ಬಿಜೆಪಿ ಪ್ರಣಾಳಿಕೆ ಪಂಚರತ್ನ ಯೋಜನೆಯ ಕಾಪಿ: ಕುಮಾರಸ್ವಾಮಿ ಆರೋಪ
ಬಿಜೆಪಿಯವರು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಪಂಚರತ್ನ ವಿಷಯಗಳನ್ನ ಕಾಪಿ ಮಾಡಿದ್ದಾರೆ. ನಮ್ಮ ಹಲವು ಯೋಜನೆಗಳು ಬಿಜೆಪಿಯವರು ಕಾಪಿ ಮಾಡಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಮೇ 2): ಬಿಜೆಪಿಯವರು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಪಂಚರತ್ನ ವಿಷಯಗಳನ್ನ ಕಾಪಿ ಮಾಡಿದ್ದಾರೆ. ನಮ್ಮ ಹಲವು ಯೋಜನೆಗಳು ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು
ರಾಯಚೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಸ್ರೇಲ್ ಮಾದರಿ ನೀರಾವರಿ ಯೋಜನೆ ಸಮ್ಮಿಶ್ರ ಸರ್ಕಾರದ ಯೋಜನೆ ಈಗ ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದರು. ಮೂರು ಸಿಲಿಂಡರ್ ಕೊಡುತ್ತೇವೆ ಅಂತಿದ್ದಾರೆ ಏನ್ ಉಪಯೋಗ. ಬಿಜೆಪಿಯವರು ಸಿಲಿಂಡರ್ ರೆಟ್ ನೆನಪಿಸಲು ಕೊಡ್ತಾರಾ.? ಸರ್ಕಾರ ಇದ್ದಾಗಲೇ ಸಿಲಿಂಡರ್ ಕೊಡಬಹುದಿತ್ತು. ದಸರಾ ದೀಪಾವಳಿ ಗಣೇಶ ಹಬ್ಬಕ್ಕೊಂದು ಸಿಲಿಂಡರ್ ಕೊಡ್ತಾರಾ ಅಂತ ಪ್ರಶ್ನಿಸಿದರು. ಇದೇ ವೇಳೆ ವಿವಿಧ ಸಮೀಕ್ಷೆಗಳ ಬಗ್ಗೆ ಕಿಡಿಕಾರಿದರು.
ಭತ್ತದ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್
ಸಿದ್ದರಾಮಯ್ಯಗೆ ನೆನಪಿನ ಶಕ್ತಿ ಕ್ಷೀಣ: ಕುಮಾರಸ್ವಾಮಿ ಸಾಲಮನ್ನಾ ಮಾಡಲಿಲ್ಲ ಅಂತ ಕಾಂಗ್ರೆಸ್ ನಾಯಕರು ಹೇಳ್ತಾರೆ. ಸಿದ್ದರಾಮಯ್ಯ ಅವರಿಗೆ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನೆನೆಪಿನ ಶಕ್ತಿ ಕಡಿಮೆಯಾಗಿದ್ದರೆ ನೆನಪು ಮಾಡುತ್ತೇನೆ. ಎರಡು ಸಾರಿ ಸಾಲಮನ್ನಾ ಮಾಡಿದ್ದು ಜೆಡಿಎಸ್ ಸರ್ಕಾರ ಅಂತ ಎಚ್‌ಡಿಕೆ ಹೇಳಿದರು.75 ವರ್ಷ ಆಡಳಿತ ಮಾಡಿದವರು ಈಗ ನಿರುದ್ಯೋಗ ಭತ್ಯೆ ಕೊಡುತ್ತೇನೆ ಅಂತಿದ್ದಾರೆ. ಎಷ್ಟು ಜನರಿಗೆ ನಿರುದ್ಯೋಗ ಭತ್ತೆ ಕೊಡುತ್ತೀರಿ.ನಿಮ್ಮ ಅವಧಿಯಲ್ಲಿ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಜೆಡಿಎಸ್ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ: ಹಲವಾರು ವರ್ಗದ ಜನರಿಗೆ ನೀವು ಇನ್ನೂ ಕೈಒಡ್ಡುವ ಸ್ಥಿತಿಯಲ್ಲಿದ್ದೀರಿ ಅಂತ ಎರಡು ರಾಷ್ಟ್ರೀಯ ಪಕ್ಷಗಳು ಹೇಳುತ್ತಿವೆ. ಜಿಎಸ್ ಟಿ ಸಂಗ್ರಹದ ದುಡ್ಡು ಎಲ್ಲಿ? ಯಾವ ಕಂಪನಿಗೆ ಹೋಗುತ್ತಿದೆ? ಬಡವರ ಪರಸ್ಥಿತಿ ಸುಧಾರಣೆಗೆ ಬಂಡವಾಳ ಹಾಕುತ್ತಿದ್ದಿರೋ? ನಾಲ್ಕೈದು ಕಂಪನಿ ಅಭಿವೃದ್ಧಿಗೆ ಹಾಕ್ತಿರೋ.? ಮೂರೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? ಎಂದು ಅಸಮಧಾನ ವ್ಯಕ್ತಪಡಿಸಿದರು. ನಮ್ಮ ಆಡಳಿತ ಅವಧಿ ಬಗ್ಗೆ ಚರ್ಚೆ ಮಾಡುವ ನೈತಿಕತೆ ಯಾರೂ ಉಳಿಸಿಕೊಂಡಿಲ್ಲ. ಎರಡು ಪಕ್ಷ ಹಣದಲ್ಲಿ ಏನಾದ್ರೂ ಕೊಂಡುಕೊಳ್ಳುತ್ತೇವೆ ಅಂತ ತಿಳಿದಿದ್ದಾರೆ. ನಮ್ಮ ಪಂಚರತ್ನ ಕಾರ್ಯಕ್ರಮಕ್ಕೂ ಇವರ ಕಾರ್ಯಕ್ರಮಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದರು.
