ಸಿದ್ದರಾಮಯ್ಯ ಸಿಎಂ; ಡಿಕೆಶಿ ಕ್ಷೇತ್ರ ರಾಮ​ನ​ಗರ, ಕನ​ಕ​ಪು​ರ​ದಲ್ಲಿ ಪೊಲೀಸ್‌ ಬಿಗಿ ಭದ್ರ​ತೆ!

ಕಾಂಗ್ರೆಸ್‌ ಪಕ್ಷ ಬಹು​ಮತ ಪಡೆ​ದಿ​ದ್ದರೂ ಮುಖ್ಯ​ಮಂತ್ರಿ ಆಯ್ಕೆ ಕಗ್ಗಂಟಾ​ಗಿತ್ತು. ಆದರೆ, ಇದೀಗ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಕರುನಾಡ ಮುಖ್ಯಮಂತ್ರಿಯಾಗ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ ಡಿಕೆಶಿ ಅಭಿಮಾನಗಳು ಪ್ರತಿಭಟನೆ ಹಾಗೂ ಗಲಾಟೆಗೆ ಮುಂದಾಗಬಹುದೆಂಬದು ಅವರ ಮನೆ ಮುಂದೆ ಬಿಗಿ ಭದ್ರತೆ ನೀಡಲಾಗಿದೆ. 

Karnataka CM  between DKS Siddu issue Police tight security in Ramanagara Kanakapura rav

ರಾಮ​ನ​ಗ​ರ (ಮೇ.18): ಹಗ್ಗ ಜಗ್ಗಾಟದ ನಡುವೆ, ಕರ್ನಾಟಕ ಮುಖ್ಯಮಂತ್ರಿಯ ಆಯ್ಕೆ ಮುಗಿದಿದ್ದು, ಸಿದ್ದರಾಮಯ್ಯ ಅಧಿಕಾರದ ಗದ್ದುಗೆ ಏರಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರದ ತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಬಹುದೆಂದು ಅವರ ಮನೆಯ ಮುಂದೆ ಭದ್ರತೆ ಹೆಚ್ಚಿಸಲಾಗಿದೆ. 

ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ(Siddaramaiah) ಅವ​ರನ್ನು ಮುಖ್ಯ​ಮಂತ್ರಿ ಹುದ್ದೆಗೆ ಆಯ್ಕೆ ಮಾಡ​ಲಾ​ಗಿದೆ ಎಂದು ಸುದ್ದಿ​ಗಳು ಹರಿ​ದಾ​ಡು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌(KPCC President DK Shivakumar) ತವರು ಜಿಲ್ಲೆ​ಯಲ್ಲಿ ಅವರ ಅಭಿ​ಮಾ​ನಿ​ಗಳು ಗಲಾಟೆ ಮಾಡುವ ಸಾಧ್ಯ​ತೆ​ಗ​ಳಿ​ರುವ ಕಾರ​ಣಕ್ಕೆ ಪ್ರಮುಖ ವೃತ್ತ​ಗ​ಳಲ್ಲಿ ಪೊಲೀ​ಸರು ಬಂದೋ​ಬ​ಸ್ತಿನ ಕಾರ್ಯದಲ್ಲಿ ತೊಡ​ಗಿ​ದ್ದಾರೆ. ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಮುಖ್ಯ​ಮಂತ್ರಿ ಸ್ಥಾನ ಕೈತ​ಪ್ಪಿ​ದರೆ ಅಭಿ​ಮಾ​ನಿ​ಗಳು ಬೀದಿ​ಗಿ​ಳಿದು ಪ್ರತಿ​ಭ​ಟಿ​ಸು​ತ್ತಾರೆ. ಯಾವುದೇ ಅಹಿ​ತ​ಕರ ಘಟ​ನೆ​ಗಳು ನಡೆ​ಯ​ದಂತೆ ಮುಂಜಾ​ಗ್ರತಾ ಕ್ರಮ​ಗ​ಳನ್ನು ಪೊಲೀ​ಸರು ಕೈಗೊಂಡಿ​ದ್ದಾರೆ.

