Karnataka Govt Formation: ಕರ್ನಾಟಕ ಸಿಎಂ ಆಯ್ಕೆಯಾಗಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ : ಸುರ್ಜೇವಾಲಾ
ಕರ್ನಾಟಕ ಸಿಎಂ ಆಯ್ಕೆ ಇನ್ನೂ ಆಯ್ಕೆಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ (ಮೇ.17): ಕರ್ನಾಟಕ ಸಿಎಂ ಆಯ್ಕೆ ಇನ್ನೂ ಆಯ್ಕೆಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ. ಇಂದು ಅಥವಾ ನಾಳೆ ಸಿಎಂ ಆಯ್ಕೆ ಆಗಲಿದೆ. ಸಿಎಂ ಹುದ್ದೆ ಆಯ್ಕೆಯಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ. ಆ ರೀತಿಯ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಇಂತಹ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕಳೆದೆರಡು ದಿನಗಳಿಂದ ಚರ್ಚೆ ನಡೆಸುತ್ತಿದ್ದಾರೆ. ಖರ್ಗೆ ಯಾವುದೇ ನಿಧಾರ ತೆಗೆದುಕೊಳ್ಳಬಹುದು. ಮೋದಿ ಇಂತಹ ವಿಚಾರದಲ್ಲಿ 10 ರಿಂದ 15 ದಿನ ತೆಗೆದುಕೊಳ್ಳುತ್ತಿದ್ದರು. ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಪ್ರತೀ ಯೋಜನೆಗಳನ್ನು ಈಡೇರಿಸುತ್ತೇವೆ. ಮುಂದಿನ 48ರಿಂದ 78 ಗಂಟೆಯೊಳಗೆ ಹೊಸ ಸರಕಾರ ಅಸ್ತಿತ್ವದಲ್ಲಿ ಇರಲಿದೆ. ನಾಳೆ ಪ್ರಮಾಣವಚನ ನಡೆಯುವುದಿಲ್ಲ ಎಂದಿದ್ದಾರೆ.
Karnataka CM Announcement: ಡಿಸಿಎಂ ಹುದ್ದೆಗೆ ಒಪ್ಪದ ಡಿಕೆಶಿ, ಮುಂದಿನ ನಡೆ ಬಗ್ಗೆ ಹೆಚ್ಚಾದ
ಕರ್ನಾಟಕ ಸಿಎಂ ಆಯ್ಕೆಯಾಗಿದೆ ಎಂದು ಸಾಕಷ್ಟು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಹತಾಶೆಯಿಂದ ಬಿಜೆಪಿ ಈ ಸುದ್ದಿಯನ್ನು ಹರಿಯಬಿಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಸಿರುವ ಸುರ್ಜೇವಾಲಾ ಇಂತಹ ಯಾವುದೇ ಸುದ್ದಿಯನ್ನು ಯಾರೂ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Karnataka CM Announcement : ಸಿದ್ದರಾಮಯ್ಯ ಮನೆ ಮುಂದೆ ಸಂಭ್ರಮ, ಡಿಕೆಶಿ ಮನೆ ಮುಂದೆ