ರಾಯಚೂರು(ಮಾ.  29) ಬೆಳಗಾವಿ ಹಾಗೂ ಬಸವಕಲ್ಯಾಣದಲ್ಲಿ ಅಭ್ಯರ್ಥಿಗಳು ತೀರಿಕೊಂಡು ಚುನಾವಣೆ ಬಂದಿದೆ. ಇಲ್ಲಿ ಪ್ರತಾಪಗೌಡ ತೀರಿಕೊಂಡಿಲ್ಲ . ಆದರೆ ಮತ ಹಾಕಿದ ಮತದಾರರನ್ನು ತೀರಿಕೊಳ್ಳುವಂತೆ ಮಾಡಿದ್ದಾರೆ  ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ವಿಚಿತ್ರ ರೀತಿಯ ಆರೋಪ ಮಾಡಿದ್ದಾರೆ.

ಬಸನಗೌಡರಲ್ಲಿ ಬಸವಣ್ಣನ ತತ್ವವಿದೆ. ಪ್ರತಾಪಗೌಡ ರಾಜೀನಾಮೆ ಕೊಡುವಾಗ ಮತದಾರರನ್ನು ಕೇಳಿಲ್ಲ ಬಾಂಬೆಗೆ ಹೋಗಿ ಸೆಲ್ ಆಗಿದ್ದಾರೆ. ನಾನು ನೀರಾವರಿ ಸಚಿವರಾಗಿದ್ದಾ ಪ್ರತಾಪಗೌಡರು ಒಮ್ಮೆ ಕ್ಷೇತ್ರದ ಬಗ್ಗೆ ಮಾತನಾಡಿಲ್ಲ. 5A ಕಾಲುವೆ ಹೋರಾಟಕ್ಕೆ ಪ್ರತಾಪಗೌಡ ಕಾಳಜಿ ಇಲ್ಲ. 5A ಕಾಲುವೆಯ ಬಗ್ಗೆ ಬಿಜೆಪಿಯವರು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದರು.

ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವವರು ಯಾರು? ಲೆಕ್ಕ ಕೊಟ್ಟ ಸಿದ್ದು

ಕೊರೊನಾ ಬಂದಾಗ ಕುಶಲಕರ್ಮಿಗಳಿಗೆ ಪರಿಹಾರ ಹಣ ನೀಡಿಲ್ಲ. ಡಿಕೆ ಡಿಕೆ ಎಂದು ಅಭಿಮಾನಿಗಳು ಕೂಗುತ್ತಿದ್ದಿರಾ. ಬಸನಗೌಡ ತುರವಿಹಾಳ ಕಾಂಗ್ರೆಸ್ ಪಕ್ಷ ಸೇರುವಾಗ ನಿಮಗೆ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಎಲ್ಲಾ ಧರ್ಮ ಜಾತಿಯ ಪಕ್ಷ. ಬಿಜೆಪಿ ನಾವು ಮುಂದು ನೀವು ಹಿಂದೂ ಅಂತಾರೆ. ಪ್ರತಾಪ್ ಗೌಡ ಒಂದು ಮಾತನ್ನೂ ಕೇಳದೆ ರಾಜಿನಾಮೆ ಕೊಟ್ಟು ಹೋಗಿದ್ದಾರೆ. ಈ ಬಾರಿಯಲ್ಲಾ ಮುಂದೆಯೂ ಪ್ರತಾಪ್ ಗೌಡ ಗೆಲ್ಲಲ್ಲ  ಎಂದು ಅಬ್ಬರಿಸಿದರು.

ಪ್ರತಾಪ್ ಗೌಡ ಒಂದು ದಿನ ಸಹ ಕ್ಷೇತ್ರದ ರೈತರ ಸಮಸ್ಯೆ ಬಗ್ಗೆ ಬಂದು ಮಾತನಾಡಲಿಲ್ಲ. ಯಾವ ರೈತರ ಬಗ್ಗೆನೂ ಪ್ರತಾಪ್ ಗೌಡಗೆ ಕಾಳಜಿಯಿಲ್ಲ. 5 ಎ ಕಾಲುವೆ ಹೋರಾಟಕ್ಕೆ ಯಾರೂ ಬೆಲೆ ಕೊಡುತ್ತಿಲ್ಲ. ಪವರ್ ಮಂತ್ರಿಯಾಗಿದ್ದಾಗ ಪವರ್ ಕಟ್ ಇತ್ತು ಈಗ ಯಾವುದೇ ಸಮಸ್ಯೆ ಇಲ್ಲಾ. ಕೊರೋನಾ ಲಾಕ್ ಡೌನ್ ವೇಳೆ ಯಾರಿಗೂ ಪರಿಹಾರ ನೀಡಲಿಲ್ಲ. ಪರಿಹಾರ ಕೊಡುತ್ತೇವೆ ಅಂತ ಸುಮ್ಮನೆ ಹೇಳಿ ಯಾರಿಗೂ ಕೊಟ್ಟಿಲ್ಲ ಎಂದು ಬಿಜೆಪಿಯನ್ನು ತರಾಟಗೆ ತೆಗೆದುಕೊಂಡರು.

ಕನಕಪುರ ಕ್ಷೇತ್ರದ ಬಗ್ಗೆ ಇರುವ ಅಭಿಮಾನ ನಿಮ್ಮ ಕ್ಷೇತ್ರದ ಮೇಲೂ ಇದೆ. ನೀವುಗಳೇ ಅಭ್ಯರ್ಥಿ ಅಂತ ತಿಳಿದು ಮತದಾನ ಮಾಡಬೇಕು  ಎಂದು ಡಿಕೆ ಶಿವಕುಮಾರ್ ಮನವಿ ಮಾಡಿಕೊಂಡರು.