 

Karnataka CM: ಡಿಕೆಶಿ ಮಣಿಯುತ್ತಿಲ್ಲ, ಸಿದ್ದು ಬಿಡುತ್ತಿಲ್ಲ, ಕಾಂಗ್ರೆಸ್‌ ಸಿಎಂ ಕಗ್ಗಂಟು 4ನೇ ದಿನಕ್ಕೆ!

ಹೈಅಲರ್ಚ್‌ ಆಗಿರುವಂತೆ ಪೊಲೀಸರಿಗೆ ಹಿರಿಯ ಅ​ಧಿಕಾರಿಗಳು ಸೂಚನೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಕೈತಪ್ಪುವು​ದ​ರಿಂದ ಅವರ ಅಭಿಮಾನಿಗಳು ಗಲಾಟೆ ಮಾಡುವ ಸಾಧ್ಯತೆಗಳು ಇವೆ. ಇದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ​ಕಾರಿಗೆ ಸಂದೇಶ ರವಾನಿಸಲಾಗಿದೆ. ರಾಮನಗರದ ಐಜೂರು ವೃತ್ತದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ, ಒಬ್ಬರು ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕನ​ಕ​ಪು​ರ​ದಲ್ಲೂ ಬಂದೋ​ಬಸ್‌್ತ:

ಸಿದ್ದರಾಮಯ್ಯ ಸಿಎಂ ಆಗುತ್ತಾರೆಂಬ ಊಹಾಪೋಹ ಸುದ್ದಿ ನಡುವೆ ಕನಕಪುರದಲ್ಲಿ ಪೊಲೀಸರು ಅಲರ್ಚ್‌ ಆಗಿ​ದ್ದಾರೆ. ಕನಕಪುರದಲ್ಲಿ ಮಧ್ಯಾಹ್ನ ಮುಖ್ಯರಸ್ತೆ ಸೇರಿದಂತೆ ಚೆನ್ನಬಸಪ್ಪ ವೃತ್ತದಲ್ಲಿ ಬಿಕೋ ಎನ್ನುವ ವಾತಾವರಣ ಕಂಡುಬಂದಿತು. ಜೆತೆಗೆ ನಗರದ ಮೈಸೂರು ರಸ್ತೆಯಲ್ಲಿನ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಮನೆಯ ಮುಂದೆಯೂ ಬಿಕೋ ಎನ್ನುವ ವಾತಾವರಣ ಇತ್ತು. ಈ ನಡುವೆ ನಗರದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ಪರ ವಿರೋಧದ ಘೋಷಣೆಯಾಗಲಿ ಸಂಭ್ರಮಾಚರಣೆಯಾಗಲಿ ಇರಲಿಲ್ಲ. ಪೊಲೀಸ್‌ ಇಲಾಖೆ ಮಾತ್ರ ನಗರದ ಮುಖ್ಯ ಸ್ಥಳಗಳಲ್ಲಿ ರಿಸವ್‌ರ್‍ವ್ಯಾನ್‌ಗಳನ್ನು ಹಾಕುವ ಮೂಲಕ ಸೂಕ್ತ ಭದ್ರತೆ ಏರ್ಪ​ಡಿ​ಸಿ​ದೆ.

 

ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಸೀಕ್ರೆಟ್‌ ಬಾಕ್ಸ್‌ ಮತ್ತು 4 ಸೂತ್ರಗಳು!

17ಕೆಆರ್‌ ಎಂಎನ್‌ 3,4.ಜೆ​ಪಿಜಿ

3.ರಾಮ​ನ​ಗ​ರದ ಐಜೂರು ವೃತ್ತ​ದಲ್ಲಿ ಪೊಲೀ​ಸರು ಬಂದೋ​ಬಸ್‌್ತನಲ್ಲಿ ತೊಡ​ಗಿ​ರು​ವುದು.

4.ಕನ​ಕ​ಪು​ರ​ದಲ್ಲಿ ಪೊಲೀಸ್‌ ಭದ್ರತೆ ಮಾಡಿ​ರು​ವುದು.

Latest Videos
Follow Us:
Download App:
  • android
  • ios