Asianet Suvarna News Asianet Suvarna News

ಮಂಗಳವಾರ ಪ್ರಕಟವಾಗಲಿದೆ ಉಪಚುನಾವಣೆ ಫಲಿತಾಂಶ

  •  ಸಿಂದಗಿ ಮತ್ತು ಹಾನಗಲ್‌ ಉಪಚುನಾವಣೆ ಮತದಾನ ಶನಿವಾರ ಮುಕ್ತಾಯ
  • ಅ.30ರಂದು ನಡೆದ ಉಪಚುನಾವಣೆಯ ಫಲಿತಾಂಶ ನ.2ರಂದು ಪ್ರಕಟವಾಗಲಿದೆ.
karnataka by election results will be out on november 02 snr
Author
Bengaluru, First Published Nov 1, 2021, 7:40 AM IST
  • Facebook
  • Twitter
  • Whatsapp

 ವಿಜಯಪುರ/ಹಾವೇರಿ (ನ.01): ಸಿಂದಗಿ (Sindagi) ಮತ್ತು ಹಾನಗಲ್‌ ಉಪಚುನಾವಣೆ (Hanagal By Election) ಮತದಾನ ಶನಿವಾರ ಮುಕ್ತಾಯಗೊಂಡಿದ್ದು, ಮತದಾರ ತನ್ನ ನಿರ್ಣಯವನ್ನು ಮತಯಂತ್ರಗಳಲ್ಲಿ ಭದ್ರಪಡಿಸಿದ್ದಾನೆ. ಇದೀಗ ಯಾರ ಕೊರಳಿಗೆ ವಿಜಯಮಾಲೆ ಒಲಿಯಲಿದೆ ಎನ್ನುವ ಲೆಕ್ಕಾಚಾರಕ್ಕೆ ಕೇವಲ ಒಂದು ದಿನ ಮಾತ್ರ ಉಳಿದುಕೊಂಡಿದೆ. ಅ.30ರಂದು ನಡೆದ ಉಪಚುನಾವಣೆಯ ಫಲಿತಾಂಶ (By Election Result) ನ.2ರಂದು ಪ್ರಕಟವಾಗಲಿದೆ.

"

ಸಿಂದಗಿ (Sindagi) ಉಪ ಚುನಾವಣೆ (By election) ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿದ್ದು, ಮತಯಂತ್ರಗಳನ್ನು ಬಿಗಿ ಭದ್ರತೆಯೊಂದಿಗೆ ವಿಜಯಪುರ (Vijayapura) ನಗರದಲ್ಲಿರುವ ಸೈನಿಕ ಶಾಲೆಯ ಒಡೆಯರ್‌ ಹೌಸ್‌ನ ಸ್ಟ್ರಾಂಗ್‌ ರೂಂನಲ್ಲಿ (Strong Room) ಇಡಲಾಗಿದೆ. ಅದೇರೀತಿ ಹಾನಗಲ್‌ ಕ್ಷೇತ್ರದ ಮತಯಂತ್ರಗಳು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (Govt Engineering College) ಇರಿಸಲಾಗಿದ್ದು ಎರಡೂ ಕಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ : ಉಪ ಚುನಾವಣೆ ಬಗ್ಗೆ ವಿಶ್ವಾಸ

ಹಾನಗಲ್‌ನಲ್ಲಿ ಮತದಾನ ಹೆಚ್ಚಳ: ಹಾನಗಲ್ಲ (Hanagal) ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ (Assembly By Election) ಶನಿವಾರ ನಡೆದ ಮತದಾನದಲ್ಲಿ ಶೇ. 83.76ರಷ್ಟುಮತದಾನವಾಗಿದೆ. 1,05,525 ಪುರುಷ, 98,953 ಮಹಿಳೆ (woman) ಹಾಗೂ ಇತರ ಮೂವರು ಸೇರಿದಂತೆ 2,04,481 ಮತದಾರರು ಇದ್ದರು. ಅವರಲ್ಲಿ 88,981 ಪುರುಷ, 82,281 ಮಹಿಳೆ ಹಾಗೂ 2 ಇತರ ಮತದಾರರು ಸೇರಿದಂತೆ ಒಟ್ಟು 1,71,264 ಜನರು ಹಕ್ಕು ಚಲಾಯಿಸಿದ್ದಾರೆ.

