ಬೆಂಗಳೂರು, (ಫೆ.05): ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ನೂತನ ಸಚಿವರ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ.

"

ಈ ಹಿನ್ನೆಲೆಯಲ್ಲಿ ರಾಜ್ಯಭವನದಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆಗಳು ನಡೆದಿವೆ. ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರುಗಳ ಕುಟುಂಬಸ್ಥರಿಗೆ 100 ಆಸನಗಳನ್ನು ಮೀಸಲಿಡಲಾಗಿದೆ.

ಸಂಪುಟ ವಿಸ್ತರಣೆಯ ಬ್ರೇಕಿಂಗ್: ಭಾವೀ ಸಚಿವರಿಗೆ ರೆಡಿಯಾಗಿ ನಿಂತಿವೆ ಕಾರುಗಳು

ಆದ್ರೆ, ಯಾರೆಲ್ಲ ಸಚಿವರಾಗಲಿದ್ದಾರೆ ಎನ್ನುವವರ ಹೆಸರುಗಳಳನ್ನು ಮಾತ್ರ ಯಡಿಯೂರಪ್ಪ ಅವರು ಗುಟ್ಟಾಗಿ ಇಟ್ಟುಕೊಂಡಿದ್ದಾರೆ.

ಮತ್ತೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖುದ್ದು ಭಾವೀ ಸಚಿವರುಗಳಿಗೆ ಫೋನ್ ಕರೆ ಮಾಡಿ ನಾಳೆ (ಗುರುವಾರ) ಪ್ರಮಾಣವಚನ ಸ್ವೀಕಾರಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. 
 
ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಮುಗಿಸಿಕೊಂಡು ಬರುವ ಮಾರ್ಗ ಉದ್ದಕ್ಕೂ ದೂರವಾಣಿ ಕೆರೆ ಮಾಡಿ ಪ್ರಮಾಣವಚನಕ್ಕೆ ಬುಲಾವ್ ನೀಡಿದ್ದಾರೆ.

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಬಹುತೇಕವಾಗಿ ಸಿಎಂ ಕಚೇರಿಯಿಂದ ಸಚಿವರಾಗುವ ಶಾಸಕರುಗಳಿಗೆ ಕರೆ ಮಾಡುವುದು ವಾಡಿಕೆ. ಆದ್ರೆ, ರಾಜ್ಯ ಬಿಜೆಪಿಯಲ್ಲಿ ಸದ್ಯ ಪರಿಸ್ಥಿತಿ ಸರಿ ಇಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಕರೆ ಮಾಡಿದ್ದಾರೆ.

ಈ ಬಗ್ಗೆ ಭಾವೀ ಸಚಿವರುಗಳೇ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. ಬಹುತೇಕ ಎಲ್ಲಾ ಅಂದ್ರೆ ಮಹೇಶ್ ಕುಮಟಳ್ಳಿ ಹೊರತುಪಡಿಸಿ ಇನ್ನುಳಿದ 10 ನೂತನ ಶಾಸಕರುಗಳಿಗೆ ಕರೆ ಮಾಡಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ, ಬಿ.ಸಿ.ಒ 
ಹಿರೇಕೆರೂರು-ಬಿ.ಸಿ.ಪಾಟೀಲ್
ಯಶವಂತಪುರ- ಎಸ್‌.ಟಿ.ಸೋಮಶೇಖರ್
ಮಹಾಲಕ್ಷ್ಮೀ ಲೇಔಟ್-ಗೋಪಾಲಯ್ಯ
ಯಲ್ಲಾಪುರ- ಶಿವರಾಮ್ ಹೆಬ್ಬಾರ್
ವಿಜಯನಗರ (ಹೋಸಪೇಟೆ)-ಆನಂದ್ ಸಿಂಗ್
ಕೆ.ಆರ್.ಪುರಂ- ಬೈರತಿ ಬಸವರಾಜ್
ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
ಗೋಕಾಕ್- ರಮೇಶ್ ಜಾರಕಿಹೊಳಿ
 ಕಾಗವಾಡ- ಶ್ರೀಮಂತ ಪಾಟೀಲ್