ವಿಜಯಪುರ: ಜಿಲ್ಲೆಗೆ ಸಚಿವಗಿರಿಯ ಡಬಲ್‌ ಧಮಾಕಾ, ಇಂಡಿಗೆ ಮತ್ತೆ ಅನ್ಯಾಯ!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆಯುವ ಮೂಲಕ ಬರದ ನಾಡು ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನದಲ್ಲಿ ಡಬಲ್‌ ಧಮಾಕಾ ಸಿಕ್ಕಿದೆ. ಇದರಿಂದ ಬರದ ನಾಡಿನಲ್ಲಿ ಸಚಿವ ಸ್ಥಾನದ ಬರ ನೀಗಿದಂತಾಗಿದೆ.

Karnataka cabinet two ministers seats for Vijayapur and Again injustice to Indi constituency rav

ರುದ್ರಪ್ಪ ಆಸಂಗಿ

ವಿಜಯಪುರ (ಮೇ.27) : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆಯುವ ಮೂಲಕ ಬರದ ನಾಡು ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನದಲ್ಲಿ ಡಬಲ್‌ ಧಮಾಕಾ ಸಿಕ್ಕಿದೆ. ಇದರಿಂದ ಬರದ ನಾಡಿನಲ್ಲಿ ಸಚಿವ ಸ್ಥಾನದ ಬರ ನೀಗಿದಂತಾಗಿದೆ.

ಬಬಲೇಶ್ವರದ ಶಾಸಕ ಎಂ.ಬಿ.ಪಾಟೀಲ(MB Patil) ಅವರಿಗೆ ಮಹತ್ವದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಸ್ಥಾನ ದೊರೆತರೆ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ(Shivananda patil) ಅವರಿಗೆ ಸಕ್ಕರೆ ಮತ್ತು ಜವಳಿ ಖಾತೆ ಲಭಿಸಿದೆ.

Karnataka cabinet: ಬಸವನಾಡಿನ ಶಾಸಕ ಪಾಟೀಲಗೆ ಎರಡನೇ ಬಾರಿಗೆ ಒಲಿದ ಸಚಿವ ಸ್ಥಾನ

ವಿಜಯಪುರ ಜಿಲ್ಲೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ 8 ಮತಕ್ಷೇತ್ರಗಳ ಪೈಕಿ 4 ಮತಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಹಿಂದು ಫೈರ್‌ ಬ್ರಾಂಡ್‌ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagowda patil yatnal) ಅವರೂ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿದ್ದರು. ಯತ್ನಾಳ ಅವರು ಕೇಂದ್ರ ಸಚಿವರಾಗಿದ್ದರು. ರಾಜ್ಯದಲ್ಲಿ ಸಚಿವ ಸ್ಥಾನ ಪಡೆಯಲು ಎಲ್ಲ ಅರ್ಹತೆ ಹೊಂದಿದ್ದರು. ಆದರೆ, ಅಧಿಕಾರಾವಧಿ ಮುಗಿಯುವ ತನಕವೂ ವಿಜಯಪುರ ಜಿಲ್ಲೆಗೆ ಒಂದೂ ಸಚಿವ ಸ್ಥಾನ ದೊರೆಯಲಿಲ್ಲ. ವಿಜಯಪುರ ಜಿಲ್ಲೆಯು ಬರದ ನಾಡು. ಜಿಲ್ಲೆಯಲ್ಲಿ ಮಳೆಯಷ್ಟೇ ಅಲ್ಲ. ಸಚಿವರ ಬರವನ್ನು ಎದುರಿಸಿ ಅಭಿವೃದ್ಧಿ ಕುಂಠಿತಗೊಂಡು ಜಿಲ್ಲೆಯ ಜನರು ನಲುಗಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಅವರು ಸಚಿವ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಸಚಿವ ಸ್ಥಾನದ ಬರ ತಕ್ಕ ಮಟ್ಟಿಗಾದರೂ ನಿವಾರಣೆಯಾಗಿದೆ.

ಹಲವರಿಗೆ ನಿರಾಸೆ:

ಜಿಲ್ಲೆಯಲ್ಲಿ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್‌ 8ರಲ್ಲಿ ಆರು ಸ್ಥಾನಗಳನ್ನು ಬಾಚಿಕೊಂಡಿದೆ. ಜಿಲ್ಲೆಗೆ ಇನ್ನೂ ಒಂದು ಸಚಿವ ಸ್ಥಾನದ ಅವಶ್ಯಕತೆ ಇತ್ತು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್‌. ನಾಡಗೌಡ ಅಪ್ಪಾಜಿ, ನಾಗಠಾಣ ಮೀಸಲು ಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಅವರೂ ಸಚಿವ ಸ್ಥಾನ ಪಡೆಯುವಲ್ಲಿ ಅಹÜರ್‍ರು. ಅವರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ, ಅವರಿಗೆ ಅದೃಷ್ಟಕೈ ಹಿಡಿಯಲಿಲ್ಲ. ಸದ್ಯಕ್ಕೆ ಜಿಲ್ಲೆಗೆ ಇಬ್ಬರು ಸಚಿವರು ದೊರಕಿರುವುದರಿಂದ ಡಬಲ್‌ ಧಮಾಕ್‌ ದೊರೆತಂತಾಗಿದೆ.

