Asianet Suvarna News Asianet Suvarna News

ಸಂಪುಟ ವಿಸ್ತರಣೆ: 5 ಸಚಿವರಿಗೆ ಕೊಕ್, 11 ಹೊಸ ಮುಖಗಳಿಗೆ ಮಣೆ?

ಕೈ ಪಾಳೆಯದಲ್ಲಿ ಸಂಪುಟ ಚರ್ಚೆ! ಸಚಿವರಲ್ಲಿ ಶುರುವಾಗಿದೆ ಆತಂಕ! ! ಸಂಪುಟ ವಿಸ್ತರಣೆಯೋ..? ಪುನರಚನೆಯೋ.? !ಕೈ ಶಾಸಕರಲ್ಲಿ ಸಚಿವರಲ್ಲಿ ತೀವ್ರ ಗೊಂದಲ. !ಸಂಪುಟ ವಿಸ್ತರಣೆ ಮಾತ್ರ ಆದ್ರೆ ಹಿರಿಯ ಶಾಸಕರಿಗಿಲ್ಲ ಸಚಿವ ಸ್ಥಾನ! ಸಂಪುಟ ವಿಸ್ತರಣೆ ಅಂದ್ರೆ ನಾಲ್ಕು ಸ್ಥಾನ ಮಾತ್ರ ತುಂಬಿಕೊಳ್ಳು ಕೈ ನಾಯಕರ ತಂತ್ರ.
 

Karnataka coalition Govt cabinet likely to be reshuffled on Dec 22
Author
Bengaluru, First Published Dec 19, 2018, 4:02 PM IST

ಬೆಳಗಾವಿ, (ಡಿ.19) : ಕಗ್ಗಂಟ್ಟಾಗಿಯೇ ಉಳಿದಿದ್ದ ರಾಜ್ಯದ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಸಮ್ಮಿಶ್ರ ಸರ್ಕಾರ ಕೊನೆಗೂ ಸಚಿವ ಸಂಪುಟ ವಿಸ್ತರಣೆ ಮುಂದಾಗಿದೆ.

ಕಾಂಗ್ರೆಸ್ ಬಳಿ ಆರು ಜೆಡಿಎಸ್ ಬಳಿ ಎರಡು ಸೇರಿದಂತೆ ಒಟ್ಟು ಎಂಟು ಸಚಿವ ಸ್ಥಾನಗಳು ಖಾಲಿ ಇವೆ. ಆದ್ರೆ 6 ರಲ್ಲಿ ನಾಲ್ಕು ಸ್ಥಾನ ಮಾತ್ರ ಭರ್ತಿ ಮಾಡಿ 2 ಸ್ಥಾನ ಬಾಕಿ ಉಳಿಸಿಕೊಳ್ಳಲು ನಿರ್ಧರಿಸಿದೆ.

ಕಾಂಗ್ರೆಸ್‌ ಪಾಲಿಗಿರೋದು 6, ಸಂಪುಟಕ್ಕೆ ಯಾರ್ಯಾರು? ಫೈನಲ್ ಲಿಸ್ಟ್

ಪ್ರಮುಖವಾಗಿ ಕಾಂಗ್ರೆಸ್ 5 ಸಚಿವರಿಗೆ ಕೊಕ್ ನೀಡಿ 11 ಹೊಸ ಮುಖಗಳಿಗೆ ಮಣೆ ಹಾಕಲು ತಂತ್ರ ರೂಪಿಸಿದೆ. ಆದ್ರೆ ಕಾಂಗ್ರೆಸ್ ನಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿ ನೋಡಿದ್ರೆ ಹನುಂತನ ಬಾಲದಂತೆ ಬೆಳೆದಿದೆ.

ಸಂಪುಟದಿಂದ ಯಾರು ಔಟ್? ಯಾರು ಇನ್?

ಕಾಂಗ್ರೆಸ್ ತನ್ನ ಐದು ಸಚಿವರಿಗೆ ಸಂಪುಟದಿಂದ ಗೇಟ್ ಪಾಸ್ ನೀಡಲು ಮುಂದಾಗಿದ್ದ ಹಿಟ್ ಲೀಸ್ಟ್ ನಲ್ಲಿ ಆರ್ ಶಂಕರ್, ಜಯಮಾಲ, ರಮೇಶ್ ಜಾರಕಿಹೊಳಿ, ವೆಂಕಟರಮಣಪ್ಪ, ಆರ್.ವಿ ದೇಶಪಾಂಡೆ ಹೆಸರುಗಳು ಕೇಳಿಬಂದಿವೆ.

* ಆರ್ ಶಂಕರ್ ಸ್ಥಾನ ಎಂ.ಟಿ‌.ಬಿ ನಾಗರಾಜ್/ ಸಿ.ಎಸ್ ಶಿವಳ್ಳಿಗೆ.

* ಆರ್.ವಿ ದೇಶಪಾಂಡೆ ಸ್ಥಾನ ಶಿವರಾಮ ಹೆಬ್ಬಾರ್ ಗೆ ಸಿಗುವ ಸಾಧ್ಯತೆ..

* ರಮೇಶ್ ಜಾರಕಿಹೊಳಿ ಸ್ಥಾನ ಸತೀಶ್ ಜಾರಕಿಹೊಳಿಗೆ.

* ಉಳಿದ ಎರಡು ಸಚಿವರ ಸ್ಥಾನ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ನೀಡಲು ಚಿಂತನೆ. (ಇದರಲ್ಲಿ ಎಂ.ಬಿ. ಪಾಟೀಲ್ ಪ್ರಬಲ ಆಕಾಂಕ್ಷಿ)

ಒಟ್ಟಿನಲ್ಲಿ 11 ಜನ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿದ್ದು, ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದು, ಯಾರೆಲ್ಲ ಸಚಿವ ಸಂಪುಟದಿಂದ ಹೊರ ಬರುತ್ತಾರೆ. ಯಾರೆಲ್ಲ ಸಚಿವ ಸಂಪುಟ ಸೇರುತ್ತಾರೆ ಎಂಬ ಕುತೂಹಲ ಮೂಡಿಸಿದ್ದು, ಮತ್ತೊಂದೆಡೆ ಸಚಿವ ಸ್ಥಾನ ಸಿಗುತ್ತೋ ಇಲ್ಲೋ ಎನ್ನುವ ಆತಂಕದಲ್ಲಿ ಶಾಸಕರಿದ್ದಾರೆ.

Follow Us:
Download App:
  • android
  • ios