ಬೆಂಗಳೂರು (ಜೂ.08):  ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಪಟ್ಟಿದ್ದು, ಎಲ್ಲರಿಗೂ ಅಭಿನಂದನೆಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. 

ಕಾಂಗ್ರೆಸ್ ನೂತನ ಶಾಸಕ ಮಸ್ಕಿ ಕ್ಷೇತ್ರದ ಬಸನಗೌಡ ತುರವಿಹಾಳ್‌ಗೆ  ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್  ಮಸ್ಕಿ ಕ್ಷೇತ್ರದ ಕಾರ್ಯಕರ್ತರ ಶ್ರಮ ಕಾಂಗ್ರೆಸ್ ಗೆಲುವಿಗೆ ಕಾರಣ, ಅದಕ್ಕಾಗಿ ನಿಮಗೆಲ್ಲರಿಗೂ ಅಭಿನಂದನೆ ಎಂದರು.  

ಇನ್ನು ಬೆಳಗಾವಿಯಲ್ಲಿ ಸ್ವಲ್ಪದರಲ್ಲಿ ಎಡವಿದ್ದೇವೆ. ನಮ್ಮ ಕ್ಯಾಂಡಿಡೇಟ್ ಗೆ ಓವರ್ ಕಾನ್ಫಿಡೆನ್ಸ್ ಇತ್ತು. ಕ್ಷೇತ್ರ ಅವರದ್ದೇ ಆಗಿದ್ದರಿಂದ ವಿಶ್ವಾಸವಿತ್ತು.  ಕಾರ್ಯಕರ್ತರು,ಮುಖಂಡರು ಕೆಲಸ ಮಾಡಿದ್ದರು. ಆದರೆ ಕಡಿಮೆ ಮಾರ್ಜಿನ್ ನಲ್ಲಿ ಸೋಲಬೇಕಾಯ್ತು. ಇದರಿಂದ ರಾಷ್ಟ್ರಕ್ಕೆ ಒಂದು ದೊಡ್ಡ ಮೆಸೇಜ್ ಹೋಗಿದೆ. ನಮ್ಮ ಶಕ್ತಿ ಏನೆಂದು ತೋರಿಸಿಕೊಟ್ಟಿದ್ದೇವೆ. ಬಸವಕಲ್ಯಾಣದಲ್ಲೂ ಗೆಲ್ಲುವ ಅವಕಾಶವಿತ್ತು. ಅಲ್ಲಿನ ನಮ್ಮ ನಾಯಕರು ಆಸ್ಪತ್ರೆ ಸೇರಿದ್ದರಿಂದ ಸಮಸ್ಯೆಯಾಯ್ತು ಎಂದರು. 

ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದರೆ ಒಳ್ಳೇದು ಎಂದ ಮುಖಂಡ .

ಸೋಲಿನ ಕ್ಷೇತ್ರಗಳಿಗೆ ಒಂದು ತಂಡ : ಸೋಲಿನ ಕ್ಷೇತ್ರಗಳಿಗೆ ಒಂದು ತಂಡ ಕಳಿಸುತ್ತೇನೆ. ಅಲ್ಲಿನ ಮಾಹಿತಿಯನ್ನ ಪಡೆದುಕೊಳ್ಳುತ್ತೇನೆ. ಯಾಕೆಂದರೆ ಮುಂದೆ ನಮಗೆ ಇದು ಉಪಯೋಗ ಆಗಲಿದೆ. ಪ್ರತಿ ಅಸೆಂಬ್ಲಿ ಕ್ಷೇತ್ರಕ್ಕೆ ನಮ್ಮದು ಒಂದು ಟೀಂ ಕಳಿಸಿದ್ದೇನೆ.  ಪ್ರತಿ ಕ್ಷೇತ್ರದಿಂದ ಮಾಹಿತಿ ತರಿಸಿಕೊಳ್ಳುತ್ತೇನೆ. ಸರಿಯಾಗಿ ಕ್ಷೇತ್ರದಲ್ಲಿ ಶಿಸ್ತು ಪಾಲಿಸದಿದ್ದರೆ ಕ್ರಮ ಕೈಗೊಳ್ಳುತ್ತೇನೆ.  ಡಿಸಿಪ್ಲೀನ್ಗೆ ನಾವು ಒತ್ತು ಕೊಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು. 

ಲಸಿಕೆ ಬಗ್ಗೆ ಪ್ರಸ್ತಾಪ : ಕೇಂದ್ರದಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ವಿಚಾರದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಚಿತ ಲಸಿಕೆ ನೀಡುವಂತೆ ಹೋರಾಟ ಮಾಡಿದ್ದೆವು.  ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು.  ಜೊತೆಗೆ ಸುಪ್ರೀಂ ಕೋರ್ಟ್ ಇವತ್ತು ನ್ಯಾಯಕೊಡಿಸಿದೆ.  ಸುಪ್ರೀಂಕೋರ್ಟ್ ಗೆ ನಾವೆಲ್ಲರೂ ತಲೆಬಾಗಬೇಕಿದೆ. ಜನರ ಜೀವ ಉಳಿಸಲು ಸುಪ್ರೀಂ ಮುಂದಾಗಿದೆ.  ಕೇಂದ್ರಕ್ಕೆ ಎಚ್ಚರಿಕೆಯನ್ನ ರವಾನಿಸಿತ್ತು, ಹಾಗಾಗಿ ಇಂದು ಲಸಿಕೆ ನೀಡಲು ಕೇಂದ್ರ ಮುಂದಾಗಿದೆ ಎಂದು ಡಿಕೆಶಿ ಹೇಳಿದರು. 

ಇನ್ನು ಅಭಿನಂದನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ದೃವನಾರಾಯಣ್, ಸಲೀಂ ಅಹ್ಮದ್, ರಾಯಚೂರು ಕಾಂಗ್ರೆಸ್ ‌ಮುಖಂಡರು ಭಾಗಿಯಾಗಿ ತುರವಿಹಾಳ್ ಅವರನ್ನು ಅಭಿನಂದಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona