Asianet Suvarna News Asianet Suvarna News

Karnataka CM Oath Ceremony: ಜೋಡೆತ್ತುಗಳ ಸರಕಾರಕ್ಕೆ ಕನ್ನಡದಲ್ಲಿ ಟ್ವೀಟ್ ಮಾಡಿ ಮೋದಿ ಶುಭಾಶಯ

ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಪ್ರಧಾನಿ ಮೋದಿ, ನಿರ್ಗಮಿತ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಶುಭಾಶಯ ಸಲ್ಲಿಸಿದ್ದಾರೆ. 

Karnataka CM Oath Ceremony  PM Narendra modi wishes karnataka siddaramaiah  government gow
Author
First Published May 20, 2023, 4:36 PM IST

ಬೆಂಗಳೂರು (ಮೇ 20): ಕರ್ನಾಟಕದ 16ನೇ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಿದ್ದು,  ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಪ್ರಧಾನಿ ಮೋದಿ, ನಿರ್ಗಮಿತ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಶುಭಾಶಯ ಸಲ್ಲಿಸಿದ್ದಾರೆ. 

ಕನ್ನಡದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸಿದ್ದರಾಮಯ್ಯ  ಜೀ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿಕೆ ಶಿವಕುಮಾರ್ ಜೀ ಅವರಿಗೆ ಅಭಿನಂದನೆಗಳು. ಫಲಪ್ರದ ಅಧಿಕಾರಾವಧಿಗಾಗಿ ನನ್ನ ಶುಭ ಹಾರೈಕೆಗಳು. ಎಂದು ಟ್ವೀಟ್ ಮಾಡಿದ್ದಾರೆ.

 

ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್  ಸರಕಾರಕ್ಕೆ ಶುಭವಾಗಲಿ. ನೂತನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು, ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರು ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ಹಾರ್ದಿಕ ಶುಭಾಶಯಗಳು. ರಾಜ್ಯದ ಜನತೆಗೆ ಅರ್ಪಣಾ ಮನೋಭಾವದಿಂದ ಅವರೆಲ್ಲರೂ ಸೇವೆ ಮಾಡಲಿ. ಕನ್ನಡನಾಡಿನ ಜನಹಿತಕ್ಕಾಗಿ ಕಾಂಗ್ರೆಸ್  ಸರಕಾರ ಕೈಗೊಳ್ಳುವ ಪ್ರತಿಯೊಂದು ಕ್ರಮಕ್ಕೂ ನಮ್ಮ ಜನತಾದಳ ಪಕ್ಷ ಪರಿಪೂರ್ಣ ಬೆಂಬಲ ನೀಡಲಿದೆ.  ಎಂದು ಟ್ವೀಟ್ ಮಾಡಿದ್ದಾರೆ.

 

ಸಿದ್ದಾಪುರ: ನೂತನ ಶಾಸಕ ಪೊನ್ನಣ್ಣ ಎದುರು ಸಾಲು ಸಾಲು ಸವಾಲು!

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಅವರ ಸಚಿವ ಸಂಪುಟ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ನಿರ್ಗಮಿತ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

OATH TAKING CEREMONY: ಸಿದ್ದು, ಡಿಕೆಶಿ ಬಳಿಕ 8 ಸಚಿವರ ಪ್ರಮಾಣ ವಚನ ಸ್ವೀಕಾರ

ಇನ್ನು ರಾಜ್ಯ ಬಿಜೆಪಿ ಕೂಡ ನೂತನ ಸರಕಾರಕ್ಕೆ ಶುಭಾಶಯ ಸಲ್ಲಿಸಿದೆ. ಜೊತೆಗೆ ತಮ್ಮ ಅವಧಿಯಲ್ಲಿ ಕರ್ನಾಟಕದಲ್ಲಿ ಶಾಂತಿ ನೆಲೆಸಲಿದೆ ಹಾಗೂ ಕನ್ನಡಿಗರು ಸುರಕ್ಷಿತರಾಗಿರುತ್ತಾರೆ ಎಂದು ನಾವು ಭಾವಿಸಿದ್ದೇವೆ. ಅದೇ ರೀತಿ, ಚುನಾವಣಾ ಪೂರ್ವದಲ್ಲಿ ತಾವು ರಾಜ್ಯದ ಜನತೆಗೆ ನೀಡಿದ್ದ ಐದು 'ಗ್ಯಾರಂಟಿಗಳ' ಆಶ್ವಾಸನೆಯನ್ನು, ರಾಜಸ್ಥಾನ, ಛತ್ತಿಸ್‌ಗಡ, ಹಿಮಾಚಲದಲ್ಲಿ ಕೈಕೊಟ್ಟ ಹಾಗೆ ಕೊಡದೆ, ತಕ್ಷಣವೇ ಅನುಷ್ಠಾನಗೊಳಿಸುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ಟ್ವೀಟ್ ಮಾಡಿದೆ.

Follow Us:
Download App:
  • android
  • ios