 

ಲಾಬಿ ಮಾಡದೇ ಒಲಿದ ಸಚಿವ ಸ್ಥಾನ:

ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ಸಚಿವ ಸ್ಥಾನಕ್ಕೆ ಲಾಬಿ ಮಾಡಿದವರಲ್ಲ. ಕಳೆದ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವಿದ್ದಾಗ ಶಾಸಕ ಶಿವಾನಂದ ಪಾಟೀಲ ಅವರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ದೆಹಲಿಗೆ ಹೋಗಿರಲಿಲ್ಲ. ಈ ಬಾರಿಯೂ ಶಿವಾನಂದ ಅವರು ದೆಹಲಿಗೆ ಹೋಗಿ ಸಚಿವ ಸ್ಥಾನದ ಲಾಬಿ ಮಾಡದೇ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಾಣಾಕ್ಷ ರಾಜಕಾರಣಿ ಹಣೆಪಟ್ಟಿಹಾಗೂ ಸಹಕಾರ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಶಿವಾನಂದ ಪಾಟೀಲ ಅವರ ಕತೃತ್ವ ಶಕ್ತಿಯನ್ನು ಪಕ್ಷದ ವರಿಷ್ಠರು ಗುರುತಿಸಿ, ಅವರಿಗೆ ಸಚಿವ ಸ್ಥಾನ ನೀಡಿರುವುದು ವಿಶೇಷವಾಗಿದೆ.

1947ರಿಂದಲೂ ಇಂಡಿ ಕ್ಷೇತ್ರಕ್ಕೆ ಮಂತ್ರಿಗಿರಿ ಇಲ್ಲ

ಇಂಡಿ: ಸ್ವಾತಂತ್ರ್ಯ ಬಂದಾಗಿನಿಂದಲೂ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರಕ್ಕೆ ಒಮ್ಮೆಯೂ ಸಚಿವ ಸ್ಥಾನ ದೊರೆತಿಲ್ಲ.

ಡಿಕೆಸು Vs ಎಂಬಿಪಾ: ಕೈ ಕೋಟೆಯ ಜಂಗೀಕುಸ್ತಿ ಹಿಂದಿನ ಅಸಲಿ ರಹಸ್ಯ ಏನ್ ಗೊತ್ತಾ..?

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ಬಬಲೇಶ್ವರ, ಸಿಂದಗಿ ಕ್ಷೇತ್ರಗಳಿಗೆ ಸಚಿವ ಸಂಪುಟದಲ್ಲಿ ಹಲವು ಬಾರಿ ಸಚಿವ ಸ್ಥಾನ ದಕ್ಕಿದೆ. ಆದರೆ, ಇಂಡಿಗೆ ಸಚಿವ ಸ್ಥಾನ ಲಭಿಸಿಲ್ಲ. 1947ರಲ್ಲಿ ಬಳ್ಳೊಳ್ಳಿ ಮತಕ್ಷೇತ್ರದ ಭಾಗವಾಗಿದ್ದ ಇಲ್ಲಿನ ಜನಪ್ರತಿನಿಧಿ ಎನ್‌.ಎನ್‌.ಕಾಳೆ, ನಂತರ 1952ರಲ್ಲಿ ಇಂಡಿ ಶಾಸಕರಾಗಿದ್ದ ಮಗನಲಾಲ ಶಹಾ, 1957ರಲ್ಲಿ ಶಾಸಕರಾಗಿದ್ದ ಮಲ್ಲಪ್ಪ ಸುರಪೂರ, 1962ರಲ್ಲಿ ಶಾಸಕರಾಗಿದ್ದ ಗವಿಸಿದ್ದಪ್ಪಗೌಡ ಪಾಟೀಲ, 1967 ಹಾಗೂ 1972ರಲ್ಲಿ ಮತ್ತೆ ಶಾಸಕರಾಗಿದ್ದ ಮಲ್ಲಪ್ಪ ಸುರಪೂರ, 1978, 1983ರಲ್ಲಿ ಶಾಸಕರಾಗಿದ್ದ ಆರ್‌.ಆರ್‌.ಕಲ್ಲೂರ, 1985ರಲ್ಲಿ ಶಾಸಕರಾಗಿದ್ದ ಎನ್‌.ಎಸ್‌.ಖೇಡ, 1989ರಲ್ಲಿ ಮತ್ತೆ ಶಾಸಕರಾದ ಆರ್‌.ಆರ್‌.ಕಲ್ಲೂರ, 1994ರಿಂದ 2004ರವರೆಗೆ ಸತತ ಮೂರು ಬಾರಿ ಪಕ್ಷೇತರ ಶಾಸಕರಾಗಿದ್ದ ರವಿಕಾಂತ ಪಾಟೀಲ ಹಾಗೂ ಈ ಬಾರಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿರುವ ಯಶವಂತರಾಯಗೌಡ ಪಾಟೀಲ ಇವರಾರ‍ಯರಿಗೂ ಸಚಿವ ಸ್ಥಾನವೇ ದೊರೆತಿಲ್ಲ.

Latest Videos
Follow Us:
Download App:
  • android
  • ios