ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಅಂತ್ಯಗೊಂಡು ಇಂದು 24 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಆಯೋಜಿಸಿದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹೆಚ್‌ಕೆ ಪಾಟೀಲ್ ಸೇರಿದಂತೆ 24 ಸಚಿವರು ಸಿದ್ದರಾಮಯ್ಯ ಸಂಪುಟ ಸೇರಿಕೊಂಡರು.  

ಬೆಂಗಳೂರು(ಮೇ.27): ಕರ್ನಾಟಕದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆಪ್ತರಿಗಾಗಿ ಜಟಾಪಟಿ, ಸಚಿವ ಸ್ಥಾನಕ್ಕಾಗಿ ಲಾಬಿ ನಡುವೆ ಸತತ ಸಭೆ ನಡೆಸಿ 24 ನಾಯಕರಿಗೆ ಮಂತ್ರಿಗಿರಿ ನೀಡಲಾಗಿದೆ. ಇಂದು ರಾಜಭವನದಲ್ಲಿ ಆಯೋಜಿಸಿದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. 24 ಸಚಿವರ ಪೈಕಿ ಹೆಚ್‌ಕೆ ಪಾಟೀಲ್ ಮೊದಲನೇಯವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹೆಚ್‌ಕೆ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬ್ಯಾಟರಾಯನಪುರದಿಂದ 2ನೇ ಬಾರಿ ಆರಿಸಿ ಬಂದ ಕೃಷ್ಣೇಬೈರೇಗೌಡ ನೂತನ ಸರ್ಕಾರದ ಮಂತ್ರಿಯಾಗಿ ಪ್ರತಿಜ್ಞಾವವಿಧಿ ಸ್ವೀಕರಿಸಿದರು. ಸಂಪುಟ ದರ್ಜೆ ಸಚಿವರಾಗಿ ಚೆಲುವರಾಯಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪಿರಿಯಾಪಟ್ಟಣದಿಂದ 6 ಬಾರಿ ಶಾಸಕನಾಗಿರುವ ಕೆ ವೆಂಕಟೇಶ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಟಿ ನರಸೀಪುರದಿಂದ 6 ಬಾರಿ ಗೆದ್ದು ಶಾಸಕನಾಗಿರುವ ಹೆಚ್‌ಸಿ ಮಹೇದೇವಪ್ಪ ಪ್ರಮಾಣವಚನ ಸ್ವೀಕರಿಸಿದರು.

ಶಾಸಕರು, ಪರಿಷತ್ ಸದಸ್ಯರು ಅಲ್ಲದ ಬೋಸರಾಜು ಪ್ರಮಾಣವಚನ, ರಾಜೀನಾಮೆಗೆ ಸಜ್ಜಾದ ಕೆಲ ಕಾಂಗ್ರೆಸ್ ನಾಯಕರು

ಭಾಲ್ಕಿ ವಿಧಾನಭಾ ಕ್ಷೇತ್ರದಿಂದ 5 ಬಾರಿ ಶಾಸಕನಾಗಿರುವ ಈಶ್ವರ್ ಖಂಡ್ರೆ ದೇವರ ಹೆಸರನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮಧುಗಿರಿ ಶಾಸಕ ಕೆಎನ್ ರಾಜಣ್ಣ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. 

ನೂತನ 24 ಸಚಿವರ ಪಟ್ಟಿ
1- ಈಶ್ವರ್‌ ಖಂಡ್ರೆ
2- ಲಕ್ಷ್ಮೇ ಹೆಬ್ಬಾಳ್ಕರ್‌
3- ಶಿವಾನಂದ ಪಾಟೀಲ…
4- ಬಿ.ಎಸ್‌.(ಬೈರತಿ) ಸುರೇಶ್‌
5- ಡಾ.ಎಚ್‌.ಸಿ.ಮಹಾದೇವಪ್ಪ
6- ಪಿರಿಯಾಪಟ್ಟಣ ಕೆ.ವೆಂಕಟೇಶ್‌
7- ಎಸ್‌.ಎಸ್‌.ಮಲ್ಲಿಕಾರ್ಜುನ
8- ದಿನೇಶ್‌ ಗುಂಡೂರಾವ್‌
9- ಕೃಷ್ಣ ಬೈರೇಗೌಡ
10- ರಹೀಂ ಖಾನ್‌
11- ಡಿ.ಸುಧಾಕರ್‌
12- ಡಾ.ಎಂ.ಸಿ.ಸುಧಾಕರ್‌
13- ಎಚ್‌.ಕೆ.ಪಾಟೀಲ…
14- ಚೆಲುವರಾಯಸ್ವಾಮಿ
15- ಕೆ.ಎನ್‌.ರಾಜಣ್ಣ
16- ಸಂತೋಷ್‌ ಲಾಡ್‌
17- ಮಧು ಬಂಗಾರಪ್ಪ
18- ಮಂಕಾಳ ಸುಬ್ಬಾ ವೈದ್ಯ
19- ಶಿವರಾಜ ತಂಗಡಗಿ
20- ಆರ್‌.ಬಿ.ತಿಮ್ಮಾಪುರ
21- ಶರಣಬಸಪ್ಪ ದರ್ಶನಾಪುರ
22- ಶರಣ ಪ್ರಕಾಶ್‌ ಪಾಟೀಲ್‌
23- ಎನ್‌.ಎಸ್‌.ಬೋಸರಾಜು
24- ಬಿ.ನಾಗೇಂದ್ರ

ಮುಂದಿನ ದಿನದಲ್ಲಿ ಕಾದು ನೋಡಿ, ಕಾಂಗ್ರೆಸ್‌ಗೆ ಸಚಿವ ಸ್ಥಾನ ಸಿಗದ ಸಲೀಂ ಅಹಮ್ಮದ್ ವಾರ್ನಿಂಗ್!