ಸಿಂದಗಿಯಲ್ಲಿ ಪ್ರಬಲ ಸಮುದಾಯಗಳ ಓಲೈಕೆಗೆ ಬಿಜೆಪಿ- ಕಾಂಗ್ರೆಸ್ ಕಸರತ್ತು..!

ಸಿಂದಗಿಯಲ್ಲಿ ಕಡಿಮೆ ಮತದಾನ: ಸಿಂದಗಿ ವಿಧಾನಸಭಾ (Sindagi Constituency) ಕ್ಷೇತ್ರದಲ್ಲಿ ಇರುವ ಒಟ್ಟು 1,20,939 ಪುರುಷ, 1,13,466 ಮಹಿಳಾ ಮತ್ತು 32 ಇತರೆ ಮತದಾರರ ಸೇರಿದಂತೆ 2,34,437 ಮತದಾರರ ಪೈಕಿ 85,859 ಪುರುಷರು, 76,990 ಮಹಿಳಾ ಮತ್ತು 3 ಇತರೆ ಮತದಾರರು ಸೇರಿದಂತೆ 1,62,852 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಶೇ 69.41ರಷ್ಟುಮತದಾನವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ.70.85ರಷ್ಟುಮತದಾನವಾಗಿತ್ತು. ಕಳೆದ ಬಾರಿಗಿಂತ ಶೇ 1.44ರಷ್ಟುಕಡಿಮೆ ಮತದಾನವಾಗಿದೆ.

ಗುಪ್ತಚರ ವರದಿ ಪ್ರಕಾರ ಕೇಸರಿ ಅಲೆ:  ಈ ನಡುವೆ ಹಾನಗಲ್ (Hanagal) ಹಾಗೂ ಸಿಂದಗಿ ಕ್ಷೇತ್ರಗಳ ಉಪಚುನಾವಣೆಗೆ (By Election) ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ಆಂತರಿಕ ವರದಿಯ ತಿರುಳು ಬಿಜೆಪಿ (BJP) ಹೈಕಮಾಂಡ್‌ ತಲುಪಿದೆಯಂತೆ. ಉಭಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲವು ಖಚಿತ ಎಂಬ ಮಾತು ರಾಜ್ಯ ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

ಅಶೋಕ್ ಪ್ಲ್ಯಾನ್ ಸಕ್ಸಸ್: ಅಧಿಕಾರದಿಂದ ಕಾಂಗ್ರೆಸ್‌ನ್ನು ದೂರ ಇಟ್ಟ ಜೆಡಿಎಸ್, ಬಿಜೆಪಿ

ಉಭಯ ಕ್ಷೇತ್ರಗಳಲ್ಲೂ ಉಪಚುನಾವಣೆಯ ಆರಂಭದ ಹಂತದಲ್ಲಿದ್ದ ಪರಿಸ್ಥಿತಿ ಈಗಿಲ್ಲ. ಆರಂಭದಲ್ಲಿ ಬಿಜೆಪಿಗೆ ತುಸು ಕಷ್ಟಎಂಬಂತಿತ್ತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja Bommai) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರು ಭರ್ಜರಿ ಪ್ರಚಾರ ಕೈಗೊಂಡ ಬಳಿಕ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಚಿತ್ರಣವೇ ಬದಲಾಗಿದೆ. ಆನೆ ಬಲ ಬಂದಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿರುವುದು ಪಕ್ಷಕ್ಕೆ ಗೆಲುವು ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ ಎಂದು ಬಿಜೆಪಿ ಮುಖಂಡರು ಹರ್ಷದಿಂದ ಹೇಳುತ್ತಿದ್ದಾರೆ.

ಕಾಂಗ್ರೆಸ್‌ಗೂ ಗೆಲುವಿನ ವಿಶ್ವಾಸ

ಕಾಂಗ್ರೆಸ್‌ ನಾಯಕರಲ್ಲಿಯೂ ಕೂಡ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಆದರೆ ಮತದಾರ ಪ್ರಭುವಿನ ನಿರ್ಣಯ ನಾಳೆಯ ಬಯಲಾಗಲಿದೆ

Follow Us:
Download App:
  • android
  • ios