Asianet Suvarna News Asianet Suvarna News

Karnataka Appointment: ಬಲಿಷ್ಠ ಆಪ್ತರ ಪಡೆ ಕಟ್ಟಿಕೊಂಡ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಹಾಯಕ್ಕೆ ವಿವಿಧ ಖಾಲಿ ಸ್ಥಾನಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Karnataka Chief Minister Siddaramaiah has appointed heads of many government departments sat
Author
First Published May 22, 2023, 8:18 PM IST

ಬೆಂಗಳೂರು (ಮೇ 22): ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಪ್ರಮುಖ ಇಲಾಖೆಗಳ ಮುಖ್ಯಸ್ಥರನ್ನು ಬದಲಾಯಿಸಿ ತಮ್ಮ ಆಪ್ತ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಆಡಳಿತಕ್ಕೆ ಬೇಕಾದ ಅಧಿಕಾರಿಗಳ ಸುಸಜ್ಜಿತ ಪಡೆಯನ್ನು ರಚನೆ ಮಾಡಿಕೊಂಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಕ್ಕೆ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಪ್ರಮುಖ ಹುದ್ದೆಗಳಲ್ಲಿದ್ದ ಅಧಿಕಾರಿಗಳನ್ನು ವಜಾಗೊಳಿಸಿ ಆ ಸ್ಥಾನಗಳಿಗೆ ತಮ್ಮ ಆಪ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ವಿವಿಧ ಸರ್ಕಾರಿ ಇಲಾಖೆಗಳ ಮುಖ್ಯಸ್ಥರ ಹುದ್ದೆಗಳಿಗೆ ತಮಗೆ ಬೇಕಾಗಿದ್ದ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಂಡಿದ್ದರು. ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿದ್ದ ಬಹುತೇಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯದ ನಿಗಮ- ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರ ನೇಮಕ ರದ್ದು: 10 ತಿಂಗಳಿಗೆ ಅಧಿಕಾರ ಮುಕ್ತಾಯ

  • ಮುಖ್ಯಮಂತ್ರಿಗಳ ಆಪ್ತರ ಪಡೆ ಹೀಗಿದೆ ನೋಡಿ..
  • ಶಶಿಕಿರಣ್ ಶೆಟ್ಟಿ - ನೂತನ ಅಡ್ವೋಕೆಟ್ ಜನರಲ್ ಆಗಿ ನೇಮಕ ಆಗಿದ್ದಾರೆ.
  • ಡಾ. ವೆಂಕಟೇಶಯ್ಯ ಸಿಎಂ ಸಿದ್ದರಾಮಯ್ಯನವರ ಅಪ್ತ ಕಾರ್ಯದರ್ಶಿಯಾಗಿ ನೇಮಕ
  • ಎಂ.ವೆಂಕಟೇಶ್ ಸಿಎಂ ಸಿದ್ದರಾಮಯ್ಯನವರ ವಿಶೇಷಾಧಿಕಾರಿಯಾಗಿ ಗುತ್ತಿಗೆ ಅಧಾರದಲ್ಲಿ ನೇಮಕ
  • ಕೆ ವಿ ಪ್ರಭಾಕರ್ - ಮುಖ್ಯಮಂತ್ರಿ ಗಳ ಮಾಧ್ಯಮ ಸಲಹೆಗಾರರಾಗಿ ನೇಮಕ. ಇವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.
  • ಬಿ ಶಿವಸ್ವಾಮಿ - ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
  • ಡಾ.ಕೆ ವೈಷ್ಣವಿ - ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ
  • ಕೆ ಎನ್ ವಿಜಯ - ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ
  • ಪಿ ಎ ಗೋಪಾಲ - ಮುಖ್ಯಮಂತ್ರಿ ಪರಿಹಾರ ನಿಧಿ ಜಂಟಿ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದಾರೆ.

ನೂತನ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ:
ಎಂಬಿ ಪಾಟೀಲ್ - ವಿಧಾನಸೌಧದ 344,344 A ಕೊಠಡಿಗಳು.
ಜಮೀರ್ ಅಹಮದ್ ಖಾನ್ - ವಿಕಾಸಸೌಧ 143,146 ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಕೆ‌.ಜೆ ಚಾರ್ಜ್ - ವಿಧಾನಸೌಧ 317,317A ಕೊಠಡಿಗಳನ್ನು ಕೊಡಲಾಗಿದೆ. 

ದೊಡ್ಡ ಡೀಲಿಂಗ್‌ಮಾಸ್ಟರ್ ಎಂದ ಟ್ರೋಲರ್ಸ್‌ಗೆ ಚಳಿ ಬಿಡಿಸಿದ ಸಂಸದೆ ಸುಮಲತಾ ಅಂಬರೀಶ್‌

ಡಿಕೆಶಿ ನನ್ನ ದೈವವೆಂದು ಶಾಸಕ ಪ್ರಮಾಣವಚನ:  ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕನಾಗಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ.  ರಾಜ್ಯದಲ್ಲಿ ಮೇ 24ರಿಂದ ಸರ್ಕಾರ ಕಾರ್ಯಾರಂಭ ಮಾಡಬೇಕಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ 3 ದಿನ ವಿಧಾನಸಭಾ ಅಧಿವೇಶನ ಆರಂಭ ಮಾಡಲಾಗಿದೆ. ಆದರೆ, ಈ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗ ಅವರು ನನ್ನ ಆರಾಧ್ಯ ದೈವ ಡಿ ಕೆ‌ ಶಿವಕುಮಾರ್ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆಂದು ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಚ್ಚೆತ್ತ ಹಂಗಾಮಿ ಸ್ಪೀಕರ್‌ ಆರ್.ವಿ. ದೇಶಪಾಂಡೆ ಅವರು ವ್ಯಕ್ತಿಗತ ಹೆಸರಿನಲ್ಲಿ ಪ್ರಮಾಣವಚನ  ತೆಗೆದುಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಶಾಸಕ ಬಸವರಾಜ್‌ ಅವರಿಗೆ ದೇವರ ಹೆಸರಲ್ಲಿ ಪ್ರತಿಜ್ಞೆ ಸ್ವೀಕರಿಸುವಂತೆ ತಾಕೀತು ಮಾಡಿದ್ದಾರೆ.

Follow Us:
Download App:
  • android
  • ios