Asianet Suvarna News Asianet Suvarna News

Breaking: ಯಡಿಯೂರಪ್ಪ ಸುದ್ದಿಗೋಷ್ಠಿ, ನೂತನ ಸಚಿವರ ಪಟ್ಟಿ ರಿಲೀಸ್..!

10+3 ಅಂದ್ರೆ 13 ಜನರು  ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಸುದ್ದಿ ಇತ್ತು. ಇದಕ್ಕೆ ಹೈಕಮಾಂಡ್ ಸಹ ಒಪ್ಪಿಗೆ ಸೂಚಿತ್ತು. ಆದ್ರೆ, ಇದೀಗ ಎಲ್ಲಾ ಉಲ್ಟಾ ಆಗಿದೆ. ಈ ಬಗ್ಗೆ ಸ್ವತಃ ಯಡಿಯೂರಪ್ಪ ಅವರೇ ಅಧಿಕೃತ ಹೇಳಿಕೆ ಕೊಟ್ಟಿದ್ದಾರೆ.

Karnataka CM Yediyurappa reveals Only 10 MLAs to Take Oath as Minister
Author
Bengaluru, First Published Feb 5, 2020, 9:03 PM IST

ಬೆಂಗಳೂರು, [ಫೆ.05]: 10 ಜನರು ಮಾತ್ರ ಸಂಪುಟ ಸೇರಿಸಿಕೊಳ್ಳಲಾಗುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಚಿತಪಡಿಸಿದ್ದಾರೆ.

ಇಂದು [ಬುಧವಾರ] ಬೆಂಗಳೂರಿನ ತಮ್ಮ ಧವಳಗಿರಿ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹೆಸರುಗಳುನ್ನು ಬಹಿರಂಗಪಡಿಸಿದರು.

ದೆಹಲಿಯಿಂದ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದು, 10 ಜನಕ್ಕೆ ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಭಾವೀ ಸಚಿವರಿಗೆ ಸಿಎಂ ಕಾಲಿಂಗ್: ಪ್ರಮಾಣವಚನಕ್ಕೆ ಬರುವಂತೆ ಬುಲಾವ್

ಉಳಿದವರು ಮುಂದಿನ ದಿನಗಳಲ್ಲಿ ಮಾಡಿ ಎಂದು ಹೇಳಿದ್ದಾರೆ. ಅದರಂತೆ ಉಮೇಶ್ ಕತ್ತಿ ನೂರಕ್ಕೆ ನೂರರಷ್ಟು ಮಂತ್ತಿ ಆಗುತ್ತಾರೆ. ಇವಾಗ ಇಲ್ಲದಂದ್ರೆ ಮುಂದೆ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿದರು.

ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೊಡೋದು ಕಷ್ಟ ಆಗುತ್ತೆ. ಅವರಿಗೆ ಬೇರೆ ಜವಬ್ದಾರಿ ವಹಿಸುತ್ತೇವೆ. ಅವರನ್ನು ಕರೆದು ಮಾತನಾಡುವ ಪ್ರಯತ್ನ ಮಾಡ್ತಿಡುತ್ತಿದ್ದೇನೆ ಎಂದು ತಿಳಿಸಿದರು.

ಈ ಮೂಲಕ ಅಥಣಿಯ ನೂತನ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಮೂಲ ಬಿಜೆಪಿ ನಾಯಕರಾದ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಹಾಗೂ ಉಮೇಶ್ ಕತ್ತಿ ಸದ್ಯಕ್ಕೆ ಮಂತ್ರಿ ಸ್ಥಾನ ಇಲ್ಲ ಎನ್ನುವುದು ಖಾತ್ರಿಯಾಯ್ತು. ಇನ್ನುಳಿದ ನೂತನ 10 ಶಾಸಕರು ನಾಳೆ [ಗುರುವಾರ] ಬೆಳಗ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದೆ.
 
ಯಾರಿಗೆ ಮಂತ್ರಿಗಿರಿ, ಯಾರಿಗಿಲ್ಲ ಎನ್ನುವುದು ಕಳೆದಒಂದುವೆರೆ ತಿಂಗಳಿಂದ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೆ, ಇದೀಗ ಸ್ವತಃ ಸಿಎಂ ಅವರೇ ಎಲ್ಲವೂಗಳಿಗೆ ತೆರೆ ಎಳೆದಿದ್ದಾರೆ.

Follow Us:
Download App:
  • android
  • ios