- ಇಲಾಖಾವಾರು ಪ್ರಗತಿ ಬಗ್ಗೆ ಸಿಎಂ ಪರಿಶೀಲನೆ- ನಾಡಿದ್ದಿಂದ 2 ದಿನ ಡೀಸಿ, ಸಿಇಒ ಜತೆ- ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ

ಬೆಂಗಳೂರು (ಮೇ. 6): ಇಲಾಖಾವಾರು ಪ್ರಗತಿ ಪರಿಶೀಲನಾ (department wise development ) ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief minister Basavaraj bommai) ಅವರು ಆಡಳಿತ ಯಂತ್ರಕ್ಕೆ ಮತ್ತಷ್ಟುಚುರುಕು ಮುಟ್ಟಿಸಲು ಈ ತಿಂಗಳ 8 ಮತ್ತು 9ರಂದು ಎರಡು ದಿನಗಳ ಕಾಲ ಜಿಲ್ಲಾಧಿಕಾರಿಗಳ (district collector) ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ (Zilla Panchayat CEO) ಸಭೆ ಕರೆದಿದ್ದಾರೆ.

ಬಜೆಟ್‌ನಲ್ಲಿ(State Budget) ಮಾಡಿರುವ ಘೋಷಣೆಗಳ ಅನುಷ್ಠಾನಕ್ಕೆ ವೇಗ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ದಿನವಾದ ಗುರುವಾರವೂ ಇಲಾಖಾವಾರು ಪರಿಶೀಲನಾ ಸಭೆಯನ್ನು ಮುಂದುವರಿಸಿದ್ದು, ಮೇಲ್ಕಂಡ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಹಕಾರ ಇಲಾಖೆಯ ಜತೆ ಪರಿಶೀಲನೆ ಸಭೆ ನಡೆಸಿದರು. ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಇದ್ದರೂ ಅಚ್ಚುಕಟ್ಟಾದ ಮತ್ತು ವ್ಯವಸ್ಥಿತ ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಪೂರ್ಣಪ್ರಮಾಣದ ಮತ್ತು ಸುಸಜ್ಜಿತ ಕೊಠಡಿಗಳ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರು. ಒದಗಿಸಲಾಗುವುದು. ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನಂತರ ಎಸ್‌ಜಿಪಿಗೆ 2ನೇ ಆದ್ಯತೆ ಮತ್ತು ನಾನ್‌ ಎಸ್‌ಜಿಪಿಗಳಿಗೆ 3ನೇ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಶಾಲೆಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ಕಲಿಸಲು ಶಿಕ್ಷಕರ ಸೇವೆಯನ್ನು ಸಿಎಸ್‌ಆರ್‌ ಸಹಯೋಗದಲ್ಲಿ ಪಡೆಯಬಹುದು. ಅಂತೆಯೇ ಅರೆಕಾಲಿಕ ಶಿಕ್ಷಕರು, ಲ್ಯಾಬ್‌ ಸಿಬ್ಬಂದಿ ಮತ್ತು ಸಾರಿಗೆ ವ್ಯವಸ್ಥೆಯನ್ನು ಸಿಎಸ್‌ಆರ್‌ ಸಹಯೋಗದಲ್ಲಿ ಮಾಡಬಹುದಾಗಿದೆ. ನಿರ್ಮಾಣವಾಗುವ ಶಾಲಾ ಕಟ್ಟಡಗಳು ಏಕರೂಪದ ಮಾದರಿ ಮತ್ತು ಬಣ್ಣವನ್ನು ಹೊಂದಿರುವುದು ಹಾಗೂ ಈ ಕಟ್ಟಡಗಳಿಗೆ ಹೆಸರನ್ನು ನಮೂದಿಸಬೇಕು. 20 ಸಾವಿರ ಅಂಗನವಾಡಿಗಳಲ್ಲಿ ನೂತನ ಪಠ್ಯಕ್ರಮ ಜಾರಿಗೊಳಿಸುವ ಕಾರ್ಯಕ್ರಮವನ್ನು ಜುಲೈ ಮೊದಲನೇ ವಾರದಿಂದ ಪ್ರಾರಂಭಿಸಬೇಕು. ಒಂದು ಸಾವಿರ ಗ್ರಾಮಪಂಚಾಯಿತಿಗಳನ್ನು ಸಾಕ್ಷರವನ್ನಾಗಿಸುವ ಕಾರ್ಯಕ್ರಮದಡಿ ಡಿಜಿಟಲ್‌ ಶಿಕ್ಷಣ, ಬ್ಯಾಂಕ್‌ ವಹಿವಾಟು, ಬರವಣಿಗೆ ಇತ್ಯಾದಿ ದೈನಂದಿನ ಅವಶ್ಯಕತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗಳಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸಂಬಂಧಿಸಿದಂತೆ ಎನ್‌ಐಟಿ, ಐಐಟಿಗಳ ನಿವೃತ್ತ ನಿರ್ದೇಶಕರು, ಶಿಕ್ಷಣ ತಜ್ಞರು ಒಳಗೊಂಡಿರುವ ಸಮಿತಿಯನ್ನು ಇನ್ನೆರಡು ದಿನದೊಳಗೆ ರಚಿಸಬೇಕು. ರಾಜ್ಯದ ಆಯ್ದ 14 ಎಂಜಿನಿಯರಿಂಗ್‌ ಕಾಲೇಜುಗಳನ್ನು ಕರ್ನಾಟಕ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮೇಲ್ದರ್ಜೆಗೇರಿಸುವ ಯೋಜನೆ ಪ್ರಮುಖವಾಗಿದೆ. ಈಗಾಗಲೇ ಉತ್ತಮ ರೀತಿಯಲ್ಲಿ ಸ್ಥಾಪಿತವಾಗಿರುವ ಮತ್ತು ಮೂಲಸೌಲಭ್ಯ, ಶಿಕ್ಷಕ ವರ್ಗ, ಹಾಸ್ಟೆಲ್‌ ವ್ಯವಸ್ಥೆ ಇರುವಂತಹ ಕಾಲೇಜುಗಳನ್ನು ಕೆಐಟಿಕೆಗೆ ಮೇಲ್ದರ್ಜೆಗೇರಿಸಲು ಆಯ್ದುಕೊಳ್ಳಬೇಕು. ಐಟಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪ್ರಮುಖ ಐಟಿ ಕಂಪನಿಗಳು, ಕೈಗಾರಿಕೋದ್ಯಮಿಗಳ ಪ್ರಮುಖರ ಸೇವೆಯನ್ನು ಪಡೆಯಬಹುದು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

