ಬೆಂಗಳೂರು(ಡಿ. 05)  ಕರ್ನಾಟಕದ ಉಪಸಮರ ಮುಗಿದಿದ್ದು  ಸಿ ವೋಟರ್ ಸಮೀಕ್ಷೆ ಬಿಜೆಪಿಗೆ ಮುನ್ನಡೆ ನೀಡಿದೆ.  ಬಿಜೆಪಿ  9 ರಿಂದ 12 ಸ್ಥಾನದಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದ್ದರೆ  ಕಾಂಗ್ರೆಸ್ ಗೆ 3 ರಿಂದ 6 ಸ್ಥಾನ ದೊರೆಯಲಿದೆ ಎಂದು ಹೇಳಿದೆ.

ಜೆಡಿಎಸ್ 1 ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಿ-ವೋಟರ್ ಸಮೀಕ್ಷೆ  ಹೇಳಿದೆ. ಪಕ್ಷೇತರ  ಶೂನ್ಯ ಫಲಿತಾಂಶ ಬರಲಿದೆ ಎಂದು ಹೇಳುವ ಮೂಲಕ ಹೊಸಕೋಟೆ ಶರತ್ ಬಚ್ಚೇಗೌಡ ಗೆಲುವಿನ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಣೆ ಮಾಡಿದೆ.

ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್ ಆಗಿದೆ?

ಯಡಿಯೂರಪ್ಪ ಸರ್ಕಾರ ಸೇಫ್ ಎನ್ನುವ ಸ್ಷಷ್ಟ ಮಾಹಿತಿಯನ್ನು ಸಮೀಕ್ಷೆ ನೀಡಿದೆ. ಹಾಗಾದರೆ ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಇಲ್ಲಿದೆ ವಿವರ

1. ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಪಾಲಯ್ಯ (ಬಿಜೆಪಿ) 

2.  ಕೆ.ಆರ್.ಪುರ –ಭೈರತಿ ಬಸವರಾಜ್ (ಬಿಜೆಪಿ)

3. ಗೋಕಾಕ– ರಮೇಶ್ ಜಾರಕಿಹೊಳಿ (ಬಿಜೆಪಿ) 

4. ಅಥಣಿ– ಮಹೇಶ್ ಕುಮಠಳ್ಳಿ (ಬಿಜೆಪಿ)

5.  ಹಿರೇಕೆರೂರು– ಬಿ.ಸಿ.ಪಾಟೀಲ್ (ಬಿಜೆಪಿ)

6.  ಯಲ್ಲಾಪುರ– ಶಿವರಾಮ ಹೆಬ್ಬಾರ್ (ಬಿಜೆಪಿ)

7. ಯಶವಂತಪುರ– ಎಸ್ ಟಿ ಸೋಮಶೇಖರ್ (ಬಿಜೆಪಿ)

8.  ವಿಜಯನಗರ– ಆನಂದ್‌ಸಿಂಗ್ (ಬಿಜೆಪಿ)

9.  ಹೊಸಕೋಟೆ– ಎಂಟಿಬಿ ನಾಗರಾಜ್ (ಬಿಜೆಪಿ)

10.  ಚಿಕ್ಕಬಳ್ಳಾಪುರ – ಡಾ. ಕೆ. ಸುಧಾಕರ್‌ (ಬಿಜೆಪಿ)

11.  ಕಾಗವಾಡ - ರಾಜು ಕಾಗೆ (ಕಾಂಗ್ರೆಸ್‌)

12.  ಕೆಆರ್‌ ಪೇಟೆ - ಕೆಸಿ ನಾರಾಯಣ ಗೌಡ (ಬಿಜೆಪಿ) ಮತ್ತು ದೇವರಾಜ್‌ (ಜೆಡಿಎಸ್‌) ನಡುವೆ ನೆಕ್ ಟು ನೆಕ್ ಫೈಟ್

13.  ಶಿವಾಜಿನಗರ - ರಿಜ್ವಾನ್‌ ಅರ್ಷದ್‌ (ಕಾಂಗ್ರೆಸ್‌) ಮತ್ತು ಎಂ. ಸರವಣ (ಬಿಜೆಪಿ) ನಡುವೆ  ಸಮಬಲ

14. ರಾಣೇಬೆನ್ನೂರು - ಕೆ.ಬಿ. ಕೋಳಿವಾಡ್‌ (ಕಾಂಗ್ರೆಸ್‌) ಮತ್ತು ಅರುಣ್‌ ಕುಮಾರ್‌ ಪೂಜಾರ (ಬಿಜೆಪಿ) ನಡುವೆ ನೇರಾನೇರ

15  ಹುಣಸೂರು - ಎಚ್‌ಪಿ ಮಂಜುನಾಥ್‌ (ಕಾಂಗ್ರೆಸ್‌)