ಜೆ.ಪಿ.ನಡ್ಡಾಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜೆಡಿಎಸ್ ಗೆ ಓಟು ಹಾಕಬೇಡಿ 10-15 ಸೀಟು ಬರುತ್ತೆ ಅಷ್ಟೇ ಅಂದಿದ್ದಾರೆ. ಬಿಜೆಪಿ ಆ ಸ್ಥಿತಿಗೆ ಬಂದರೂ ಅಚ್ಚರಿಯಿಲ್ಲ. ರಾಜ್ಯದಲ್ಲಿ 50 ರಿಂದ 60 ಸಿಟಿಗೆ ಬಿಜೆಪಿ ಬೆವರು ಇಳಿಸುತ್ತೆ ನೋಡುತ್ತಿರಿ. ಉತ್ತರ ಕರ್ನಾಟಕದಲ್ಲಿ ಕನಿಷ್ಠ 30-35 ಸ್ಥಾನ ಜೆಡಿಎಸ್ ಪಡೆಯುತ್ತದೆ. ನಾವು ಕಾಂಗ್ರೆಸ್ ಅಥವಾ ಬಜೆಪಿ ಬಿ ಟೀಂ ಅಲ್ಲಾ, ನಾವು ಯಾರ ಬಿ ಟೀಂ ಅಲ್ಲಾ. ರಾಜ್ಯದ ಜನರ ಅಭಿವೃದ್ಧಿಯ ಬಿ ಟೀಂ ನಾವು. ಸಿದ್ದರಾಮಯ್ಯ ಜೆಡಿಎಸ್‌ಗೆ ಸಿದ್ದಾಂತವಿಲ್ಲ ಅಂತಾರೆ. ನಮಗೆ ಸಿದ್ದಾಂತವಿಲ್ಲ ಅನ್ನೋದಾರೆ 2018 ಚುನಾವಣೆ ಬಳಿಕ ಜೆಡಿಎಸ್ ಮನೆಬಾಗಿಲಿಗೆ ಯಾಕೆ ಬಂದ್ರಿ ಎಂದು ಕೇಳಿದರು.
ಬಿಡುವಿಲ್ಲದೆ ಪ್ರಚಾರ ಮಾಡಿದ್ರಿಂದ ಸಿದ್ದರಾಮಯ್ಯ ನೆನಪಿನ ಶಕ್ತಿ ಕಡಿಮೆ ಆಗಿದೆ: ಎಚ್‌ಡಿಕೆ ವ್ಯಂಗ್ಯ
ಜನರ ಕಷ್ಟದಲ್ಲಿ ಬರದವರು, ಚುನಾವಣೆ ವೇಳೆ ಬಂದಿದ್ದಾರೆ: ಚುನಾವಣೆಯ ಮತದಾನ ದಿನ ಹತ್ತಿರವಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಈಗ ಜನರ ಬಗ್ಗೆ ಕಾಳಜಿ ತೋರಿಸುತ್ತಿವೆ. ಪ್ರಧಾನಿ ,ಗೃಹ ಸಚಿವರು ಇಲ್ಲೆ ಠಿಕಾಣಿ ಹೂಡಿದ್ದಾರೆ. ರಾಜ್ಯ ಬಿಟ್ಟು ಹೋಗಿಲ್ಲ. ಅಧಿಕಾರದಲ್ಲಿದ್ದವರು ದೇಶ, ರಾಜ್ಯದ ವಿಷಯ ಬೇಡ ರಾಯಚೂರು ಜಿಲ್ಲೆಗೆ ಬರೋಣ ಜನ ಏನು ಬಯಸಿದ್ದರು. ಅದರ ಒಂದು ಕಾರ್ಯಕ್ರಮವನ್ನಾದ್ರೂ ಈಡೆರಿಸಿದ್ದಾರಾ ಎಂದರು. ಸಿಂಧನೂರಿಗೆ ಪ್ರಧಾನಿ ಮೋದಿ ಬಂದಿದ್ದಾರೆ. ನೀವು ಜನತೆಯ ಕಷ್ಟವನ್ನ ಕೇಳಿದ್ದೀರಾ ಬರ, ಪ್ರವಾಹ ಬಂದಾಗ ಎಲ್ಲಿದ್ದಿರಿ, ಜನರ ಕಷ್ಟ ಭಾವನೆಗಳಿಗೆ ಕಿಂಚಿತ್ತು ಗೌರವ ಕೊಡದವರು ನೀವು. ರೈತರು ನೆಮ್ಮದಿಯಿಂದ ಬದುಕಿಲ್ಲ, ವಾಸಿಸಲು ಮನೆಯಿಲ್ಲ. ರಾಜ್ಯದಲ್ಲಿ ಈಗಲೂ ಜನ ಬಡತನ ರೇಖೆಗಿಂತ ಕಡಿಮೆಯಿದ್ದಾರೆ. ಅಪೌಷ್ಟಿಕತೆಗೆ ಪರಿಹಾರ ಏನು ಕೊಟ್ಟಿದ್ದೀರಿ ಎಂದು ಹರಿಹಾಯ್ದರು.