Karnataka Cabinet Expansion: ಡಿಸಿಎಂ ಹುದ್ದೆ ಸೃಷ್ಟಿಗೆ ಬಿಜೆಪಿ ಹೈಕಮಾಂಡ್‌ ಚಿಂತನೆ ಇಲ್ಲ?

ಕಲ್ಯಾಣ ಕರ್ನಾಟಕದ ಕಲಬುರಗಿ, ಕಿತ್ತೂರು ಕರ್ನಾಟಕ ವಿಭಾಗದಲ್ಲಿ ಹಾವೇರಿ ಮತ್ತು ಉತ್ತರ ಕನ್ನಡ ಎಂಜಿನಿಯರಿಂಗ್‌ ಕಾಲೇಜು, ಮೈಸೂರು ವಿಭಾಗದಲ್ಲಿ ಕೆ.ಆರ್‌.ಪೇಟೆ ಮತ್ತು ಕೊಡಗು, ಬೆಂಗಳೂರು ವಿಭಾಗದಲ್ಲಿ ಎಸ್‌ಕೆಎಸ್‌ಜೆಟಿಐ ಮತ್ತು ರಾಮನಗರದ ಎಂಜಿನಿಯರಿಂಗ್‌ ಕಾಲೇಜನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮುಂದಿನ ವರ್ಷದೊಳಗೆ ಎನ್‌ಐಟಿ ಮಟ್ಟಕ್ಕೆ ಅಭಿವೃದ್ಧಿಯಾಗಬೇಕು.

Karnataka Tourism: ಟೂರಿಸಂಗೆ ಹೊಸ ದಿಶೆ ನೀಡಲು ಬೊಮ್ಮಾಯಿ ಪಣ

ಕಾಲೇಜುಗಳಲ್ಲಿ ವಿಷಯವಾರು ಕಲಿಕಾ ಉತ್ಕೃಷ್ಟಕೇಂದ್ರಗಳನ್ನಾಗಿ ಪರಿವರ್ತಿಸಲು ಪ್ರಾಶಸ್ತ್ಯ ನೀಡಬೇಕು. ಕೆಐಟಿಗಳ ನಿರ್ಮಾಣಕ್ಕೆ ವೈಜ್ಞಾನಿಕ ಚಿಂತನೆ ಅಗತ್ಯ. ಆರ್‌ ಎಂಡ್‌ ಡಿ ಮತ್ತು ಉದ್ಯೋಗಾವಕಾಶಗಳಿಗೆ ಪ್ರಾಮುಖ್ಯತೆ ನೀಡಬೇಕು. ಕೆಐಟಿಗಳಿಗಾಗಿ ಎಂಜಿನಿಯರಿಂಗ್‌ ಕಾಲೇಜುಗಳ ಆಯ್ಕೆ, ಲೋಗೋ, ಬ್ರ್ಯಾಂಡಿಂಗ್‌ ಉತ್ತಮ ರೀತಿಯಲ್ಲಿ ಆಗಬೇಕು ಎಂದು ಸೂಚಿಸಿದರು.

1. ಬಸವಕಲ್ಯಾಣದಲ್ಲಿ 532 ಕೋಟಿ ರು. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸುವ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಮೂರು ವರ್ಷದೊಳಗೆ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಬೇಕು.

2.ಪ್ರಾಥಮಿಕ ಶಿಕ್ಷಣ ಇಲಾಖೆಯ ಶಾಲೆಯಲ್ಲಿ 6,500ಕ್ಕೂ ಹೆಚ್ಚು ಕೊಠಡಿಗಳ ನಿರ್ಮಾಣ ಕಾರ್ಯವನ್ನು ಒಂದು ಸಾವಿರ ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಬೇಕು.

3. ಐಐಟಿ ಮಾದರಿಯಲ್ಲಿ ರಾಜ್ಯದ ಆರು ಎಂಜಿನಿಯರಿಂಗ್‌ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಟಾಸ್ಕ್ ಫೋರ್ಸ್ ಇನ್ನೆರಡು ದಿನದಲ್ಲಿ ರಚನೆ ಮಾಡಬೇಕು.