8 ದಿನಗಳು ಬಾಕಿ ಇದೆ ಎನ್ನುವಾಗ ಬಂಡಾಯವೆದ್ದ 24 ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಲಾಗಿದೆ.

ನಮ್ಮದು ಬಜರಂಗದಳ ಮನೆ: ಕಾಂಗ್ರೆಸ್‌ನವರು ಓಟ್ ಕೇಳೋಕೆ ಬಂದ್ರೆ 'ನಾಯಿ ಬಿಡ್ತೀವಿ'

6 ವರ್ಷಗಳ ಕಾಲ ಪಕ್ಷ ಸೇರುವಂತಿಲ್ಲ:  ಬಂಡಾಯದ ಬಾವುಟ ಹಾರಿಸಿದ್ದ 24 ಅಭ್ಯರ್ಥಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಿ ಬಂಡಾಯ ಅಭ್ಯರ್ಥಿಗಳಿಗೆ ಶಾಕ್ ನೀಡಲಾಗಿದೆ. ಇನ್ನು ಈಗ ಪಕ್ಷದಿಂದ ಉಚ್ಛಾಟನೆಗೊಂಡ ಸದಸ್ಯರು ಮುಂದಿನ 6 ವರ್ಷಗಳ ಕಾಲ ಮತ್ತೆ ಪಕ್ಷವನ್ನು ಸೇರುವಂತಿಲ್ಲ. ಇನ್ನು ಈಗ ಪಕ್ಷದಿಂದ ಉಚ್ಛಾಟನೆಗೊಂಡ ಎಲ್ಲ ಸದಸ್ಯರು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದು ಸ್ಪರ್ಧೆ ಮಾಡಿದ್ದ ಬಂಡಾಯ ಅಭ್ಯರ್ಥಿಗಳು ಆಗಿದ್ದಾರೆ. ಈಗ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮುಳ್ಳಾಗಿದ್ದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರನ್ನ ಪಕ್ಷದಿಂದ ಹೊರಹಾಕುವ ನಿರ್ಧಾರ ಮಾಡಲಾಗಿದೆ. ಈ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್‌ ಖಾನ್‌ ಆದೇಶ ಹೊರಡಿಸಿದ್ದಾರೆ.

ಉಚ್ಛಾಟನೆಗೊಂಡ ಬಂಡಾಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ..

