ಬೆಂಗಳೂರು, [ಡಿ.05]: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಇಂದು [ಗುರುವಾರ] ಸಂಜೆ 6 ಗಂಟೆಗೆ ಪೂರ್ಣಗೊಂಡಿದೆ. 

ಕೆಲ ಕಡೆ ಸಣ್ಣ-ಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಕಂಡುಬಂದಿದ್ದನ್ನು ಹೊರತುಪಡಿಸಿದರೆ ಉಪಚುನಾವಣೆಯ ಮತದಾನ ಬಹುತೇಕ ಶಾಂತಯುತವಾಗಿದೆ.

ಮುಗಿದ ಉಪಸಮರ: ಸಿ-ವೋಟರ್ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು?

ಮತದಾರ 219 ಅಭ್ಯರ್ಥಿಗಳ ಹಣೆ ಬರಹ ಬರೆದಿದ್ದು, ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿದ್ದು,.ಡಿ.9ರಂದು ಮತ ಎಣಿಕೆಯ ದಿನದಂದು ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ. 

ಕೋಟಿ ಕುಬೇರರ ಕ್ಷೇತ್ರವಾದ ಹೊಸಕೋಟೆಯಲ್ಲಿ ಅತಿಹೆಚ್ಚು ಮತದಾನವಾಗಿದ್ರೆ, ವಿದ್ಯಾವಂತರು, ತಿಳಿದವರು ಎನ್ನುವ ಬೆಂಗಳೂರು ವ್ಯಾಪ್ತಿಯ ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆಯೇ ಕಡಿಮೆ ಮತದಾನವಾಗಿದೆ. 

ಮತದಾನ ಮುಗಿದಿದ್ದೆ ತಡ  ವಿವಿಧ ಸುದ್ದಿವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿತ್ತಿವೆ. ಅಷ್ಟೇ ಅಲ್ಲದೇ ಆಯಾ ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರಗಳು ಸಹ ನಡೆದಿವೆ.

ಒಟ್ಟಾರೆ ಅಂದ್ರೆ 15 ಕ್ಷೇತ್ರಗಳನ್ನು ಒಗ್ಗೂಡಿಸಿದಾಗ  ಶೇ.66.49ರಷ್ಟು ಮತದಾನವಾಗಿದೆ ಎಂದು ಕರ್ನಾಟಕ ಚುನಾವಣೆ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.  ಇನ್ನು 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಿಂತ ಉಪಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ.

ಹಾಗಾದ್ರೆ 15 ಕ್ಷೇತ್ರಗಳಲ್ಲಿ ಎಷ್ಟೆಷ್ಟು ಶೇಕಡವಾರು ಮತದಾನವಾಗಿದೆ..? 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಈ 15 ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್ ಆಗಿತ್ತು..? ಎನ್ನುವ ಸಂಪೂಣರ್ಣ ಮಾಹಿತಿ ಈ ಕೆಳಗಿನಂತಿದೆ.

ಉಪಚುನಾವಣೆ ಹಾಗೂ 2018ರ ಸಾರ್ವತ್ರಿಕ ಚುನಾವಣೆಯ ಶೇಕಡವಾರು ಮತದಾನ ಇಂತಿದೆ.

1. ಯಶವಂತಪುರ [ಬೆಂಗಳೂರು] - ಶೇ.54.13ರಷ್ಟು ಮತದಾನ, [2018ರಲ್ಲಿ ಮತದಾನ  ಶೇ. 60.47]
2. K.R.ಪುರಂ[ಬೆಂಗಳೂರು] - ಶೇ.43.25ರಷ್ಟು ಮತದಾನ, [2018ರಲ್ಲಿ ಮತದಾನ ಶೇ. 47.06]
3. ಶಿವಾಜಿನಗರ [ಬೆಂಗಳೂರು]- ಶೇ.44.6ರಷ್ಟು ಮತದಾನ, [2018ರಲ್ಲಿ ಮತದಾನ  ಶೇ. 54.1]
4. ಮಹಾಲಕ್ಷ್ಮೀ ಲೇಔಟ್[ಬೆಂಗಳೂರು] - ಶೇ.50.92 ಮತದಾನ, 2018ರಲ್ಲಿ ಮತದಾನ ಶೇ. 56]
5. ಚಿಕ್ಕಬಳ್ಳಾಪುರ - ಶೇ.86.4ರಷ್ಟು ಮತದಾನ, [2018ರಲ್ಲಿ ಮತದಾನ ಶೇ. 87.86]
6. ಗೋಕಾಕ್ [ಬೆಳಗಾವಿ]- ಶೇ.73.8ರಷ್ಟು ಮತದಾನ , [2018ರಲ್ಲಿ ಮತದಾನ ಶೇ. 71.79] 
7. ಕಾಗವಾಡ [ಬೆಳಗಾವಿ]- ಶೇ.76.27ರಷ್ಟು ಮತದಾನ , [2018ರಲ್ಲಿ ಮತದಾನ  ಶೇ. 57] 
8. ಅಥಣಿ [ಬೆಳಗಾವಿ]- ಶೇ.75.23ರಷ್ಟು ಮತದಾನ, [2018ರಲ್ಲಿ ಮತದಾನ  ಶೇ.80] 
9. K.R.ಪೇಟೆ [ಮಂಡ್ಯ] - ಶೇ.80ರಷ್ಟು ಮತದಾನ, [2018ರಲ್ಲಿ ಮತದಾನ ಶೇ.83.86] 
10. ಹೊಸಕೋಟೆ [ಬೆಂಗಳೂರು ಗ್ರಾಮಾಂತರ]- ಶೇ.90.44ರಷ್ಟು ಮತದಾನ. [2018ರಲ್ಲಿ ಮತದಾನ ಶೇ.88.92]
11. ಯಲ್ಲಾಪುರ [ಉತ್ತರ ಕನ್ನಡ]- ಶೇ.77.52ರಷ್ಟು ಮತದಾನ , [2018ರಲ್ಲಿ ಮತದಾನ ಶೇ. 79.08]
12. ವಿಜಯನಗರ [ಬಳ್ಳಾರಿ] - ಶೇ.64.95ರಷ್ಟು ಮತದಾನ, [2018ರಲ್ಲಿ ಮತದಾನ ಶೇ. 72.05] 
13. ಹಿರೇಕೆರೂರು [ಹಾವೇರಿ]- ಶೇ.78.63ರಷ್ಟು ಮತದಾನ, [2018ರಲ್ಲಿ ಮತದಾನ ಶೇ. 77.04]
14. ರಾಣೆಬೆನ್ನೂರು[ಹಾವೇರಿ] - ಶೇ.73.53ರಷ್ಟು ಮತದಾನ, [2018ರಲ್ಲಿ ಮತದಾನ ಶೇ. 77.04] 
15. ಹುಣಸೂರು [ಮೈಸೂರು]- ಶೇ.80.17ರಷ್ಟು ಮತದಾನ, [2018ರಲ್ಲಿ ಮತದಾನ  ಶೇ.82.73]