ಸಿಎಂ ಸಿದ್ದರಾಮಯ್ಯ ಎಚ್‌ಡಿಕೆ ಮುಖಾಮುಖಿ: ನೋಡದೇ ಮುಂದೆ ಸಾಗಿದ ಕುಮಾರಸ್ವಾಮಿ!

ಉಭಯ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಎಚ್ಡಿ ಕುಮಾರಸ್ವಾಮಿ ಇಂದು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ವೇಳೆ ಆಕಸ್ಮಿಕವಾಗಿ ಪರಸ್ಪರ ಮುಖಾಮುಖಿಯಾದ ಸಂದರ್ಭ ಎದುರಾಯ್ತು. ಆದರೆ ಈ ವೇಳೆ ಪರಸ್ಪರ ಮುಖವನ್ನೇ ನೋಡದೇ ಮುಂದೆ ಸಾಗಿದ ಘಟನೆಗೆ ಸಾಕ್ಷಿಯಾಯಿತು.

Karnataka CM Siddaramaiah meets former CM HD Kumaraswamy rav

ಬೆಂಗಳೂರು (ಜೂ.3) ಉಭಯ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಎಚ್ಡಿ ಕುಮಾರಸ್ವಾಮಿ ಇಂದು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ವೇಳೆ ಆಕಸ್ಮಿಕವಾಗಿ ಪರಸ್ಪರ ಮುಖಾಮುಖಿಯಾದ ಸಂದರ್ಭ ಎದುರಾಯ್ತು. ಆದರೆ ಈ ವೇಳೆ ಪರಸ್ಪರ ಮುಖವನ್ನೇ ನೋಡದೇ ಮುಂದೆ ಸಾಗಿದ ಘಟನೆಗೆ ಸಾಕ್ಷಿಯಾಯಿತು.

ಇಂದು ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಂದೆ ಎಚ್‌ಸಿ ಮಹದೇವಪ್ಪ ಹಿಂದೆ ಸಿದ್ದರಾಮಯ್ಯ ನಡೆದುಕೊಂಡು ಚುನಾವಣಾಧಿಕಾರಿಗೆ ಆಗಮಿಸಿ ಚುನಾವಣಾ ಕಾರ್ಯದರ್ಶಿ ಕಚೇರಿ ಮುಂಭಾಗದಲ್ಲಿ ಬಂದು ನಿಲ್ಲೋದಕ್ಕೂ, ಅತ್ತ ಚುನಾವಣಾಧಿಕಾರಿ ಕಚೇರಿಯಿಂದ ಎಚ್‌ಡಿ ಕುಮಾರಸ್ವಾಮಿ ಹೊರಬಂದಿದ್ದರಿಂದ ಎದುರುಬದರಾದರು. ಈ ವೇಳೆ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ ಪರಸ್ಪರ ಮುಖ ಕೂಡ ನೋಡಿಕೊಳ್ಳಲಿಲ್ಲ. ಎಚ್‌ಡಿ ಕುಮಾರಸ್ವಾಮಿ ಸಿಎಂ ಮುಖ ಕೂಡ ನೋಡದೇ ಇತರರಿಗೆ ನಮಸ್ಕರಿಸಿ ಮುಂದೆ ಸಾಗಿದರು. ಈ ವೇಳೆ ಎಚ್‌ಡಿ ಕುಮಾರಸ್ವಾಮಿಯವರ ಹಿಂದಿದ್ದ ಜಿಟಿ ದೇವೇಗೌಡ ಸಿಎಂಗೆ ನಮಸ್ಕರಿಸಿ ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದರು.ಕೆಲ ಜೆಡಿಎಸ್ ಶಾಸಕರು ಸಿಎಂ ಕಾಲಿಗೆ ಮುಟ್ಟಿ ನಮಸ್ಕಾರಿಸಿ ಆಶೀರ್ವಾದ ಪಡೆದರು.

 

ಶಿಕ್ಷಣ ಕ್ಷೇತ್ರಕ್ಕೆ ಏನಾದ್ರೂ ಕೊಡುಗೆ ನೀಡಿದ್ರೆ ಅದು ಕುಮಾರಸ್ವಾಮಿ ಮಾತ್ರ: ಎಚ್‌ಡಿ ರೇವಣ್ಣ

ಅದೇ ರೀತಿ ಡಿಕೆ ಶಿವಕುಮಾರ ಎಚ್‌ಡಿ ಕುಮಾರಸ್ವಾಮಿ ವಿಧಾನಸಭೆ ಕಾರ್ಯದರ್ಶಿ ಕಚೇರಿಯ ಹೊರಗಡೆ ಕಾರಿಡಾರ್‌ನಲ್ಲಿ ಮುಖಾಮುಖಿಯಾದರೂ ಪರಸ್ಪರ ಮುಖವನ್ನೂ ನೋಡದೇ ನಡೆದರು. ಈ ಹಿಂದೆ ರಾಜಕೀಯವಾಗಿ ಎಷ್ಟೇ ಬೈದಾಡಿಕೊಂಡರು ಪರಸ್ಪರ ಎದುರುಬದರಾದಾಗ ಉಭಯ ಕುಶಲೋಪರಿ ನಡೆಯುತ್ತಿತ್ತು. ಆದರೆ ಪ್ರಜ್ವಲ್ ರೇವಣ್ಣ ಘಟನೆ ಬಳಿಕ ಹೆಚ್ಡಿ ಕುಟುಂಬಕ್ಕೆ ಸಂಕಷ್ಟ ತಂದೊಡ್ಡಿರುವುದು ಪರಸ್ಪರ ದ್ವೇಷ, ವೈಮನಸು ಉಭಯ ನಾಯಕರಲ್ಲಿ ಎದ್ದು ಕಾಣುವಂತಿತ್ತು.

Latest Videos
Follow Us:
Download App:
  • android
  • ios