  • ವಿಧಾನಸಭಾ ಕ್ಷೇತ್ರ-    ಹೆಸರು-        ಪಕ್ಷದಲ್ಲಿದ್ದ ಸ್ಥಾನ
  • ಶಿರಹಟ್ಟಿ-        ರಾಮಕೃಷ್ಣ ದೊಡ್ಡಮನಿ-     ಮಾಜಿ ಶಾಸಕ
  • ಕುಣಿಗಲ್ -        ಬಿ.ಬಿ. ರಾಮಸ್ವಾಮಿಗೌಡ-    ಮಾಜಿ ಶಾಸಕ
  • ಜಗಳೂರು-        ಹೆಚ್.ಪಿ. ರಾಜೇಶ್‌-    ಮಾಜಿ ಶಾಸಕ
  • ಹರಪನಹಳ್ಳಿ-        ಎಂ.ಪಿ. ಲತಾ ಮಲ್ಲಿಕಾರ್ಜುನ-    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
  • ಅರಕಲಗೂಡು-    ಕೃಷ್ನೇಗೌಡ-        ಕಾಂಗ್ರೆಸ್‌ ನಾಯಕ
  • ಬೀದರ್‌ ದಕ್ಷಿಣ    -    ಚಂದ್ರಾ ಸಿಂಗ್-    ಕೆಪಿಸಿಸಿ- ಸಂಯೋಜಕ
  • ತರೀಕೆರೆ-        ಗೋಪಿಕೃಷ್ಣ-        ಡಿಸಿಸಿ- ಉಪಾಧ್ಯಕ್ಷ
  • ಖಾನಾಪುರ-        ಇರ್ಫಾನ್‌ ತಾಳಿಕೋಟೆ-    ಬೆಳಗಾವಿ ಮಾಜಿ ಯುವ ಕಾಂಗ್ರೆಸ್‌ ಮುಖಂಡ
  • ತೇರದಾಳ-        ಡಾ. ಪದ್ಮಜೀತ್‌ ನಾಡಗೌಡ-    ಕಿಸಾಬ್‌ ಸೆಲ್‌- ಉಪಾಧ್ಯಕ್ಷ
  • ಹು-ಧಾರವಾಡ ಪಶ್ಚಿಮ-    ಬಸವರಾಜ್‌ ಮಲ್ಕಾರಿ-    ಮಾಜಿ ಬ್ಲಾಕ್‌ ಅಧ್ಯಕ್ಷ
  • ನೆಲಮಂಗಲ-        ಉಮಾದೇವಿ-        ಲೇಬರ್‌ ಸೆಲ್‌ ಉಪಾಧ್ಯಕ್ಷೆ
  • ಬೀದರ್‌ ದಕ್ಷಿಣ-     ಯೂಸುಫ್‌ ಅಲೀ ಜಮ್ದಾರ್-    ಡಿಸಿಸಿ ಉಪಾಧ್ಯಕ್ಷ ಬೀದರ್
  • ಬೀದರ್‌ ದಕ್ಷಿಣ    -    ನಾರಾಯಣ್‌ ಬಂಗಿ-    ಎಸ್‌ಟಿ ಸೆಲ್‌ ಅಧ್ಯಕ್ಷ ಬೀದರ್
  • ಮಾಯಕೊಂಡ-    ಸವಿತಾ ಮಲ್ಲೇಶ್‌ನಾಯಕ್-     ಟಿಕೆಟ್‌ ಆಕಾಂಕ್ಷಿ
  • ಶ್ರೀರಂಗಪಟ್ಟಣ-     ಪಿ.ಎಚ್. ಚಂದ್ರಶೇಖರ್-    ಟಿಕೆಟ್‌ ಆಕಾಂಕ್ಷಿ
  • ಶಿಡ್ಲಘಟ್ಟ-        ಪಿಟ್ಟು ಆಂಜನಪ್ಪ-    ಟಿಕೆಟ್‌ ಆಕಾಂಕ್ಷಿ
  • ರಾಯಭಾಗ್-        ಶಂಭು ಕೋಲ್ಕರ್-    ಟಿಕೆಟ್‌ ಆಕಾಂಕ್ಷಿ
  • ಶಿವಮೊಗ್ಗ ಗ್ರಾಮಾಂತರ-    ಬಿ.ಎಚ್. ಭೀಮಪ್ಪ-    ಟಿಕೆಟ್‌ ಆಕಾಂಕ್ಷಿ
  • ಶಿಕಾರಿಪುರ-         ಎಸ್‌ಪಿ. ನಾಗರಾಜಗೌಡ-     ಟಿಕೆಟ್‌ ಆಕಾಂಕ್ಷಿ
  • ತರೀಕೆರೆ-        ದೋರ್ನಲ್‌ ಪರಮೇಶ್ವರಪ್ಪ-    ಟಿಕೆಟ್‌ ಆಕಾಂಕ್ಷಿ
  • ಬೀದರ್-        ಶಶಿ ಚೌದಿ-        ಟಿಕೆಟ್‌ ಆಕಾಂಕ್ಷಿ
  • ಔರಾದ್‌-         ಲಕ್ಷ್ಮಣ್‌ ಸೊರಳಿ-    ಟಿಕೆಟ್‌ ಆಕಾಂಕ್ಷಿ
  • ರಾಯಚೂರು ನಗರ-     ಮಜೀಬುದ್ದೀನ್-    ಟಿಕೆಟ್‌ ಆಕಾಂಕ್ಷಿ

ಬಿಜೆಪಿ ಪ್ರಣಾಳಿಕೆ ಪಂಚರತ್ನ ಯೋಜನೆಯ ಕಾಪಿ: ಕುಮಾರಸ್ವಾಮಿ ಆರೋಪ

Karnataka Congress 24 rebel candidates are expelled from the party sat

Latest Videos
Follow Us:
Download App:
  • android
  • ios